Get Updates
Get notified of breaking news, exclusive insights, and must-see stories!

ಭಾರತದಲ್ಲಿ 2020ಕ್ಕೆ ಅಂತರ್ಜಾಲ ಬಳಕೆದಾರರ ಸ್ಫೋಟ: ಉಮಂಗ್ ಬೇಡಿ

ಲಂಡನ್, ಜೂನ್ 20: ಲಂಡನ್ ನಲ್ಲಿ ನಡೆಯುತ್ತಿರುವ ಯುಕೆ-ಇಂಡಿಯಾ ಲೀಡರ್ ಶಿಪ್ ಕಾನ್ಕ್ಲೇವ್ ನಲ್ಲಿ ಡೈಲಿ ಹಂಟ್ ಅಧ್ಯಕ್ಷ ಉಮಂಗ್ ಬೇಡಿ ಪಾಲ್ಗೊಂಡಿದ್ದಾರೆ. 'ಸೃಜನಶೀಲತೆಯ ಭವಿಷ್ಯ ಮತ್ತು ಮಾಧ್ಯಮ' ಎಂಬ ವಿಷಯದ ಮೇಲಿನ ವಿಶೇಷ ಪ್ಯಾನಲ್ ಚರ್ಚೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ವಿಶೇಷ ಆಹ್ವಾನಿತರ ಎದುರು ಚರ್ಚೆಯಲ್ಲಿ ಉಮಂಗ್ ಬೇಡಿ ಪಾಲ್ಗೊಂಡಿದ್ದು, ವೇದಿಕೆಯಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡ ಇದ್ದಾರೆ.

Daily Hunt President Umang Bedi addressing the gathering in UK-India Leadership Conclave

"2020ಕ್ಕೆ ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸ್ಪೋಟವಾಗಲಿದೆ. ನೀವು ಅವರ ಭಾಷೆಯಲ್ಲೇ ಅವರ ಜೊತೆಗೆ ಮಾತನಾಡಿದರೆ ಅದು ಅವರ ಹೃದಯ ತಟ್ಟಲಿದೆ," ಎಂದು ಉಮಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.

"ಇಂಟರ್ನೆಟ್ ಸಂಪರ್ಕ ಪಡೆಯಲಿರುವ 800 ಮಿಲಿಯನ್ ಜನರು ಯಾರು? ಈ ಪ್ಯಾನಲ್ ನಲ್ಲಿ ಭಾಗವಹಿಸಿರುವ ನಮ್ಮಂಥವರಾ? ಖಂಡಿತ ಅಲ್ಲ. ಇಂದಿನ ಪರಿಸ್ಥಿತಿಯನ್ನು ಪರಿಗಣಿಸಿದರೆ ಶೇ.50ರಷ್ಟು ಜನರು ಇಂಟರ್ನೆಟ್ಟಿನಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ಆದರೆ, ಇನ್ನೆರಡು ವರ್ಷಗಳಲ್ಲಿ ಚಿತ್ರಣವೇ ಬದಲಾಗಲಿದೆ. 10ರಲ್ಲಿ 9 ಜನರು ತಮ್ಮ ಮಾತೃಭಾಷೆಯಲ್ಲಿ ಮಾಹಿತಿಗಾಗಿ ಆಗ್ರಹಿಸಲಿದ್ದಾರೆ. ಅವರು 2 ಟಯರ್ ಮತ್ತು 3 ಟಯರ್ ನಗರದ ಜನರು. ನಾವು ಜಿಯೋಗೆ ಧನ್ಯವಾದ ಹೇಳಲೇಬೇಕು. ಅವರಿಂದಾಗಿ ಕಡಿಮೆ ದರದಲ್ಲಿ ಇಂಟರ್ನೆಟ್ ಡೇಟಾ ಸಾಮಾನ್ಯ ಜನರಿಗೆ ಸಿಗುವಂತಾಗಿದೆ. ಅವರೆಲ್ಲ ಮೊಬೈಲ್ ಮೂಲಕ ಇಂಟರ್ನೆಟ್ ಸಂಪರ್ಕ ಸಾಧಿಸಿದ್ದಾರೆ," ಎಂದು ಉಮಂಗ್ ಬೇಡಿ ಹೇಳಿದರು.

ಭಾರತದಲ್ಲಿ ತಾಂತ್ರಿಕ ತೊಂದರೆಗಳು ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಬೇಡಿ, "20 ಕೋಟಿ ಜನರು ಭಾರತದಲ್ಲಿ ಪ್ರಾದೇಶಿಕ ಭಾಷೆಗಳಲ್ಲೇ ಅಂತರ್ಜಾಲ ಬಳಸುತ್ತಿದ್ದಾರೆ. ತಂತ್ರಜ್ಞಾನದಲ್ಲಿರುವ ಅಡೆತಡೆಗಳು ವಿಷಯ-ವಸ್ತುಗಳನ್ನು ಸೃಷ್ಟಿಸಲು ಅವಕಾಶ ಸೃಷ್ಟಿಸಿದೆ," ಎಂದವರು ವಿಶ್ಲೇಷಿಸಿದರು.

"ಜನರ ಕಣ್ಸೆಳೆಯಲು ಸುದ್ದಿಗಳ ಗಾತ್ರ ಸಣ್ಣದಾಗುತ್ತಲೇ ಹೋಗುತ್ತಿದೆ. ಸದ್ಯ ಭಾರತೀಯ ಭಾಷೆಗಳ ವಸ್ತುಗಳನ್ನು ತಲುಪಿಸಲು ಪರ್ಯಾಯ ಜಾಗ ಬೇಕಿದೆ," ಎಂದು ಉಮಂಗ್ ಬೇಡಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+