ಸೆ.9: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

ಬೆಂಗಳೂರು, ಸೆ.9: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

16.15: ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಸುಬ್ರಮಣ್ಯ ಸ್ವಾಮಿ ಕೇಂದ್ರಕ್ಕೆ ಆಗ್ರಹಿಸಿದ್ದಾರೆ. ಎಲ್ ಟಿಟಿಐ ನಾಯಕ ತಿಲಪೀನ್ ಅವರ ಸನ್ಮಾನ ಸಮಾರಂಭವನ್ನು ರದ್ದುಪಡಿಸಲು ಜಯಲಲಿತಾ ಸರ್ಕಾರ ವಿಫಲವಾಗಿರುವುದಕ್ಕೆ ಸ್ವಾಮಿ ಕಿಡಿಕಾರಿದ್ದಾರೆ.
16.00: ಪಾಕಿಸ್ತಾನದ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ಬೌಲಿಂಗ್ ಶೈಲಿ ಐಸಿಸಿ ನಿಯಮ ಮೀರಿದ್ದರಿಂದ ಅಮಾನತುಗೊಂಡಿದ್ದಾರೆ. ಐಸಿಸಿ ದೊಡ್ಡ ತಿಮಿಂಗಲದ ಬೇಟೆಯಾಡಿದೆ ಎಂದು ಮಾಜಿ ಆಟಗಾರ ಬಿಷನ್ ಸಿಂಗ್ ಬೇಡಿ ಪ್ರತಿಕ್ರಿಯಿಸಿದ್ದಾರೆ.

Updates India, International News in Brief Sept 09

15.45: ಎಬೋಲಾ ಭೀತಿ ಮತ್ತೊಮ್ಮೆ ಮುಂದುವರೆದಿದ್ದು ಎಬೋಲಾ ಪಾಸಿಟಿವ್ ಎಂದು ಗುರುತಿಸಿದ ನಾಲ್ಕನೇ ರೋಗಿಯನ್ನು ಆಫ್ರಿಕಾದಿಂದ ಅಮೆರಿಕಕ್ಕೆ ಕಳಿಸಲಾಗಿದೆ.

15.30: ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರ ಮನೆ ಮುಂದೆ ದೆಹಲಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆಯಷ್ಟೇ ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಅವರಿಗೆ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.[ವಿವರ ಇಲ್ಲಿದೆ]

14.20: ಚಿಲಿ ಸರ್ಕಾರ ಮೊದಲ ಬಾರಿಗೆ ಗಾಂಜಾ(marijuana)ಬೆಳೆಯರು ಅನುಮತಿ ನೀಡಿದೆ. ಆದರೆ, ಮೆಡಿಸಿನ್ ಹಾಗೂ ಸಂಶೋಧನೆಗಾಗಿ ಮಾತ್ರ ಬಳಕೆ ಮಾಡಲು ಅನುಮತಿ ನೀಡಿದೆ.

13.50: ರಾಷ್ಟ್ರಪತಿ ಪ್ರಣಬ್ ಮುಖರ್ಜಿಗಳಿಗೆ ಸ್ಟಿಂಗ್ ಆಪರೇಷನ್ ಸಿಡಿ ಕಳಿಸುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಎಎಪಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆಗೆ ಮುಂದಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಅರೋಪ ಮಾಡಿದ್ದರು.

12.15: ಶಿವಸೇನಾ ಕಾರ್ಪೊರೇಟರ್ ಸ್ನೇಹಲ್ ಅಂಬೇಕರ್ ಅವರು ಮುಂಬೈನ ಮೊದಲ ದಲಿತ ಮಹಿಳಾ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

11.45: ದೆಹಲಿಯಲ್ಲಿ ಇ ರಿಕ್ಷಾಗಳ ಮೇಲಿನ ನಿಷೇಧ ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪುನರುಚ್ಚರಿಸಿದೆ.

9.50: ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಹಾಗೂ ದಿಗ್ವಿಜಯ್ ಸಿಂಗ್ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಂಚು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬೇನಿ ಪ್ರಸಾದ್ ವರ್ಮ ಹೇಳಿದ್ದಾರೆ.
9.40: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಶ್ವೇತಭವನಕ್ಕೆ ಸೆ.29 ಹಾಗೂ 30ರಂದು ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ.

Rahul Gandhi

9.35: ದೆಹಲಿಯಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಏರುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳಿವೆ. ರಾಜ್ಯಪಾಲ ಗವರ್ನರ್ ಲೆ. ನಜೀಬ್ ಜಂಗ್ ಅವರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದ್ದು, ಬಹುಮತ ವಿರುವ ಪಕ್ಷಕ್ಕೆ ಆಹ್ವಾನ ನೀಡುವಂತೆ ಸೂಚಿಸಲಾಗಿದೆ.
9.20: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ISIS ಉಗ್ರರ ವಿರುದ್ಧ ದಾಳಿಯ ನೀಲನಕ್ಷೆ ತಯಾರಿಸುತ್ತಿರುವ ಸುದ್ದಿ ಬಂದಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+