ಉಕ್ರೇನ್ ವಿಚಾರದಲ್ಲಿ ರಷ್ಯಾ ಹೊಸ ಪ್ಲಾನ್, ಶಾಂತಿ ಒಪ್ಪಂದ ಮತ್ತಷ್ಟು ಸುಲಭ ಸಾಧ್ಯತೆ | Ukraine Peace

ಉಕ್ರೇನ್ ವಿಚಾರದಲ್ಲಿ ರಷ್ಯಾ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಆದಷ್ಟು ಬೇಗನೇ ಉಕ್ರೇನ್ ಜೊತೆಯಲ್ಲಿ ಶಾಂತಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಒತ್ತಾಯ ಮಾಡುತ್ತಿದೆ. ಡೊನಾಲ್ಡ್ ಟ್ರಂಪ್ ಅವರ ಆಡಳಿತ ಈ ವಿಚಾರದಲ್ಲಿ ಒತ್ತಡ ಹೆಚ್ಚು ಮಾಡಿದ ನಂತರ ರಷ್ಯಾ ಕೂಡ ಗಂಭೀರ ಚರ್ಚೆ ನಡೆಸಿದೆ. ಈ ಮಧ್ಯೆ ಅಮೆರಿಕ ತನ್ನ ಮಾತನ್ನು ರಷ್ಯಾ ಕೇಳುತ್ತಿಲ್ಲ ಎಂದು ಬೇಸರಗೊಂಡು, ಉಕ್ರೇನ್ ಪರವಾಗಿ ಬ್ಯಾಟ್ ಬೀಸಲು ಶುರು ಮಾಡಿದೆ ಎಂಬ ಅನುಮಾನ ಕಾಡುತ್ತಿದೆ ರಷ್ಯಾಗೆ. ಇಷ್ಟೆಲ್ಲದರ ನಡುವೆ ಯುರೋಪ್ ದೇಶಗಳು ಕೂಡ ರಷ್ಯಾ ವಿರುದ್ಧ ಮತ್ತಷ್ಟು ರೊಚ್ಚಿಗೆದ್ದಿವೆ. ಹೀಗೆ ಕ್ಷಣಕ್ಷಣಕ್ಕೂ ಪರಿಸ್ಥಿತಿ ಕೈಮೀರಿ, ಎಡವಟ್ಟು ಆಗುತ್ತಿದೆ ಎಂಬ ಮುನ್ಸೂಚನೆ ಸಿಕ್ಕಿದ್ದೇ ತಡ ರಷ್ಯಾ ನಿಲುವು ಬದಲಿಸುವ ಮುನ್ಸೂಚನೆ ನೀಡಿದೆ.

ಅನಿವಾರ್ಯತೆ ನಡುವೆ ಆತುರದಲ್ಲಿ ಯುರೋಪ್ ಒಕ್ಕೂಟಕ್ಕೆ ಉಕ್ರೇನ್ ಸೇರಲು ಪ್ರಯತ್ನ ಮಾಡುತ್ತಿದೆ. ಇಲ್ಲವಾದರೆ ಬದಕಲು ಆಗಲ್ಲ ಎಂಬ ಸ್ಥಿತಿ ಈಗ ಉಕ್ರೇನ್ ನೆಲದಲ್ಲಿ ನಿರ್ಮಾಣ ಆಗಿದೆ. ಹಣ ಇಲ್ಲ ಮತ್ತು ರಷ್ಯಾ ಜೊತೆ ಯುದ್ಧ ಮಾಡಿ ಇರುವ ಎಲ್ಲಾ ಸಂಪತ್ತು ನಾಶವಾಗಿದೆ. ಹೀಗಾಗಿ ಭವಿಷ್ಯದ ಚಿಂತೆಯಲ್ಲೇ ಉಕ್ರೇನ್ ಮುಳುಗಿದ್ದು, ಆದಷ್ಟು ಬೇಗ ಪಾಶ್ಚಿಮಾತ್ಯ ದೇಶಗಳ ಒಕ್ಕೂಟಕ್ಕೆ ಸೇರಲು ಸಜ್ಜಾಗಿದೆ. ಹೀಗೆ ಇದ್ದಾಗ ರಷ್ಯಾ ಕೂಡಲೇ ಯುದ್ಧ ನಿಲ್ಲಿಸುವ ನಿರ್ಧಾರ ಮಾಡದೇ ಇದ್ದರೆ ಪರಿಸ್ಥಿತಿ ವ್ಯತಿರಿಕ್ತ ರೂಪ ಪಡೆಯುವ ಆತಂಕ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಈಗ ರಷ್ಯಾ ತನ್ನ ನಿಲುವು ಬದಲಾಯಿಸಿಕೊಂಡು ಉಕ್ರೇನ್ ಜೊತೆಗೆ ಆದಷ್ಟು ಬೇಗ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಕೂಡ ಈಗ ದಟ್ಟವಾಗಿದೆ.

Ukraine Peace

ರಷ್ಯಾ ಸೈಲೆಂಟ್ ಆಗಿದ್ದು ಏಕೆ?

ಜೂನ್ ತಿಂಗಳ ಒಳಗೆ ಯುದ್ಧ ನಿಲ್ಲಿಸಬೇಕು ಎಂಬುದು ಅಮೆರಿಕದ ಪ್ಲಾನ್, ಏಕೆಂದರೆ ಆಗ ಅಲ್ಲಿ ಎಂದರೆ ಉಕ್ರೇನ್ ನೆಲದಲ್ಲಿ ಬೇಸಿಗೆ ಕಾಲದ ಸಮಯ. ಆ ನಂತರ ಮತ್ತೆ ನಿಧಾನವಾಗಿ ಚಳಿ ಅಬ್ಬರ ಹೆಚ್ಚಾಗುತ್ತಾ ಸಾಗುತ್ತದೆ. ಹೀಗಿದ್ದಾಗ ಹೇಗಾದರೂ ಮಾಡಿ ಬೇಸಿಗೆ ಒಳಗೆ ಯುದ್ಧ ನಿಲ್ಲಿಸಿದರೆ ಅದು ಮುಂದೆ ಉಕ್ರೇನ್‌ಗೆ ಸಹಾಯಕವಾಗುವ ಜೊತೆಗೆ, ಉಕ್ರೇನ್ ಪ್ರಜೆಗಳು ಮತ್ತೊಂದು ಚಳಿಗಾಲದಲ್ಲಿ ಈ ಯುದ್ಧದ ಒದ್ದಾಟದಿಂದ ಮುಕ್ತಿ ಪಡೆಯಬಹುದು ಎಂಬ ಲೆಕ್ಕಾಚಾರ ಕೂಡ ಇದೆ. ಆದರೆ ರಷ್ಯಾ ಮತ್ತು ಉಕ್ರೇನ್ ಶಾಂತಿ ಮಾತುಕತೆ ಮತ್ತೆ ಮತ್ತೆ ಸೋತು ಹೋಗುತ್ತಿದೆ. ಪ್ರಮುಖವಾಗಿ ರಷ್ಯಾ ಇಡುತ್ತಿರುವ ಡಿಮ್ಯಾಂಡ್ ಇದಕ್ಕೆ ಕಾರಣ ಎಂಬ ಆರೋಪದ ನಡುವೆ, ಉಕ್ರೇನ್ ಜೊತೆಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ರಷ್ಯಾ ಇನ್ನಷ್ಟು ಮೃದು ನಿಲುವು ತಳೆಯುತ್ತಿದೆ ಈಗ.

ಯುದ್ಧ ನಿಲ್ಲಿಸಲು ರಷ್ಯಾ ಒಪ್ಪಿಗೆ ಸಾಧ್ಯತೆ

ಯುರೋಪ್ ದೇಶಗಳು ಈಗಾಗಲೇ ಅಮೆರಿಕ ವಿರುದ್ಧ ಮುಗಿಬಿದ್ದು, ರಷ್ಯಾ ವಿಚಾರದಲ್ಲಿ ಕಠಿಣವಾದ ನಿರ್ಧಾರ ಕೈಗೊಳ್ಳಲು ಆಗ್ರಹ ಮಾಡುತ್ತಿವೆ. ಮತ್ತೊಂದು ಕಡೆ ಅಮೆರಿಕದ ಮಿತ್ರ ದೇಶಗಳ ಮುನಿಸು ಭಾರಿ ತಲ್ಲಣಕ್ಕೆ ಕಾರಣವಾಗಿರುವ ಸಮಯದಲ್ಲೇ, ತನ್ನ ಲಾಭ ನೋಡಿಕೊಳ್ಳಲು ಅಮೆರಿಕ ಕೂಡ ಈ ಸಮಯದಲ್ಲಿ ರಷ್ಯಾ ವಿರುದ್ಧ ಕಠಿಣ ನಿಲುವು ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಈಗ ಉಕ್ರೇನ್ ಜೊತೆಗೆ ಆದಷ್ಟು ಬೇಗ ಶಾಂತಿ ಒಪ್ಪಂದ ಮಾಡಿಕೊಳ್ಳಲು ರಷ್ಯಾ ತನ್ನ ನಿಲುವುಗಳನ್ನ ಕೂಡ ಬದಲಾಯಿಸಿಕೊಳ್ಳಲು ಮುಂದಾಗಿದೆ ಎಂಬ ಮಾಹಿತಿ ಗಮನ ಸೆಳೆಯುತ್ತಿದೆ. ಮತ್ತೊಂದು ಕಡೆ ಈಗಾಗಲೇ ಉಕ್ರೇನ್‌ಗೆ ಇನ್ನಷ್ಟು ಯುದ್ಧ ಸಹಾಯ ಮಾಡಲು ಬ್ರಿಟನ್ ಸಮೇತ ಹಲವು ದೇಶಗಳು ಈಗ ಮುಂದೆ ಬಂದಿವೆ. ಇದು ಕೂಡ ರಷ್ಯಾ ಆತಂಕ ಹೆಚ್ಚು ಮಾಡುತ್ತಿದ್ದು, ಭವಿಷ್ಯದ ಬಗ್ಗೆ ಚಿಂತೆಯನ್ನ ಕೂಡ ಹೆಚ್ಚಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+