ಲಾಯರ್ ಆಗಿದ್ದವಳು ಈಗ ಡಾಗ್ ವಾಕರ್ ಆದ ಮಹಿಳೆ: ಆದ್ರೆ ಆದಾಯ ಮಾತ್ರ ದಿನಕ್ಕೆ 50,000 ರೂ.!

ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ವೃತ್ತಿಜೀವನದ ಒತ್ತಡದಿಂದ ಬೇಸತ್ತು, ತಮ್ಮಿಷ್ಟದ ವೃತ್ತಿಯನ್ನ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಕ್ಷಾಂತರ ರೂಪಾಯಿ ಸಂಬಳವಿದ್ದರೂ ನೆಮ್ಮದಿ ಇಲ್ಲದ ಕಾರಣ ಅನೇಕರು ವೃತ್ತಿ ಬದಲಾವಣೆಯತ್ತ ಮುಖ ಮಾಡುತ್ತಿದ್ದಾರೆ.

ಲಂಡನ್‌ನ 30 ವರ್ಷದ ಲಿಜ್ ಈಸ್ಟ್ ಸಹ ಇದಕ್ಕೆ ಹೊರತಾಗಿರಲಿಲ್ಲ. ಇವರು ಅಪರಾಧ ವಿಭಾಗದಲ್ಲಿ ಲಾಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ತಮ್ಮ ಕೈತುಂಬಾ ಸಂಬಳ ತರುತ್ತಿದ್ದ ಈ ಹುದ್ದೆಯನ್ನ ಬಿಟ್ಟು, ಈಗ ನಾಯಿ ವಾಕಿಂಗ್ (Dog walking) ಬ್ಯುಸಿನೆಸ್ ಆರಂಭಿಸಿದ್ದಾರೆ. ವಿಶೇಷವೆಂದರೆ, ಅವರು ಈಗ ಮೊದಲಿಗಿಂತ ಹೆಚ್ಚು ಹಣವನ್ನ ಗಳಿಸುತ್ತಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

UK Woman Quits Law Career to Become a Dog Walker Now She Earns Up To Rs 50 000 Per Day

ಕಾರ್ಪೊರೇಟ್ ಲೈಫ್ ಮತ್ತು ಒತ್ತಡದ ಜೀವನ

ಲಿಜ್ ಈಸ್ಟ್ ಅವರು ಕ್ರಿಮಿನಲ್ ಡಿಫೆನ್ಸ್ ವಿಭಾಗದಲ್ಲಿ ಪ್ಯಾರಾಲೀಗಲ್ ಆಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ವೃತ್ತಿಜೀವನವು ಅವರಿಗೆ ಸಾಕಷ್ಟು ಆಯಾಸ ತರಿಸುತ್ತಿತ್ತು. ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಕೆಲಸ ಮಾಡಬೇಕಾಗಿತ್ತು. ಜತೆಗೆ ಲಂಡನ್‌ಗೆ ಪ್ರಯಾಣಿಸಲು ಎರಡು ಗಂಟೆ ಬೇಕಾಗುತ್ತಿತ್ತು. ಕೋರ್ಟ್ ಅಲೆದಾಟ, ಜೈಲಿಗೆ ಭೇಟಿ ನೀಡುವುದು, ಕ್ಲೈಂಟ್‌ಗಳೊಂದಿಗೆ ಚರ್ಚಿಸುವುದು ಹೀಗೆ ಬಿಡುವಿಲ್ಲದ ದಿನಚರಿ ಅವರದ್ದಾಗಿತ್ತು.

ಕಾರ್ಪೊರೇಟ್ ಲೈಫ್ ಸಂಸ್ಕೃತಿಯಲ್ಲಿ ಕೆಲಸದ ನಂತರ ಸಹೋದ್ಯೋಗಿಗಳೊಂದಿಗೆ ಬೆರೆಯುವುದು ಕೂಡ ಅನಿವಾರ್ಯವಾಗಿತ್ತು. ಇದರಿಂದಾಗಿ ಮನೆಗೆ ಮರಳಲು ರಾತ್ರಿ 9 ಅಥವಾ 10 ಗಂಟೆಯಾಗುತ್ತಿತ್ತು. ಇದು ಕುಟುಂಬ ನಿರ್ವಹಣೆಗೆ ಕಷ್ಟಕರವಾಗಿತ್ತು ಎಂದು ಲಿಜ್ ಹೇಳುತ್ತಾರೆ.

ಸ್ಫೂರ್ತಿದಾಯಕ ವೃತ್ತಿ ಬದಲಾವಣೆ

ಲಿಜ್ ಅವರ ಪತಿ ನಾಯಿ ವಾಕಿಂಗ್ ಮತ್ತು ಬೋರ್ಡಿಂಗ್ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಕೆಲಸವನ್ನ ಅತ್ಯಂತ ಪ್ರೀತಿಯಿಂದ ಮಾಡುವುದನ್ನ ಗಮನಿಸಿದ ಲಿಜ್‌ಗೆ ಅಚ್ಚರಿಯಾಯಿತು. "ನನ್ನ ಪತಿ ತಮ್ಮ ಕೆಲಸವನ್ನು ಇಷ್ಟಪಡುತ್ತಿರುವಾಗ, ನಾನು ಯಾಕೆ ಇಷ್ಟವಿಲ್ಲದ ಕೆಲಸವನ್ನು ಮಾಡಬೇಕು? ವಾರಾಂತ್ಯದಲ್ಲಿ ಯಾಕೆ ಭಯಪಡಬೇಕು?" ಎಂಬ ಪ್ರಶ್ನೆ ಅವರಲ್ಲಿ ಮೂಡಿತು. ಈ ಆಲೋಚನೆಯೇ ಅವರ ಈ ವೃತ್ತಿ ಬದಲಾವಣೆಗೆ ನಾಂದಿಯಾಯಿತು.

ತಮ್ಮ ಕಾರ್ಪೊರೇಟ್ ಹುದ್ದೆಗೆ ರಾಜೀನಾಮೆ ನೀಡಿದ ಲಿಜ್, ಆರಂಭದಲ್ಲಿ ಒಂದು ವ್ಯಾನ್ ಖರೀದಿಸಿ, ಸ್ಥಳೀಯ ಪಬ್‌ವೊಂದರಲ್ಲಿ ಕೆಲಸ ಮಾಡುತ್ತಲೇ ತಮ್ಮ ನಾಯಿ ವಾಕಿಂಗ್ ವ್ಯವಹಾರವನ್ನ ಆರಂಭಿಸಿದರು.

ನಾಯಿ ವಾಕಿಂಗ್ ಬ್ಯುಸಿನೆಸ್‌ನಿಂದ ದಿನಕ್ಕೆ 50000 ಗಳಿಕೆ

ಪ್ರಸ್ತುತ ಲಿಜ್ ಅವರು ದಿನಕ್ಕೆ ನಾಲ್ಕು ಬಾರಿ ಒಟ್ಟು 20 ರಿಂದ 30 ನಾಯಿಗಳನ್ನ ವಾಕಿಂಗ್‌ಗೆ ಕರೆದೊಯ್ಯುತ್ತಾರೆ. ಪ್ರತಿ ನಾಯಿಗೆ ಒಂದು ಗಂಟೆಗೆ ಸುಮಾರು 19 ಡಾಲರ್‌ ಶುಲ್ಕ ವಿಧಿಸುತ್ತಾರೆ. ಅವರ ದೈನಂದಿನ ಸಂಪಾದನೆ ಸುಮಾರು 400 ರಿಂದ 530 ಡಾಲರ್‌ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 38,000 ದಿಂದ 50,000 ರೂಪಾಯಿ ಗಳಿಕೆಯಿದೆ.

ಕಾರ್ಪೊರೇಟ್ ಕೆಲಸದಲ್ಲಿದ್ದಾಗ ದುಡಿಯುತ್ತಿದ್ದಕ್ಕಿಂತ ಸಾವಿರಾರು ರೂಪಾಯಿ ಹೆಚ್ಚು ಹಣವನ್ನ ಈಗ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಹಿಂದಿಗಿಂತ ಕೇವಲ ಅರ್ಧದಷ್ಟು ಸಮಯ ಮಾತ್ರ ಕೆಲಸ ಮಾಡುತ್ತಿದ್ದಾರೆ.

ನಾಯಿಗಳ ಮೇಲಿನ ಪ್ರೀತಿ

ವಕೀಲೆ ವೃತ್ತಿ ಬಿಟ್ಟು ನಾಯಿಗಳನ್ನ ವಾಕಿಂಗ್ ಮಾಡಿಸುವ ಕೆಲಸಕ್ಕೆ ಸೇರಿದ್ದನ್ನ ನೋಡಿ ಅನೇಕರು ಟೀಕಿಸಿದರು. "ಇಷ್ಟು ವರ್ಷ ಕಷ್ಟಪಟ್ಟು ಓದಿ, ಈಗ ನಾಯಿಗಳನ್ನ ವಾಕ್ ಮಾಡಿಸುತ್ತಿದ್ದೀರಾ?" ಎಂದು ಕೆಲವರು ಪ್ರಶ್ನಿಸಿದರು. ಆದರೆ ಲಿಜ್ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ.

"ನಾನು ಆರು ವರ್ಷಗಳಲ್ಲಿ ಕಲಿತದ್ದನ್ನ ಈಗಲೂ ನನ್ನ ದೈನಂದಿನ ಜೀವನದಲ್ಲಿ ಬಳಸುತ್ತಿದ್ದೇನೆ" ಎಂದು ದಿಟ್ಟ ಉತ್ತರ ನೀಡುತ್ತಾರೆ. "ಕೇವಲ ಹೆಚ್ಚು ಹಣ ಸಂಪಾದನೆಗಾಗಿಯೇ ಈ ಕೆಲಸಕ್ಕೆ ಬರಬೇಡಿ, ನಾಯಿಗಳ ಮೇಲಿನ ಪ್ರೀತಿ ಹಾಗೂ ಪ್ರಕೃತಿಯ ಒಡನಾಟ ಇಷ್ಟವಿದ್ದರೆ ಮಾತ್ರ ಈ ವೃತ್ತಿ ಆಯ್ಕೆ ಮಾಡಿ" ಎಂದು ಲಿಜ್ ಸಲಹೆ ನೀಡುತ್ತಾರೆ. "ಜೀವನ ಬಹಳ ಚಿಕ್ಕದು, ನಿಮಗೆ ಇಷ್ಟವಿಲ್ಲದ ಕೆಲಸದಲ್ಲಿ ಒದ್ದಾಡಬೇಡಿ, ಕೂಡಲೇ ಬದಲಾವಣೆ ತನ್ನಿ" ಎಂಬುದು ಅವರ ಕಿವಿಮಾತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+