• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌-ರಷ್ಯಾ ಬಿಕ್ಕಟ್ಟು: ಉಕ್ರೇನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

|
Google Oneindia Kannada News

ಕೈವ್, ಫೆಬ್ರವರಿ 23: ಉಕ್ರೇನ್ ಬುಧವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ರಷ್ಯಾದಲ್ಲಿರುವ ತನ್ನ ನಾಗರಿಕರಿಗೆ ಪಲಾಯನ ಮಾಡುವಂತೆ ಹೇಳಿದೆ. ಆದರೆ ಮಾಸ್ಕೋ ತನ್ನ ಕೈವ್ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ. ಈ ನಡುವೆ ಪೂರ್ವ ಉಕ್ರೇನ್‌ನಲ್ಲಿ ಶೆಲ್ ದಾಳಿ ತೀವ್ರಗೊಂಡಿದೆ.

ಫೆಬ್ರವರಿ 24ರಿಂದ ಜಾರಿಗೆ ಬರುವಂತೆ ಉಕ್ರೇನ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ಈ ತುರ್ತು ಪರಿಸ್ಥಿತಿಯು ಮೂವತ್ತು ದಿನಗಳ ಕಾಲ ಇರಲಿದೆ. ಉಕ್ರೇನ್‌ ರಕ್ಷಣೆಗಾಗಿ ಸೇನಾ ಮೀಸಲು ಪಡೆಗಳನ್ನು ಒಗ್ಗೂಡಿಸುತ್ತಿದ್ದು, ಈ ನಡುವೆ ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಘೋಷಣೆ ಮಾಡಿದೆ.

ಉಕ್ರೇನ್‌ನಿಂದ 241 ಮಂದಿ ಭಾರತೀಯರನ್ನು ಹೊತ್ತುಬಂದ ಏರ್‌ ಇಂಡಿಯಾಉಕ್ರೇನ್‌ನಿಂದ 241 ಮಂದಿ ಭಾರತೀಯರನ್ನು ಹೊತ್ತುಬಂದ ಏರ್‌ ಇಂಡಿಯಾ

ಈ ನಡುವೆ ಪೂರ್ವ ಉಕ್ರೇನ್‌ನಲ್ಲಿ ಬಂಡುಕೋರರ ಹಿಡಿತದಲ್ಲಿ ಇರುವ ಎರಡು ಪ್ರದೇಶಗಳನ್ನು ಆಕ್ರಮಣ ಮಾಡಲು ರಷ್ಯಾ ಅಧ್ಯಕ್ಷ ವಾಡ್ಲಿಮರ್‌ ಪುಟಿನ್‌ ಸೇನಾ ಪಡೆಗಳನ್ನು ನಿಯೋಜನೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ, ಸೇನೆಯ ಎರಡು ಲಕ್ಷಕ್ಕೂ ಅಧಿಕ ಮೀಸಲು ಪಡೆಗಳನ್ನು ಕರ್ತವ್ಯಕ್ಕೆ ಮತ್ತೆ ವಾಪಾಸ್‌ ಬರುವಂತೆ ಸೂಚನೆ ನೀಡಿದ್ದಾರೆ.

ಗುರುವಾರದಿಂದಲೇ ನಿರ್ಬಂಧಗಳು ಜಾರಿಗೆ

ಉಕ್ರೇನಿಯನ್ ಸರ್ಕಾರವು ಯುದ್ಧ ಮಾಡಬಲ್ಲರು ಎಂಬ ವಯಸ್ಸಿನ ಎಲ್ಲಾ ಪುರುಷರಿಗೆ ಕಡ್ಡಾಯ ಮಿಲಿಟರಿ ಸೇವೆಯನ್ನು ಘೋಷಿಸಿದೆ. ಉಕ್ರೇನಿಯನ್ ಸರ್ಕಾರ ಮತ್ತು ರಾಜ್ಯ ವೆಬ್‌ಸೈಟ್‌ಗಳು, ಇತ್ತೀಚಿನ ವಾರಗಳಲ್ಲಿ ಸೈಬರ್ ದಾಳಿಗೆ ಒಳಗಾಗಿದೆ. ಈ ಹಿನ್ನೆಲೆ ಬುಧವಾರ ಮತ್ತೆ ಆಫ್‌ಲೈನ್‌ನಲ್ಲಿವೆ. ಉಕ್ರೇನ್‌ನ ಸಂಸತ್ತು, ಕ್ಯಾಬಿನೆಟ್ ಮತ್ತು ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ಗಳಿಗೂ ಪರಿಣಾಮ ಬೀರಿವೆ.

ಆಕ್ರಮಣವನ್ನು ಯೋಜಿಸುವುದನ್ನು ಮಾಸ್ಕೋ ನಿರಾಕರಿಸಿದೆ. ಆದರೆ ಉಕ್ರೇನ್ ಗಡಿಯಲ್ಲಿ ನಿಯೋಜಿಸಲಾದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಅದು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಬುಧವಾರ, ಕೈವ್‌ನಲ್ಲಿರುವ ತನ್ನ ರಾಯಭಾರ ಕಚೇರಿಯಿಂದ ಧ್ವಜಗಳನ್ನು ಕೆಳಗಿಳಿಸಿದೆ. ಸುರಕ್ಷತೆಯ ಕಾರಣಗಳಿಗಾಗಿ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸುವಂತೆ ಆದೇಶಿಸಿದೆ.

 ಗಮನಿಸಿ: ಏಪ್ರಿಲ್‌ನಲ್ಲಿ ಎಲ್‌ಪಿಜಿ ಬೆಲೆ ದುಪ್ಪಟ್ಟು ಸಾಧ್ಯತೆ!, ಕಾರಣ ಇಲ್ಲಿದೆ.. ಗಮನಿಸಿ: ಏಪ್ರಿಲ್‌ನಲ್ಲಿ ಎಲ್‌ಪಿಜಿ ಬೆಲೆ ದುಪ್ಪಟ್ಟು ಸಾಧ್ಯತೆ!, ಕಾರಣ ಇಲ್ಲಿದೆ..

ಇನ್ನು ತುರ್ತು ಪರಿಸ್ಥಿತಿಯ ಹಿನ್ನೆಲೆ ಸಾರಿಗೆ ನಿರ್ಬಂಧ, ನಿರ್ಣಾಯಕ ಮೂಲಸೌಕರ್ಯಕ್ಕಾಗಿ ಹೆಚ್ಚುವರಿ ಭದ್ರತೆ, ಪ್ರತಿಭಟನೆ ನಿರ್ಬಂಧ ಕೂಡಾ ಇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನು ಕರ್ಫ್ಯೂ ಮತ್ತಿತರ ಕ್ರಮಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಪ್ರಾದೇಶಿಕ ಆಡಳಿತಕ್ಕೆ ನೀಡಲಾಗುತ್ತದೆ ಎಂದು ಉಕ್ರೇನ್‌ನ ಉನ್ನತ ಭದ್ರತಾ ಅಧಿಕಾರಿ ಒಲೆಕ್ಸಿ ಡ್ಯಾನಿಲೋವ್ ತಿಳಿಸಿದ್ದಾರೆ.

ಆತ್ಮರಕ್ಷಣೆಗಾಗಿ ಬಂದೂಕಿಗೆ ಉಕ್ರೇನ್‌ನಲ್ಲಿ ಸಮ್ಮತಿ

ಈ ನಡುವೆ ಉಕ್ರೇನಿಯನ್ನರು ಆತ್ಮರಕ್ಷಣೆಗಾಗಿ ಬಂದೂಕುಗಳನ್ನು ಹೊಂದಲು ಅನುಮತಿ ನೀಡುವ ಕರಡು ಕಾನೂನನ್ನು ಮೊದಲ ಬಾರಿಯೇ ಅಂಗೀಕಾರ ಮಾಡಲು ಉಕ್ರೇನ್‌ ಸಂಸತ್ತು ಬುಧವಾರ ಮತ ಚಲಾಯಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ರಷ್ಯಾ-ಉಕ್ರೇನ್‌ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಉಕ್ರೇನ್‌ ಸಂಸದರು ಈ ರೀತಿಯ ಕಾನೂನಿಗೆ ಮತ ಚಲಾಯಿಸಿದ ಬಳಿಕ ಯುದ್ಧದ ಭೀತಿ ಮತ್ತಷ್ಟು ಅಧಿಕವಾಗಿದೆ. ಇನ್ನು ಈಗಾಗಲೇ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಲು ದೇಶದ ಹೊರಗೆ ಸೇನೆ ಬಳಸಲು ಅಧ್ಯಕ್ಷ ಪುಟಿನ್‌ಗೆ ರಷ್ಯಾ ಸಂಸತ್‌ ಮಂಗಳವಾರ ಅನುಮತಿಯನ್ನು ನೀಡಿದೆ.

ರಷ್ಯಾವು ಉಕ್ರೇನ್‌ ಮೇಲೆ ಆಕ್ರಮಣ ಮಾಡಲಿದೆ ಎಂಬ ಭೀತಿಯ ಮಧ್ಯೆಯೇ ಉಕ್ರೇನ್‌ ಗಡಿಯ ಸಮೀಪದ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿಯು ನಿಯೋಜನೆಗೊಂಡಿದೆ. ಇದು ಉಪಗ್ರಹ ಚಿತ್ರಗಳಲ್ಲಿ ಕಂಡು ಬಂದಿದೆ ಎಂದು ವರದಿ ಉಲ್ಲೇಖ ಮಾಡಿದೆ. ಉಪಗ್ರಹ ಚಿತ್ರಗಳ ಪ್ರಕಾರ ಉಕ್ರೇನ್‌ ಗಡಿ ಬಳಿ ನೂರಕ್ಕೂ ಅಧಿಕ ವಾಹನಗಳು ಮತ್ತು ದಕ್ಷಿಣ ಬೆಲಾರಸ್‌ನ ಮೊಝೈರ್‌ ಬಳಿಯ ಸಣ್ಣ ಏರ್‌ಫೀಲ್ಡ್‌ನಲ್ಲಿ ಡಜನ್‌ಗಟ್ಟಲೆ ಸೈನಿಕರ ಟೆಂಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಉಕ್ರೇನ್‌ ಗಡಿಯಿಂದ ಏರ್‌ಫೀಲ್ಡ್‌ 40 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine- Russia Crisis: Ukraine declares state of emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X