India Vs Pakistan: ಭಾರತ & ಪಾಕಿಸ್ತಾನಕ್ಕೆ ಶಾಂತಿಯ ಪಾಠ ಮಾಡಿದ ವಿಶ್ವಸಂಸ್ಥೆ
ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೊಂದು ಯುದ್ಧ ನಡೆಯುವ ಎಲ್ಲಾ ಲಕ್ಷಣ ಈಗ ಗೋಚರಿಸುತ್ತಿದೆ. ಕಾಶ್ಮೀರದ ಪಹಲ್ಗಾಮ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಪರಿಸ್ಥಿತಿ ಕೈಮೀರಿ ಹೋಗಿದ್ದು, ಎರಡೂ ದೇಶಗಳು ಯಾವುದೇ ಕ್ಷಣದಲ್ಲಿ ಯುದ್ಧ ಆರಂಭಿಸುವ ಭೀತಿ ಆವರಿಸಿದೆ. ಇಂತಹ ಸಮಯದಲ್ಲಿ ಜಾಗತಿಕ ಸಮುದಾಯ ಭಾರತದ ಪರವಾಗಿ ನಿಲ್ಲುತ್ತಿದ್ದು, ಉಗ್ರರಿಗೆ ತಕ್ಕ ಪಾಠ ಕಲಿಸಲು ಆಗ್ರಹಿಸುತ್ತಿದೆ. ಆದರೆ ವಿಶ್ವಸಂಸ್ಥೆ ಮಾತ್ರ ಭಾರತ & ಪಾಕಿಸ್ತಾನಕ್ಕೆ ಶಾಂತಿಯ ಪಾಠ ಮಾಡಿದೆ.
ಜಾಗತಿಕ ಮಟ್ಟದಲ್ಲಿ 2 ದೊಡ್ಡ ಯುದ್ಧಗಳು ನಡೆಯುತ್ತಿದ್ದು, ಒಂದು ಕಡೆ ಇಸ್ರೇಲ್ & ಗಾಜಾ ನಡುವೆ ತಿಕ್ಕಾಟ ನಡೆಯುತ್ತಿದ್ದರೆ ಇನ್ನೊಂದು ಕಡೆ ರಷ್ಯಾ & ಉಕ್ರೇನ್ ಕೂಡ ಬಡಿದಾಡ್ತಿವೆ. ಇದರ ನಡುವೆ ಮತ್ತೊಂದು ಯುದ್ಧ ಕೂಡ ಶುರುವಾದರೆ ಜಾಗತಿಕ ಸಮುದಾಯ ನಲುಗಿ, ಬೆಚ್ಚಿ ಬೀಳುವುದು ಗ್ಯಾರಂಟಿ. ಇಂತಹ ಸಮಯದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿದ್ದು ಭಾರತ & ಪಾಕಿಸ್ತಾನ ನಡುವಿನ ತಿಕ್ಕಾಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದರ ಜೊತೆಗೆ ಶಾಂತಿಯ ಪಾಠವನ್ನೂ ಮಾಡಿದೆ ವಿಶ್ವಸಂಸ್ಥೆ.

ಉಗ್ರರ ಕಾರ್ಖಾನೆ ಆಗಿದೆ ಪಾಕಿಸ್ತಾನ!
ಪಾಪಿ ಪಾಕಿಸ್ತಾನ ಉದ್ಧಾರ ಆಗುವ ಕೆಲಸಕ್ಕಿಂತ ಹಾಳು ಮಾಡುವ ಕೆಲಸವನ್ನೇ ಹೆಚ್ಚಿಸಿದೆ. ಪಾಕಿಸ್ತಾನ ಉಗ್ರರ ಕಾರ್ಖಾನೆ ಆಗಿದ್ದು, ಪದೇ ಪದೇ ಅಲ್ಲಿಂದಲೇ ಉಗ್ರರು ನುಸುಳಿ ಬರ್ತಾ ಇದ್ದಾರೆ. ಈಗಲೂ ಪಾಕಿಸ್ತಾನದ ಮೂಲಕ ನುಗ್ಗಿ ಬಂದಿದ್ದ ಉಗ್ರರು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ದಾಳಿ ನಡೆಸಿ 26 ಜನರನ್ನ ಕೊಲೆ ಮಾಡಿದ್ದಾರೆ.
ಪ್ರವಾಸಕ್ಕೆ ಎಂದು ಪಹಲ್ಗಾಮ್ ಪ್ರದೇಶಕ್ಕೆ ಹೋಗಿದ್ದ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಪ್ರಜೆಗಳು, ಕಾಶ್ಮೀರದ ಸುಂದರ ವಾತಾವರಣದಲ್ಲಿ ಸುತ್ತಾಡುವ ಸಮಯದಲ್ಲೇ ಪಾಪಿ ಉಗ್ರರು ದಿಢೀರ್ ಗನ್ ಹಿಡಿದು ನುಗ್ಗಿ ಅಮಾಯಕರ ಮೇಲೆ ಶೂಟ್ ಮಾಡಿ ಹತ್ಯೆ ಮಾಡಿದ್ದರು. ಹೀಗಿದ್ದಾಗ ವಿಶ್ವಸಂಸ್ಥೆ ಕೂಡ ಉಗ್ರರ ದಾಳಿಯನ್ನ ಖಂಡಿಸಿದ್ದು, ಪರಿಸ್ಥಿತಿಯನ್ನು ಭಾರತ & ಪಾಕಿಸ್ತಾನ ಸೂಕ್ತವಾಗಿ ನಿಭಾಯಿಸಲಿ ಎಂಬ ಸಲಹೆ ನೀಡಿದೆ.












Click it and Unblock the Notifications