ರಷ್ಯಾ ದಾಳಿ: ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ
ಕೀವ್, ಮಾರ್ಚ್ 04: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುವಂತಿದೆ. ರಷ್ಯಾವು ಉಕ್ರೇನ್ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸುತ್ತಲೇ ಇದೆ. ಈಗ ಯುರೋಪ್‌ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್‌ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾದ ಸೈನಿಕರು ದಾಳಿ ಮಾಡಿದ್ದಾರೆ. ಈ ದಾಳಿಯ ನಂತರ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮೇಯರ್ ತಿಳಿಸಿದ್ದಾರೆ.
"ಯುರೋಪ್‌ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್‌ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಷ್ಯಾದ ಸೈನಿಕರ ದಾಳಿ ಮಾಡಿದ್ದು, ಈ ಬಳಿಕ ಶುಕ್ರವಾರ ಮುಂಜಾನೆ ಈ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ," ಎಂದು ಹತ್ತಿರದ ಪಟ್ಟಣ ಎನರ್‌ಗೋಡರ್‌ನ ಮೇಯರ್ ಡಿಮಿಟ್ರೋ ಓರ್ಲೋವ್ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಪಡೆಗಳು ಮತ್ತು ರಷ್ಯಾದ ಪಡೆಗಳ ನಡುವೆ ಭೀಕರ ಘರ್ಷಣೆ ನಡೆದಿದೆ ಎಂದು ಡಿಮಿಟ್ರೋ ಓರ್ಲೋವ್ ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸಾವುನೋವುಗಳು ಸಂಭವಿಸಿವೆ ಎಂದು ಕೂಡಾ ಹೇಳಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕ ಮಾಹಿತಿಯನ್ನು ನೀಡಿಲ್ಲ. ರಷ್ಯಾದ ಪಡೆಗಳು ಸ್ಥಾವರವನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಈ ಹಿಂದೆ ಉಕ್ರೇನಿಯನ್ ಅಧಿಕಾರಿಗಳು ಆರೋಪ ಮಾಡಿದ್ದರು. ಹಾಗೆಯೇ ರಷ್ಯಾದ ಸೇನೆ ಟ್ಯಾಂಕ್‌ಗಳೊಂದಿಗೆ ಪಟ್ಟಣವನ್ನು ಪ್ರವೇಶಿಸಿದ್ದಾರೆ ಎಂದು ವರದಿ ಆಗಿದ್ದವು.

ವಿಶ್ವ ಭದ್ರತೆಗೆ ಇದು ಬೆದರಿಕೆ ಎಂದ ಮೇಯರ್
"ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಕಟ್ಟಡಗಳು ಮತ್ತು ಘಟಕಗಳ ಮೇಲೆ ನಿರಂತರ ಶತ್ರುಗಳ ಶೆಲ್ ದಾಳಿಯ ಪರಿಣಾಮವಾಗಿ, ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ," ಎಂದುಎನರ್‌ಗೋಡರ್‌ನ ಮೇಯರ್ ಡಿಮಿಟ್ರೋ ಓರ್ಲೋವ್ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಹಾಗೆಯೇ ಇದು ವಿಶ್ವ ಭದ್ರತೆಗೆ ಬೆದರಿಕೆ ಎಂದು ಹೇಳಿದ್ದಾರೆ. ಆದರೆ ಅಧಿಕ ವಿವರ ನೀಡಿಲ್ಲ. ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡ ಕಾರಣದಿಂದಾಗಿ ಯಾವುದೇ ಗಂಭೀರ ಪರಿಣಾಮದ ಬಗ್ಗೆ ವರದಿ ಆಗಿಲ್ಲ.
ಉಕ್ರೇನ್ ಆಕ್ರಮಣವು ಒಂಬತ್ತನೇ ದಿನಕ್ಕೆ ಕಾಲಿಡುತ್ತಿದೆ. ಎರಡನೆಯ ಮಹಾಯುದ್ಧದ ನಂತರ ಇದು ಯೂರೋಪ್‌ನಲ್ಲಿ ನಡೆದ ಅತಿ ದೊಡ್ಡ ದಾಳಿಯಾಗಿದೆ. ಸಾವಿರಾರು ಜನರು ಸತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆ ವರದಿಗಳು ಹೇಳಿದೆ. ಇದು 1 ಮಿಲಿಯನ್ ಮಂದಿ ಉಕ್ರೇನ್‌ನಿಂದ ಪಲಾಯನ ಮಾಡಬೇಕಾದ ಸ್ಥಿತಿಯನ್ನು ಈ ಯುದ್ಧವು ಉಂಟು ಮಾಡಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ರಷ್ಯಾದ ಮೇಲೆ ಹಲವಾರು ದೇಶಗಳು ನಿರ್ಬಂಧಗಳನ್ನು ಹೇರಿಕೆ ಮಾಡಿದೆ. ಇದು ರಷ್ಯಾದ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಉಂಟು ಮಾಡಿದೆ.
Zaporizhzhia NPP is under fire! The entire Europe is at risk of a repeat of the nuclear catastrophe. Russians must stop fire! pic.twitter.com/P46YxKZZ0W
— Михайло Подоляк (@Podolyak_M) March 4, 2022
ಚರ್ನೋಬಿಲ್ ಸ್ಥಾವರ ಈಗಾಗಲೇ ರಷ್ಯಾ ವಶದಲ್ಲಿ
ಉಕ್ರೇನ್‌ನ ರಾಜಧಾನಿ ಕೀವ್‌ನ ಉತ್ತರಕ್ಕೆ ಸುಮಾರು 100 ಕಿಲೋಮೀಟರ್ (62 ಮೈಲುಗಳು) ದೂರದಲ್ಲಿರುವ ನಿಷ್ಕ್ರಿಯ ಚರ್ನೋಬಿಲ್ ಸ್ಥಾವರವನ್ನು ರಷ್ಯಾ ಈಗಾಗಲೇ ವಶಪಡಿಸಿಕೊಂಡಿದೆ. ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತದ ಸ್ಥಳವಾದ ಚೆರ್ನೋಬಿಲ್‌ನಲ್ಲಿರುವ ಸೌಲಭ್ಯಗಳ ಪ್ರಸ್ತುತ ಸ್ಥಿತಿಯು ಉಕ್ರೇನಿಯನ್ ಅಧಿಕಾರಿಗಳಿಗೆ ತಿಳಿದಿಲ್ಲ ಎಂದು ಸಲಹೆಗಾರ ಪೊಡೊಲ್ಯಾಕ್ ತಿಳಿಸಿದ್ದಾರೆ. ಇದಕ್ಕೂ ಮೊದಲೇ ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ವಶಪಡಿಸಿಕೊಳ್ಳಲು ರಷ್ಯಾದ ಪಡೆಗಳು ಪ್ರಯತ್ನಿಸುತ್ತಿವೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಿಸಿದ್ದರು.
ಉಕ್ರೇನ್‌ನ ರಾಜಧಾನಿ ಕೀವ್‌ನಿಂದ ಉತ್ತರಕ್ಕೆ 130 ಕಿಲೋಮೀಟರ್ (80 ಮೈಲುಗಳು) ಸ್ಥಾವರವಿದೆ. ಕಳೆದ ಏಪ್ರಿಲ್ 1986ರಲ್ಲಿ ಪರಮಾಣು ರಿಯಾಕ್ಟರ್ ಸ್ಫೋಟಿಸಿತು, ಯುರೋಪ್‌ನಾದ್ಯಂತ ವಿಕಿರಣಶೀಲ ತ್ಯಾಜ್ಯವನ್ನು ಹೊರಹಾಕಿತು. ವಿಕಿರಣ ಸೋರಿಕೆ ತಡೆಗಟ್ಟಲು ಹಲವಾರು ವರ್ಷಗಳ ಹಿಂದೆ ಸ್ಫೋಟಗೊಂಡ ರಿಯಾಕ್ಟರ್ ಅನ್ನು ರಕ್ಷಣಾತ್ಮಕ ಉದ್ದೇಶದಿಂದ ಮುಚ್ಚಲಾಗಿತ್ತು.
ಗುರುವಾರ, ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ರಷ್ಯಾದ ಮೇಲೆ ಅಧಿಕ ನಿರ್ಬಂಧಗಳನ್ನು ಘೋಷಣೆ ಮಾಡಿದೆ. 19 ರಷ್ಯಾದ ಕಂಪನಿಗಳಿಗೆ ಈಗ ನಿರ್ಬಂಧ ವಿಧಿಸಲಾಗಿದೆ. ಉದ್ಯಮಿಗಳು, ಅವರ ಕುಟುಂಬ ಸದಸ್ಯರು ಮತ್ತು ಸಹವರ್ತಿಗಳ ಮೇಲೆ ವೀಸಾ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಶ್ವೇತಭವನ ತಿಳಿಸಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications