Ukraine War: ಜರ್ಮನಿ ನೆಲದಲ್ಲಿ ಶುರುವಾಯ್ತು ಶಾಂತಿ ಮಾತುಕತೆ, ಉಕ್ರೇನ್ ಯುದ್ಧಕ್ಕೆ ಬ್ರೇಕ್?
ಉಕ್ರೇನ್
ಯುದ್ಧಕ್ಕೆ ಹೇಗಾದರೂ ಮಾಡಿ ಒಂದು ಕೊನೆಯ ಮೊಳಗೆ ಹೊಡೆಯಬೇಕು, ಆ ಮೂಲಕ ರಷ್ಯಾ & ಉಕ್ರೇನ್ ನಡುವೆ ಹಿಂಸಾಚಾರ ನಿಲ್ಲಿಸಿ ಹೀರೋ ಆಗಬೇಕು ಅಂತಾ ಒದ್ದಾಡುತ್ತಾ ಇದೆ ಅಮೆರಿಕ. ಆದರೆ ಇದೀಗ ಜಗತ್ತಿನ ದೊಡ್ಡಣ್ಣ ಅಮೆರಿಕ ಈ ರೀತಿಯಾಗಿ ಯುದ್ಧ ನಿಲ್ಲಿಸಲು ಬಂದು, ಮಾಡುತ್ತಿರುವ ಪ್ರಯತ್ನಗಳನ್ನು ರಷ್ಯಾ ಕೂಡ ಅನುಮಾನದ ಕಣ್ಣಿನಿಂದಲೇ ನೋಡುತ್ತಿದೆ. ಈ ಸಮಯದಲ್ಲೇ ಉಕ್ರೇನ್ ಕೂಡ ಭಾರಿ ಅಳೆದು & ತೂಗಿ ಯುದ್ಧ ನಿಲ್ಲಿಸಲು ಚರ್ಚೆ ಮಾಡುತ್ತಿದೆ. ಇಂತಹ ಸಮಯದಲ್ಲೇ ಜರ್ಮನಿ ನೆಲದಲ್ಲಿ ಶುರುವಾಯ್ತು ಶಾಂತಿ ಮಾತುಕತೆ, ಉಕ್ರೇನ್ ಯುದ್ಧಕ್ಕೆ ಬ್ರೇಕ್? id="toptextpromo"> id='are-slot-1' class='oiad oi-axt oiadv'> id='top-searched-articles'>2022
ಫೆಬ್ರವರಿಯಲ್ಲಿ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಭೀಕರ ಯುದ್ಧ ಸಾರಿತ್ತು. ಆ ನಂತರ ಈ ಎರಡೂ ದೇಶಗಳು ಸತತವಾಗಿ ಬಡಿದಾಡಿಕೊಂಡು ಬಂದಿದ್ದವು. ಹೀಗಿದ್ದಾಗ ಹಲವು ದೇಶಗಳು ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಸೋತು ಹೋಗಿವೆ. ಆದರೆ ಅಮೆರಿಕ ಈಗ ಹೊಸ ಅಧ್ಯಕ್ಷರನ್ನು ಕಂಡಿದ್ದು, ಸ್ವತಃ ಡೊನಾಲ್ಡ್ ಟ್ರಂಪ್ ಈ ಯುದ್ಧ ನಿಲ್ಲಿಸಲು ಮುಂದೆ ಬಂದು ಪ್ಲಾನ್ ಮಾಡಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಯುದ್ಧ ನಿಲ್ಲಿಸಲು ಯುರೋಪ್ ಒಕ್ಕೂಟದ ಪ್ರಮುಖ ದೇಶ ಜರ್ಮನಿ ನೆಲದಲ್ಲಿ ಚರ್ಚೆ ಶುರುವಾಗಿದೆ. ಜರ್ಮನಿ ರಾಜಧಾನಿಯಾದ ಬರ್ಲಿನ್ ಶಾಂತಿ ಮಾತುಕತೆಗೆ ವೇದಿಕೆ ಒದಗಿಸಿದೆ. id='are-slot-2' class='oiad oi-axt oiadv'>












Click it and Unblock the Notifications