ರಷ್ಯಾ ಮತ್ತು ಉಕ್ರೇನ್ ತಿಕ್ಕಾಟಕ್ಕೆ 4 ವರ್ಷ ಪೂರ್ಣ, ಮುಂದಿನ ಪರಿಸ್ಥಿತಿ ಮತ್ತಷ್ಟು ಭಯಾನಕ | Ukraine And Russia
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿ ಇದೀಗ ನೋಡ ನೋಡುತ್ತಲೇ 4 ವರ್ಷ ಸಂಪೂರ್ಣ ಆಗಿದೆ. 2022 ಸಮಯದಲ್ಲಿ ಆರಂಭ ಆಗಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧವು ನೋಡ ನೋಡುತ್ತಾ ಇದೀಗ 4 ವರ್ಷ ಪೂರೈಸಿ, 5ನೇ ವರ್ಷಕ್ಕೆ ಎಂಟ್ರಿಯನ್ನ ಕೊಟ್ಟಿದೆ. ಈ ಮೂಲಕ ಉಕ್ರೇನ್ ವಿರುದ್ಧದ ರಷ್ಯಾ ಕಾರ್ಯಾಚರಣೆ ಮತ್ತಷ್ಟು ಚರ್ಚೆಗೆ ವೇದಿಕೆ ಒದಗಿಸಿದೆ. ಅಲ್ಲದೆ ಎರಡೂ ದೇಶಗಳ ನಡುವೆ ಈ ಸಮಯದಲ್ಲಿ ಇನ್ನಷ್ಟು ಘೋರ ತಿಕ್ಕಾಟ ನಡೆಯುವ ಸಂಭವ ಕೂಡ ಹೆಚ್ಚಾಗಿದೆ.
ಯುದ್ಧ.. ಯುದ್ಧ.. ಯುದ್ಧ.. ಹೀಗೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಎಲ್ಲವನ್ನೂ ಹಾಳು ಮಾಡಿದೆ. ಕೊರೊನಾ ಕಂಟಕದ ಬಳಿಕ ಜಗತ್ತು ಸಂಕಷ್ಟಕ್ಕೆ ಸಿಲುಕಿದ್ದು ಇದೇ ರಷ್ಯಾ ಮತ್ತು ಉಕ್ರೇನ್ ಯುದ್ಧದ ಮೂಲಕ. ಉಕ್ರೇನ್ & ರಷ್ಯಾ ಯುದ್ಧದ ಪರಿಣಾಮ ಯುರೋಪ್ ಖಂಡ ಆರ್ಥಿಕ ಕುಸಿತ ಎದುರಿಸುತ್ತಿದೆ. ಇನ್ನು ಅಮೆರಿಕದ ಪಾಡು ಕೇಳಬೇಕಿಲ್ಲ, ಈ ಕಷ್ಟದಲ್ಲೇ ಅಮೆರಿಕ ಎಂಬ ದೈತ್ಯ ದೇಶ ಉಕ್ರೇನ್ ಬೆನ್ನಿಗೆ ನಿಂತು ಸಹಾಯ ಮಾಡುತ್ತಲೇ ಬಂದಿದೆ. ಇಷ್ಟಾದರೂ ಉಕ್ರೇನ್ ಮಾತ್ರ ರಷ್ಯಾ ವಿರುದ್ಧದ ಯುದ್ಧದಲ್ಲಿ ಗೆಲ್ಲುವುದು ಬಿಡಿ, ಸೂಕ್ತ ಹೋರಾಟವನ್ನೂ ತೋರಿಸಲು ಆಗುತ್ತಿಲ್ಲ. ಇಂತಹ ಸಮಯದಲ್ಲೇ ನೋಡ ನೋಡುತ್ತಲೇ ಈ ಯುದ್ಧ ಬರೋಬ್ಬರಿ 4 ವರ್ಷ ಮುಗಿಸಿ ಇದೀಗ 5ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ.

ಯುರೋಪ್ ಒಕ್ಕೂಟಕ್ಕೆ ದೊಡ್ಡ ತಲೆನೋವು
ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಯುರೋಪ್ ಒಕ್ಕೂಟದ ದೇಶಗಳು ಹಲವಾರು ಸಮಸ್ಯೆ ಎದುರಿಸುತ್ತಿವೆ. ಪ್ರಮುಖವಾಗಿ ತೈಲ, ಅನಿಲ ಸರಬರಾಜು ವಿಚಾರದಲ್ಲಿ ಯುರೋಪ್ ದೇಶಗಳು ಇದೀಗ ಒದ್ದಾಡುತ್ತಿವೆ. ಆದರೆ ಯುದ್ಧ ನಿಂತ ನಂತರ ಎಲ್ಲ ಸರಿ ಹೋಗಬಹುದು ಎನ್ನುವ ನಿರೀಕ್ಷೆ ಮನೆಮಾಡಿದೆ ಈಗ. ಹೀಗಿದ್ದಾಗ ಉಕ್ರೇನ್ ಬೆನ್ನಿಗೆ ನಿಂತಿರುವ ಯುರೋಪ್ ಒಕ್ಕೂಟದ ದೇಶಗಳು ಭರ್ಜರಿ ಡಿಮ್ಯಾಂಡ್ ಇಟ್ಟಿದ್ದು, ಇದಕ್ಕೆಲ್ಲಾ ರಷ್ಯಾ ಒಪ್ಪುತ್ತಿಲ್ಲ. ರಷ್ಯಾ ತಾನು ವಶಕ್ಕೆ ಪಡೆದಿರುವ ಜಾಗ ವಾಪಸ್ ಕೊಡಲ್ಲ ಎನ್ನುತ್ತಿದೆ. ಈ ವಿಚಾರವಾಗಿ ಅಮೆರಿಕ ಇಬ್ಬರನ್ನೂ ಒಪ್ಪಿಸಿ ಯುದ್ಧವನ್ನು ನಿಲ್ಲಿಸಬೇಕಾದ ಭಾರಿ ದೊಡ್ಡ ಅನಿವಾರ್ಯತೆ ಇದೆ. ಹೀಗಾಗಿ ಅದೆಷ್ಟೇ ಸುತ್ತಿನಲ್ಲಿ ಶಾಂತಿ ಮಾತುಕತೆ ನಡೆದರೂ ಅದು ಯಶಸ್ಸನ್ನು ಕಾಣುತ್ತಿಲ್ಲ.












Click it and Unblock the Notifications