ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆ ಪ್ರಧಾನಿ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಸ್ಪರ್ಧೆ?

|
Google Oneindia Kannada News

ಲಂಡನ್, ಅಕ್ಟೋಬರ್ 20: ಯುನೈಟೆಡ್ ಕಿಂಗ್ ಡಮ್ ರಾಜಕೀಯವು ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ಗುರುವಾರ ಸಂಜೆ ರಾಜೀನಾಮೆ ನೀಡಿದ ಲಿಜ್ ಟ್ರಸ್ ಬದಲಿಗೆ ಕನ್ಸರ್ವೇಟಿವ್ ಪಕ್ಷದಿಂದ ಬ್ರಿಟಿಷ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕೋವಿಡ್ -19 ಲಾಕ್‌ಡೌನ್ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಜಾನ್ಸನ್ ಈ ವರ್ಷದ ಆರಂಭದಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ದೇಶದ ನೂತನ ಪ್ರಧಾನಿ ಆಗಿ ಲಿಜ್ ಟ್ರಸ್ ಅಧಿಕಾರ ವಹಿಸಿಕೊಂಡಿದ್ದರು.

ಲಿಜ್ ಟ್ರಸ್ ರಾಜೀನಾಮೆ ಬಳಿಕ ಮತ್ತೆ ರಿಷಿ ಸುನಕ್ ಮೇಲೆ ಹೆಚ್ಚಿದ ನಿರೀಕ್ಷೆಲಿಜ್ ಟ್ರಸ್ ರಾಜೀನಾಮೆ ಬಳಿಕ ಮತ್ತೆ ರಿಷಿ ಸುನಕ್ ಮೇಲೆ ಹೆಚ್ಚಿದ ನಿರೀಕ್ಷೆ

ಬೋರಿಸ್ ಜಾನ್ಸನ್ ಸ್ಪರ್ಧೆಯ ಬಗ್ಗೆ ಸದ್ದು ಕೇಳಿ ಬರುತ್ತಿದೆ, ಆದರೆ ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯ ಎಂದು ಟೈಮ್ಸ್‌ನ ರಾಜಕೀಯ ಸಂಪಾದಕ ಸ್ಟೀವನ್ ಸ್ವಿನ್‌ಫೋರ್ಡ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಯುಕೆ ಪ್ರಧಾನಮಂತ್ರಿ ಲಿಜ್ ಟ್ರಸ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಹತ್ವಾಕಾಂಕ್ಷೆಯ ತೆರಿಗೆ ಕಡಿತ ನೀತಿಯ ನಡುವೆ ವಿವಾದಾತ್ಮಕ ಆಳ್ವಿಕೆಯನ್ನು ಕೊನೆಗೊಳಿಸಿದರು.

UK Politics: Boris Johnson will expected to stand in contest to replace Ex-PM Liz Truss

ರಾಜೀನಾಮೆ ಬಗ್ಗೆ ಉಲ್ಲೇಖಿಸಿದ್ದ ಲಿಜ್ ಟ್ರಸ್:

ಈ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡು ಆಯ್ಕೆಯಾದ ಜನಾದೇಶವನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಇದರ ಕುರಿತು ಕಿಂಗ್ ಚಾರ್ಲ್ಸ್‌ಗೆ ತಿಳಿಸಿದ್ದು, ನಾನು ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ," ಎಂದು ಲಿಜ್ ಟ್ರಸ್ ಹೇಳಿದ್ದರು. ಇವರ ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಸರ್ಕಾರದ ಸಾಲದ ವೆಚ್ಚವು ಏರಿತು ಮತ್ತು ಪೌಂಡ್ ಮತ್ತಷ್ಟು ಕುಸಿಯಿತು.

ಮುಂದಿನ ವಾರದೊಳಗೆ ಉತ್ತರಾಧಿಕಾರಿ ಆಯ್ಕೆ:

ಯುನೈಟೆಡ್ ಕಿಂಗ್ ಡಮ್ ರಾಜಕೀಯ ಬೆಳವಣಿಗೆಯ ಮಧ್ಯೆ ಮುಂದಿನ ವಾರದೊಳಗೆ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದಕ್ಕಾಗಿ ಚುನಾವಣೆಯನ್ನು ಪೂರ್ಣಗೊಳಿಸಲಾಗುವುದು ಎಂದು ನಿರ್ಗಮಿತ ಪ್ರಧಾನಿ ಲಿಜ್‌ ಟ್ರಸ್‌ ಘೋಷಿಸಿದ್ದಾರೆ. ಕನ್ಸರ್ವೇಟಿವ್ ನಾಯಕ ಜೆರೆಮಿ ಹಂಟ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ಮುಂಚಿತವಾಗಿ ಘೋಷಿಸಿದ್ದಾರೆ.

ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಲಿಜ್ ಟ್ರಸ್ ಸೋಲಿಸಿದ ರಿಷಿ ಸುನಕ್ ಅವರು ಚುನಾವಣೆಯಲ್ಲಿ ಕಾಣಿಸಿಕೊಳ್ಳುವ ಸಂಭಾವ್ಯ ಹೆಸರುಗಳಲ್ಲಿ ಒಂದಾಗಿದೆ. ರಿಷಿ ಸುನಕ್ ಗೆದ್ದರೆ ಅವರು ಯುಕೆ ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗುತ್ತಾರೆ.

English summary
UK Politics: Boris Johnson will expected to stand in contest to replace Ex-PM Liz Truss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X