ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

48 ಗಂಟೆಯಲ್ಲಿ 50,000ಕ್ಕೂ ಅಧಿಕ ಉಕ್ರೇನಿಯನ್ನರು ಪಲಾಯನ: ಮಕ್ಕಳು, ಮಹಿಳೆಯರೇ ಅಧಿಕ

|
Google Oneindia Kannada News

ಕೀವ್‌, ಫೆಬ್ರವರಿ 25: ಉಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಕಳೆದ 48 ಗಂಟೆಗಳಲ್ಲಿ 50,000 ಕ್ಕೂ ಹೆಚ್ಚು ಉಕ್ರೇನಿಯನ್ನರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್‌ ಮಾಹಿತಿ ನೀಡಿದೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಆತಂಕಕ್ಕೆ ಒಳಗಾದ ಉಕ್ರೇನ್ನಿಯನ್ನರು ಪಲಾಯನ ಮಾಡಲು ಆರಂಭ ಮಾಡಿದ್ದಾರೆ.

ರಷ್ಯಾ ತಮ್ಮ ರಾಜಧಾನಿ ಮತ್ತು ಇತರ ನಗರಗಳನ್ನು ಎರಡನೇ ದಿನವೂ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆ ಸಾವಿರಾರು ಉಕ್ರೇನಿಯನ್ನರು ಸುರಕ್ಷತೆಯ ಹುಡುಕಾಟದಲ್ಲಿ ಪಶ್ಚಿಮದ ದೇಶಗಳ ಗಡಿಗಳನ್ನು ದಾಟುವ ಮೂಲಕ ಪಲಾಯನ ಮಾಡುತ್ತಿದ್ದಾರೆ.

 ಉಕ್ರೇನ್‌ನಲ್ಲಿ ಭಾರತೀಯರಿಗೆ ಸಹಾಯವಾಣಿ: ಇಲ್ಲಿದೆ ವಿವರ ಉಕ್ರೇನ್‌ನಲ್ಲಿ ಭಾರತೀಯರಿಗೆ ಸಹಾಯವಾಣಿ: ಇಲ್ಲಿದೆ ವಿವರ

ಪೋಲೆಂಡ್, ಸ್ಲೋವಾಕಿಯಾ, ಹಂಗೇರಿ, ರೊಮೇನಿಯಾ ಮತ್ತು ಮೊಲ್ಡೊವಾ ಅಧಿಕಾರಿಗಳು ಈಗಾಗಲೇ ಉಕ್ರೇನಿಯನ್ನರು ಪಲಾಯನ ಮಾಡುವ ಸಾಧ್ಯತೆ ಹಿನ್ನೆಲೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಲವಾರು ಕಿಲೋಮೀಟರ್‌ಗಳವರೆಗೆ ಆಶ್ರಯ, ಆಹಾರ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಕಾನೂನು ಸಹಾಯವನ್ನು ಕೂಡಾ ಮಾಡಿದೆ.

Ukraine-Russia War: More Than 50,000 Ukrainians Flee Country in 48 Hours, Says UN

ಇನ್ನು ಕೊರೊನಾ ವೈರಸ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಯುದ್ಧದ ಹಿನ್ನೆಲೆ ಪೋಲೆಂಡ್, ಸ್ಲೋವಾಕಿಯಾ, ಹಂಗೇರಿ, ರೊಮೇನಿಯಾ ಮತ್ತು ಮೊಲ್ಡೊವಾ ಸರ್ಕಾರಗಳು ಕೋವಿಡ್‌ ಮಾರ್ಗಸೂಚಿಯನ್ನು ಸಡಿಲಿಕೆ ಮಾಡಿದೆ. ಪೋಲೆಂಡ್‌ನ ಮೆಡಿಕಾದಲ್ಲಿ ಹಲವಾರು ಉಕ್ರೇನ್ನಿಯನ್ನರು ಗಡಿ ದಾಟುತ್ತಿದ್ದಾರೆ ಎಂದು ಎಬಿಸಿ ನ್ಯೂಸ್‌ ವರದಿ ಮಾಡಿದೆ.

 ಉಕ್ರೇನ್‌ ದಾಳಿಯ ವಿರುದ್ಧ ಪ್ರತಿಭಟಿಸಿದ ನೂರಾರು ರಷ್ಯನ್ನರ ಬಂಧನ ಉಕ್ರೇನ್‌ ದಾಳಿಯ ವಿರುದ್ಧ ಪ್ರತಿಭಟಿಸಿದ ನೂರಾರು ರಷ್ಯನ್ನರ ಬಂಧನ

ಮಕ್ಕಳು ಹಾಗೂ ಮಹಿಳೆಯರೇ ಅಧಿಕ

ಉಕ್ರೇನಿಯನ್ನರು ಕಾಲ್ನಡಿಗೆಯಲ್ಲಿ ಮತ್ತು ಕಾರು ಮತ್ತು ರೈಲಿನ ಮೂಲಕ ಆಗಮಿಸಿದ್ದಾರೆ. ಪೋಲಿಷ್ ಅಧಿಕಾರಿಗಳು ಮತ್ತು ಸ್ವಯಂಸೇವಕರು ಅವರಿಗೆ ಆಹಾರ ಮತ್ತು ಬಿಸಿ ಪಾನೀಯಗಳನ್ನು ನೀಡುತ್ತಿದ್ದಾರೆ. ಉಕ್ರೇನ್ 18 ರಿಂದ 60 ವರ್ಷ ವಯಸ್ಸಿನ ಪುರುಷರನ್ನು ದೇಶವನ್ನು ತೊರೆಯುವುದನ್ನು ನಿಷೇಧಿಸಿದ ನಂತರ ಅದರ ಗಡಿಗೆ ಆಗಮಿಸುವ ಹೆಚ್ಚಿನ ಜನರು ಮಕ್ಕಳು ಹಾಗೂ ಮಹಿಳೆಯರು ಆಗಿದ್ದಾರೆ ಎಂದು ಸ್ಲೋವಾಕ್ ಪೊಲೀಸರು ಹೇಳಿದ್ದಾರೆ.

ದೇಶ ತೊರೆದವರು ಹೇಳುವುದು ಏನು?

ಕೆಲವರು ಈಗಾಗಲೇ ಪೋಲೆಂಡ್ ಮತ್ತು ಇತರ ಇಯು ರಾಷ್ಟ್ರಗಳಲ್ಲಿ ನೆಲೆಸಿರುವ ಸಂಬಂಧಿಕರನ್ನು ಸೇರಲು ಪ್ರಯತ್ನಿಸಿದ್ದಾರೆ. ಹಲವಾರು ಮಂದಿ ಉಕ್ರೇನಿಯನ್ನರು ಪೋಲೆಂಡ್‌ನಲ್ಲಿ ವಾಸವಾಗಿದ್ದಾರೆ. ಮಾರಿಕಾ ಸಿಪೋಸ್ ಎಂಬವರು ಪಶ್ಚಿಮ ಉಕ್ರೇನ್‌ನ ಹಂಗೇರಿಯನ್ ಗಡಿಯ ಸಮೀಪವಿರುವ ಕೊಸಾನ್ ಎಂಬ ಹಳ್ಳಿಯಿಂದ ಪಲಾಯನವಾಗಿದ್ದು, ಈ ಬಗ್ಗೆ ಎಬಿಸಿ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾವು ಎಲ್ಲವನ್ನೂ ಬಿಟ್ಟುಬಿಡಬೇಕಾಗಿತ್ತು, ನಮ್ಮ ಇಡೀ ಜೀವನದ ಸೊತ್ತು, ಕೆಲಸ ಬಿಡಬೇಕಾಯಿತು," ಎಂದು ನೊಂದು ನುಡಿದಿದ್ದಾರೆ. ಉಕ್ರೇನ್‌ನ ಬ್ಯಾಕಿ ಬ್ರೆಗ್‌ನಿಂದ ಆಗಮಿಸಿದ ಎರಿಕಾ ಬಾರ್ಟಾ "ಇನ್ನು ಮುಂದೆ ಮನೆಯಲ್ಲಿ ಸುರಕ್ಷಿತವಾಗಿಲ್ಲ. ಈ ಕಾರಣದಿಂದಾಗಿ ಪಲಾಯನ ಮಾಡಬೇಕಾಯಿತು," ಎಂದಿದ್ದಾರೆ. ಹಾಗೆಯೇ ಹಂಗೇರಿಯಲ್ಲಿ ಸಂಬಂಧಿಕರ ಆಶ್ರಯ ಪಡೆಯುವುದಾಗಿ ಹೇಳಿದರು.

ಭಾರತೀಯರ ಪ್ರಜೆಗಳಿಗೂ ಸಹಾಯ

Recommended Video

ಉಕ್ರೇನ್ ಗೆ ಸಹಾಯ ಮಾಡ್ತೀವಿ ಎಂದಿದ್ಧ ನ್ಯಾಟೋ, ರಷ್ಯಾ ಸೇನಾಬಲ ಕಂಡು ಭಯ ಪಡ್ತಾ? | Oneindia Kannada

ಇನ್ನು ಉಕ್ರೇನ್‌ನಲ್ಲಿ ಬಾಕಿ ಆಗಿರುವ ಭಾರತದ ಪ್ರಜೆಗಳನ್ನು ಸ್ಥಳಾಂತರ ಮಾಡುವ ಕಾರ್ಯಕ್ಕೂ ಕೂಡಾ ಪೋಲೆಂಡ್, ಸ್ಲೋವಾಕಿಯಾ, ಹಂಗೇರಿ, ರೊಮೇನಿಯಾ ಮತ್ತು ಮೊಲ್ಡೊವಾ ಸರ್ಕಾರವು ಸಹಾಯ ಮಾಡುತ್ತಿದೆ. ಇಂದು ಮಧ್ಯಾಹ್ನ 470 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‌ನಿಂದ ನಿರ್ಗಮಿಸಿದ್ದು, ಪೊರುಬ್ನೆ-ಸಿರೆಟ್ ಗಡಿ ಮೂಲಕ ರೊಮೇನಿಯಾವನ್ನು ಪ್ರವೇಶಿಸುತ್ತಾರೆ. ನಾವು ಗಡಿಯಲ್ಲಿರುವ ಭಾರತೀಯರನ್ನು ನೆರೆಯ ದೇಶಗಳಿಗೆ ಸ್ಥಳಾಂತರಿಸುತ್ತಿದ್ದೇವೆ. ಒಳನಾಡಿನಿಂದ ಬರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಮೊದಲ ಬ್ಯಾಚ್ ರೊಮೇನಿಯಾವನ್ನು ತಲುಪಿದೆ. ಇನ್ನು ಒಟ್ಟು 15 ಸಾವಿರಕ್ಕೂ ಅಧಿಕ ಮಂದಿ ಭಾರತೀಯರು ಉಕ್ರೇನ್‌ನಲ್ಲಿ ಇದ್ದಾರೆ ಎಂದು ವರದಿಯು ಹೇಳಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: More than 50,000 Ukrainians flee country in 48 hours, says UN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X