ಖಾರ್ಕಿವ್‌ನಲ್ಲಿ ಸಿಲುಕಿದ ಭಾರತೀಯರಿಗೆ ರಾಯಭಾರಿ ಕಚೇರಿ ತುರ್ತು ಸಂದೇಶ

ಕೀವ್, ಮಾರ್ಚ್ 3: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಆಪರೇಶನ್ ಗಂಗಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ಮಧ್ಯೆ ಗುರುವಾರ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ತುರ್ತು ಸಲಹೆಗಳನ್ನು ನೀಡಿದೆ.

ಖಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸ್ಥಳಾಂತರಿಸುವಿಕೆಯನ್ನು ತ್ವರಿತಗೊಳಿಸಲು ಕೂಡಲೇ ಅರ್ಜಿಯನ್ನು ಭರ್ತಿ ಮಾಡಲು ಸರ್ಕಾರ ತುರ್ತು ಮನವಿ ಮಾಡಿದೆ. ಖಾರ್ಕಿವ್ ಈಗ ಪ್ರಾಯೋಗಿಕವಾಗಿ ರಷ್ಯಾದ ನಿಯಂತ್ರಣದಲ್ಲಿದೆ, ನಗರದಲ್ಲಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ರಷ್ಯನ್ನರು ಸಹಾಯ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಾರ್ಕಿವ್‌ನಲ್ಲಿರುವ ಭಾರತೀಯರು "ತಕ್ಷಣ" ಸ್ಥಳೀಯ ಸಮಯ ಸಂಜೆ 6 ಗಂಟೆಯೊಳಗೆ ನಗರವನ್ನು ತೊರೆದು ಹತ್ತಿರದ ಪಿಸೋಚಿನ್, ಬಾಬೈ ಅಥವಾ ಬೆಜ್ಲ್ಯುಡಿವ್ಕಾ ಎಂಬ ಮೂರು ಪಟ್ಟಣಗಳನ್ನು ತಲುಪುವಂತೆ ಭಾರತವು ಬುಧವಾರ ಸರಣಿ ಸಲಹೆಗಳನ್ನು ನೀಡಿತ್ತು.

Ukraine Embassys Latest and Urgent Advisory for indians who stuck in Kharkiv

ಭಾರತೀಯ ರಾಯಭಾರಿ ಟ್ವೀಟ್ ಸಂದೇಶ:

"ಪಿಸೋಚಿನ್ ಹೊರತುಪಡಿಸಿ ಖಾರ್ಕಿವ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು, ದಯವಿಟ್ಟು ಫಾರ್ಮ್‌ನಲ್ಲಿರುವ ವಿವರಗಳನ್ನು ತುರ್ತಾಗಿ ಭರ್ತಿ ಮಾಡಿ," ಎಂದು ರಾಯಭಾರ ಕಚೇರಿಯ ಸಂಜೆ ಟ್ವೀಟ್ ಮಾಡಿದೆ. ಅಗತ್ಯವಿರುವ ವಿವರಗಳಲ್ಲಿ ಹೆಸರು, ವಿಳಾಸ, ಪಾಸ್‌ಪೋರ್ಟ್ ಸಂಖ್ಯೆ ಮತ್ತು ಹೆಸರುಗಳು ಮತ್ತು ಸ್ಥಳಾಂತರಿಸಬೇಕಾದ ಹೆಚ್ಚುವರಿ ಜನರ ಸಂಖ್ಯೆಯು ಸೇರಿದೆ.

24 ಗಂಟೆಗಳಲ್ಲಿ 3 ಸಾವಿರ ಭಾರತೀಯರ ಸ್ಥಳಾಂತರ:

ಕಳೆದ 24 ಗಂಟೆಗಳಲ್ಲಿ ಉಕ್ರೇನ್‌ನಿಂದ 15 ವಿಮಾನಗಳಲ್ಲಿ 3,000 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಸರ್ಕಾರ ಹೇಳಿದೆ. "ಆಪರೇಷನ್ ಗಂಗಾ" ಕಾರ್ಯಾಚರಣೆ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಲು ಹೆಚ್ಚಿನ ವಿಮಾನಗಳನ್ನು ನಿಗದಿಪಡಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಖಾರ್ಕಿವ್ ನಿಲ್ದಾಣದಲ್ಲಿ ರೈಲು ಹತ್ತಲು ಸಾಧ್ಯವಾಗದೆ ಗಂಟೆಗಟ್ಟಲೆ ಕಾದು ಕುಳಿತಿದ್ದ ವಿದ್ಯಾರ್ಥಿಗಳನ್ನು ನಿನ್ನೆಯ ಸಲಹೆ ಕಂಗಾಲಾಗಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+