ಕಾಪಾಡಿ.. ಕಾಪಾಡಿ.. ರಷ್ಯಾದಿಂದ ನಮ್ಮನ್ನು ಕಾಪಾಡಿ ಎಂದ ಉಕ್ರೇನ್ ಅಧ್ಯಕ್ಷ!
ರಷ್ಯಾ ಸೇನೆ ಉಕ್ರೇನ್‌ಗೆ ಕೊಡುತ್ತಿರುವ ಒಂದೊಂದು ಏಟು ಕೂಡ ಸರಿಯಾಗೇ ಬೀಳುತ್ತಿದೆ. ಈ ಕಾರಣಕ್ಕೆ ಉಕ್ರೇನ್ ನಲುಗಿ ಹೋಗಿದ್ದು, ಏನು ಮಾಡೋದು? ಎಂಬ ಆತಂಕದಲ್ಲಿ ಉಕ್ರೇನ್‌ನ ಸೇನೆ & ಜನರು ನಲುಗಿ ಹೋಗಿದ್ದಾರೆ. ಅದರಲ್ಲೂ ರಷ್ಯಾ ಸೇನೆ ಇದೀಗ ನುಗ್ಗಿ ನುಗ್ಗಿ ಉಕ್ರೇನ್ ಒಳಗೆ ಬರುತ್ತಿರುವ ವೇಗಕ್ಕೆ ಬೆಚ್ಚಿ ಬಿದ್ದು ಓಡಿ ಹೋಗಿದ್ದಾರೆ ಉಕ್ರೇನ್ ಸೈನಿಕರು. ಹೀಗಿದ್ದಾಗಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪಾಶ್ಚಿಮಾತ್ಯ ದೇಶಗಳ ಕಾಲು ಹಿಡಿಯುತ್ತಿದ್ದಾರೆ.
ರಷ್ಯಾ ಮೊದಲು ಯುದ್ಧ ಶುರು ಮಾಡಿದ್ದಾಗ ಉಕ್ರೇನ್ ಜೊತೆಗೆ ಯುದ್ಧ ಶಾಂತಿ ಮಾತುಕತೆಗಾಗಿ ಚರ್ಚೆ ಮಾಡಿತ್ತು. ಆದರೆ ಆಗ ಉಕ್ರೇನ್ ಶಾಂತಿ ಮಾತುಕತೆ ಬಗ್ಗೆ ಯಾವುದೇ ಚರ್ಚೆ ಮಾಡದೆ ರಷ್ಯಾ ವಿರುದ್ಧ ಪ್ರತಿದಾಳಿ ಮಾಡಿ ಮತ್ತಷ್ಟು ರೊಚ್ಚಿಗೆಬ್ಬಿಸಿತ್ತು. ಹೀಗೆ ರಷ್ಯಾ & ಉಕ್ರೇನ್ ಮಧ್ಯೆ ಕಾಡ್ಗಿಚ್ಚೇ ಹೊತ್ತಿಕೊಂಡಿದ್ದು, ಇಡೀ ಉಕ್ರೇನ್ ಈಗ ರಷ್ಯಾ ಕೊಡುತ್ತಿರುವ ಏಟಿಗೆ ನರಳಾಡಿದೆ.

ಇದೇ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶಾಂತಿ ಮಾತುಕತೆಗೆ ಮನವಿ ಮಾಡಿದ್ದಾರೆ. ಅಲ್ಲದೆ ಪಾಶ್ಚಿಮಾತ್ಯ ದೇಶಗಳು ಮುಂದೆ ಬಂದು ಶಾಂತಿ ಮಾತುಕತೆ ನಡೆಸೋಕೆ ವೇದಿಕೆ ಸೃಷ್ಟಿಸಲಿ ಎಂದಿದ್ದಾರೆ ಉಕ್ರೇನ್ ಅಧ್ಯಕ್ಷ, ಈ ಮೂಲಕ ನಮಗೆ ಯುದ್ಧ ಸಾಕು ಎಂದು ಪರೋಕ್ಷವಾಗಿ ಮನವಿ ಮಾಡಿದ್ದಾರೆ ವೊಲೊಡಿಮಿರ್ ಝೆಲೆನ್ಸ್ಕಿ.
ಯುದ್ಧ ಶುರುವಾಗಿದ್ದು ಏಕೆ?
ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆ ಆಗುತ್ತಿದೆ ಎಂಬ ಆರೋಪ, ಯುದ್ಧ ಆರಂಭವಾಗಲು ಕಾರಣವಾಗಿತ್ತು. ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ಘೋಷಿಸಿದ್ದರು 2022ರ ಫೆಬ್ರವರಿ 24ಕ್ಕೆ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗೆ, ಎರಡು ದೇಶಗಳ ಮಧ್ಯೆ ಭೀಕರ ಕದನ ಶುರುವಾಗಿತ್ತು. ರಷ್ಯಾ & ಉಕ್ರೇನ್ ಮಧ್ಯೆ ಯುದ್ಧದ ಭೀಕರತೆ ಶುರುವಾಗಿ, ಲಕ್ಷಾಂತರ ಜನರು ಕೂಡ ಜೀವವನ್ನೇ ಬಿಟ್ಟಿದ್ದಾರೆ.
ರಷ್ಯಾ ಈಗ ಭಾಗಶಃ ಉಕ್ರೇನ್ ಭೂಮಿಯನ್ನು ತನ್ನ ವಶಕ್ಕೆ ಪಡೆದಿದೆ. ಆದರೆ ಯುದ್ಧ ನಿಲ್ಲಿಸಲು ರಷ್ಯಾ ತಯಾರಿಲ್ಲ, ಮತ್ತೊಂದು ಕಡೆಗೆ ಉಕ್ರೇನ್ ಹಠ ಬಿಟ್ಟು ಸಂಧಾನಕ್ಕೆ ಬರ್ತಿಲ್ಲ ಅಂತಾ ರಷ್ಯಾ ಆರೋಪಿಸುತ್ತಿದೆ. ಆದ್ರೆ ಈಗ ಉಕ್ರೇನ್‌ಗೆ ಬಾಲ ಮುದುಡಿದ್ದು, ಸಂಧಾನಕ್ಕೆ ಸಿದ್ಧ ಎಂಬ ಸಂದೇಶ ನೀಡಿದೆ. ಈಗ ಶಾಂತಿ ಮಾತುಕತೆ ಬಗ್ಗೆ ರಷ್ಯಾ ಒಪ್ಪಿಗೆ ನೀಡುತ್ತಾ? ಎಂಬ ಕುತೂಹಲ ಮೂಡಿದೆ.
ಲಕ್ಷ ಲಕ್ಷ ಜನರ ಸಾವು?
ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿ ಹೆಚ್ಚಿಸುತ್ತಿದೆ ಈ ತಿಕ್ಕಾಟದಲ್ಲಿ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಯುದ್ಧದಿಂದ ಇದುವರೆಗೆ 50,000 ಜನರು ಮೃತಪಟ್ಟಿದ್ದು, ಉಕ್ರೇನ್‌ನ 70,000 ಸೈನಿಕರು ಜೀವ ಬಿಟ್ಟಿದ್ದಾರೆ ಎನ್ನುವುದು ಉಕ್ರೇನ್ ಆರೋಪ. ಒಟ್ಟಾರೆ 1 ಲಕ್ಷ 20 ಸಾವಿರ ಉಕ್ರೇನ್ ಮೂಲದ ಜನರ ಜೀವ ಹೋಗಿದೆ ಅಂತಾ ಉಕ್ರೇನ್ ಆರೋಪ ಮಾಡುತ್ತಿದ್ದು, ನಮಗೆ ಶಾಂತಿ ಬೇಕು ಅಂತಿದ್ದಾರೆ ಉಕ್ರೇನ್ ಅಧ್ಯಕ್ಷ. ಇದೇ ಕಾರಣಕ್ಕೆ ಈಗ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಒಂದಾಗಿ ಶಾಂತಿ ಒಪ್ಪಂದ ಮಾಡಿಸಲಿ ಎಂದಿದ್ದಾರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು.












Click it and Unblock the Notifications