Ukraine War: ಉಕ್ರೇನ್ ರಾಜಧಾನಿಗೆ ಬಿಗಿ ಬಂದೋಬಸ್ತ್, ಯಾವ ಕ್ಷಣದಲ್ಲೂ ದಾಳಿ ಸಾಧ್ಯತೆ?

ರಷ್ಯಾ ಜೊತೆಗೆ ಯುದ್ಧ ಮಾಡಿ ಮಾಡಿ ಸೋತು ಹೋಗಿರುವ ಉಕ್ರೇನ್ ಸೇನೆಗೆ ಈಗ ಒಂದಷ್ಟು ಧೈರ್ಯ ಹಾಗೂ ಆತ್ಮಸ್ಥೈರ್ಯ ಬೇಕಾಗಿದೆ. ಆದರೆ ಇಂತಹ ಭಾರಿ ಒತ್ತಡದ ಸಮಯ ಇರುವ ವಾತಾವರಣದಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅಂದಹಾಗೆ ರಷ್ಯಾ ಸೇನೆಯು ಇದೀಗ ಉಕ್ರೇನ್ ರಾಜಧಾನಿಯನ್ನೇ ಟಾರ್ಗೆಟ್ ಮಾಡಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಇದೇ ಉಕ್ರೇನ್ ರಾಜಧಾನಿಯನ್ನ ವಶಕ್ಕೆ ಪಡೆಯುವ ಎಲ್ಲಾ ಸಾಧ್ಯತೆ ಇದೀಗ ದಟ್ಟವಾಗಿದೆ. ಹಾಗಾದ್ರೆ ಇದೀಗ ಉಕ್ರೇನ್ ರಾಜಧಾನಿಗೆ ಬಿಗಿ ಬಂದೋಬಸ್ತ್? ಮುಂದಿನ ಕಥೆ ಏನು?

ಉಕ್ರೇನ್ ನೆಲದಲ್ಲಿ ಈಗಾಗಲೇ ಭಾರಿ ಚಳಿ ಶುರುವಾಗಿದ್ದು, ಅಲ್ಲಿನ ಜನರು ಹೊರಗೆ ಬರೋದಕ್ಕೆ ಕೂಡ ಪರದಾಡುವ ಪರಿಸ್ಥಿತಿ ಇದೆ. ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಉಕ್ರೇನ್ ನೆಲ ಚಳಿಗಾಲ ಬಂದ ಸಮಯದಲ್ಲಿ ಭಾರಿ ಸೂಕ್ಷ್ಮವಾಗಿರುತ್ತದೆ. ಹಾಗೇ ರಷ್ಯಾ ದೇಶದಲ್ಲೂ ಚಳಿಯ ಆರ್ಭಟ ಜೋರಾಗಿಯೇ ಇರುತ್ತದೆ. ಹೀಗೆ ಚಳಿಯಲ್ಲೇ ಬದುಕುವ ಈ ಎರಡೂ ದೇಶಗಳ ಜನರಿಗೆ ನವೆಂಬರ್ ತಿಂಗಳಿಂದ ಹಿಡಿದು ಏಪ್ರಿಲ್ ತಿಂಗಳ ತನಕ ಚಳಿಯ ಕಾಟ ತಪ್ಪುವುದಿಲ್ಲ. ಹೀಗಿದ್ದಾಗ ಇದೇ ಪ್ರತಿಕೂಲ ಹವಾಮಾನ ಎದರಿಸಲು ಸಜ್ಜಾಗಬೇಕಿದ್ದ ಉಕ್ರೇನ್ ಅದನ್ನು ಬಿಟ್ಟು ರಷ್ಯಾ ಸೇನೆ ಜೊತೆಗೆ ಹೋರಾಟ ಮಾಡಲು ಸಜ್ಜಾಗುತ್ತಿದೆ.

Ukraine Capital City Is On High Alert For This Reason Now

ಉಕ್ರೇನ್ ರಾಜಧಾನಿ ಕೀವ್ ರಷ್ಯಾ ವಶಕ್ಕೆ?

ರಷ್ಯಾ ಮಿಲಿಟರಿ ಕೊಡುತ್ತಿರುವ ಒಂದೊಂದು ಏಟಿಗೂ ನಲುಗಿ ಹೋಗಿರುವ ಉಕ್ರೇನ್ ಈಗಾಗಲೇ ಹಲವು ಪ್ರದೇಶಗಳನ್ನು ಕಳೆದುಕೊಂಡು ನರಳುತ್ತಿದೆ. ಹೀಗಿದ್ದಾಗ ತನ್ನ ರಾಜಧಾನಿ ಕೀವ್ ಕೂಡ ಇದೀಗ ಕೈಬಿಟ್ಟು ಹೋಗುವ ಹಂತದಲ್ಲಿ ಉಕ್ರೇನ್ ಭಯಪಟ್ಟು ಕೂರುವ ವಾತಾವರಣ ನಿರ್ಮಾಣ ಆಗಿದೆ. ಅದರಲ್ಲೂ ಕೀವ್ ವಶಕ್ಕೆ ಪಡೆಯಲು ಅಂತಿಮ ಹಂತದ ಸಿದ್ಧತೆಗೆ ರಷ್ಯಾ ಮುಂದೆ ನುಗ್ಗಿ ಬಂದಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಸಾಮಾನ್ಯ ಜನರ ಬದುಕು ಬೀದಿಗೆ...

ಒಟ್ನಲ್ಲಿ ಈಗ ಯುದ್ಧ ಇನ್ನಷ್ಟು ಘೋರವಾಗಿದ್ದು, ನೋಡ ನೋಡುತ್ತಲೇ ರಷ್ಯಾ & ಉಕ್ರೇನ್ ಮಧ್ಯೆ ಇನ್ನೊಂದು ಸುತ್ತಿನ ರಣ ಕಾಳಗವೇ ನಡೆಯುವ ಸಾಧ್ಯತೆ ದಟ್ಟವಾಗಿದೆ. ಇದೆಲ್ಲಾ ನೋಡುತ್ತಿದ್ದರೆ ಈ ಯುದ್ಧ ನಿಲ್ಲುವುದಿಲ್ಲ ಅನ್ನೋದು ಮತ್ತೆ ಮತ್ತೆ ಗ್ಯಾರಂಟಿ ಆಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಈ ಗಲಾಟೆ ಎಲ್ಲಿಗೆ ಬಂದು ತಲುಪಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಆದರೆ ಈ ಜಗಳ & ಹಿಂಸೆಯಲ್ಲಿ ಸಾಮಾನ್ಯ ಜನರ ಬದುಕು ಬೀದಿಗೆ ಬೀಳುತ್ತಿರುವುದು ವಿಪರ್ಯಾಸದ ಸಂಗತಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+