ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸುವಲ್ಲಿ ಭಾರತದ ಪಾತ್ರ ಎಂತಹದ್ದು?

ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುವ ಸಮಯದಲ್ಲಿ ಜಗತ್ತಿನ ದೊಡ್ಡ & ದೊಡ್ಡ ದೇಶಗಳೇ ಯುದ್ಧ ನಿಲ್ಲಿಸಲು ಪರದಾಡುತ್ತಿವೆ. ಹೀಗಿದ್ದಾಗ ಕಳೆದ ಎರಡು ವರ್ಷದಿಂದ ನಿರಂತರವಾಗಿ ಯುದ್ಧ ನಡೆಯುತ್ತಿದ್ದು, ಲಕ್ಷಾಂತರ ಜನರು ಜೀವ ಕಳೆದುಕೊಂಡಿದ್ದಾರೆ. ಈ ಸಮಯದಲ್ಲೇ ಭಾರತ ಕೂಡ ಯುದ್ಧಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಈ ಕುರಿತು ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಹತ್ವದ ಹೇಳಿಕೆ ನೀಡಿದ್ದಾರೆ! ಹಾಗಾದ್ರೆ ಇದೀಗ ಉಕ್ರೇನ್‌ನ ಅಧ್ಯಕ್ಷರು ಭಾರತದ ಬಗ್ಗೆ ಹೇಳಿದ್ದು ಏನು?

ಭಾರತ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹಿಡಿತ ಹೊಂದಿದ್ದು, ಜಗತ್ತಿನ ಪ್ರತಿಯೊಂದು ದೇಶಕ್ಕೂ ಭಾರತ ಬೇಕೆ ಬೇಕು. ಯಾಕಂದ್ರೆ ಪ್ರಪಂಚದ ಪ್ರತಿಯೊಂದು ದೇಶ ಕೂಡ ಭಾರತ & ಭಾರತೀಯರ ಜೊತೆಗೆ ಅನಿವಾರ್ಯ ಸಂಬಂಧ ಹೊಂದಿರುತ್ತೆ. ಹೀಗಿದ್ದಾಗ, ಉಕ್ರೇನ್ ಕೂಡ ಭಾರತದ ಜೊತೆಗೆ ಸಂಬಂಧ ಸರಿ ಮಾಡಿಕೊಳ್ಳಲು ಇದೀಗ ಹೊಸ ಹಾದಿ ಹಿಡಿದಿದೆ. ಅದ್ರಲ್ಲೂ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಗೆ ಭೇಟಿ ನೀಡಿದಾಗ ಆಕ್ರೋಶವನ್ನ ಹೊರ ಹಾಕಿದ್ದ ಉಕ್ರೇನ್ ಅಧ್ಯಕ್ಷ ಈಗ ರಾಗ ಬದಲಿಸಿದ್ದು, ಭಾರತದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? ಭಾರತದ ಶಕ್ತಿ ಈಗ ಇಡೀ ಜಗತ್ತಿಗೆ ಮತ್ತೊಮ್ಮೆ ಮನದ್ದಟ್ಟು ಆಗಿದ್ದು ಹೇಗೆ ಗೊತ್ತಾ? ಮುಂದೆ ಓದಿ.

Ukraine President Is Said This About India Now

ಭಾರತದ ಬಗ್ಗೆ ಹೆಮ್ಮೆಯ ಮಾತು

ಅಂದಹಾಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿ ತೆರಳಿದ ನಂತರ ಉಕ್ರೇನ್ ಅಧ್ಯಕ್ಷರು ಮಹತ್ವದ ಹೇಳಿಕೆ ನೀಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ತಿಕ್ಕಾಟವನ್ನ ಬಗೆಹರಿಸಿ ಶಾಂತಿಯ ಸ್ಥಾಪಿಸುವಲ್ಲಿ ಈಗ ಜಾಗತಿಕ ರಾಜತಾಂತ್ರಿಕ ಪ್ರಯತ್ನದಲ್ಲು ಭಾರತದ ಪಾತ್ರ ಮಹತ್ವದ್ದು ಎಂದಿದ್ದಾರೆ ಉಕ್ರೇನ್‌ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು. ಅಲ್ಲದೆ ಭಾರತವು ಬೃಹತ್ ಪ್ರಭಾವಿ ರಾಷ್ಟ್ರವಾಗಿದ್ದು, ಭಾರತ ಈಗಲೂ ಯುದ್ಧ & ರಷ್ಯಾ ವಿಚಾರದಲ್ಲಿ ನಿಲುವು ಬದಲಾಯಿಸಿಲ್ಲ ಎಂದಿದ್ದಾರೆ ಝೆಲೆನ್ಸ್ಕಿ. ಈ ಮೂಲಕ ಯುದ್ಧ ಆದಷ್ಟು ಬೇಗ ನಿಲ್ಲಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ ಉಕ್ರೇನ್ ಅಧ್ಯಕ್ಷ.

ಇತಿಹಾಸ ನಿರ್ಮಿಸಿದ ಪ್ರಧಾನಿ ಮೋದಿ

ಸೋವಿಯತ್ ರಷ್ಯಾ ಭಾಗವಾಗಿದ್ದ ಉಕ್ರೇನ್ ದೇಶಕ್ಕೆ 1991 ರಲ್ಲಿ ಸ್ವಾತಂತ್ರ್ಯ ಸಿಕ್ಕಿತ್ತು. ಹೀಗೆ ಸೋವಿಯತ್ ರಷ್ಯಾದಿಂದ ಸ್ವಾತಂತ್ರ್ಯ ಪಡೆದ ನಂತರ, ಭಾರತದ ಪ್ರಧಾನಿ ಒಬ್ಬರು ಉಕ್ರೇನ್ ದೇಶಕ್ಕೆ ಭೇಟಿ ನೀಡಿದ್ದು ಇದೇ ಮೊದಲು. ಪ್ರಧಾನಿ ಮೋದಿ ಅವರು ಈ ವಿಚಾರದಲ್ಲಿ ಈಗ ಇತಿಹಾಸ ನಿರ್ಮಿಸಿದ್ದಾರೆ. ಇದೇ ಸಮಯದಲ್ಲಿ ಉಕ್ರೇನ್ ಅಧ್ಯಕ್ಷರು ಕೂಡ ಈ ಬಗ್ಗೆ ಹಮ್ಮೆ ಮತ್ತು ಸಂತಸದ ಮಾತು ಆಡಿದ್ದಾರೆ. ಅಲ್ಲದೆ, ಭಾರತದ ಜೊತೆಗೆ ಸಂಬಂಧ ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+