• search

ಯುಕೆ - ಇಂಡಿಯಾ ವೀಕ್‌ - 2018ಕ್ಕೆ ಲಂಡನ್ ನಲ್ಲಿ ಅದ್ಧೂರಿ ಚಾಲನೆ

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಲಂಡನ್, ಜೂನ್ 18: ಜೂನ್ 18ರಿಂದ 22ರವರೆಗೆ ನಡೆಯಲಿರುವ ಯುಕೆ - ಇಂಡಿಯಾ ವೀಕ್ 2018ಕ್ಕೆ ಲಂಡನ್‌ನ ತಾಜ್ ಬಕಿಂಗ್‌ಹ್ಯಾಂ ಗೇಟ್ ಹೋಟೆಲ್‌ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಶೃಂಗ ಸಮ್ಮೇಳನದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಹಲವಾರು ಚರ್ಚಾಗೋಷ್ಠಿಗಳು ನಡೆಯಲಿವೆ. ಜೊತೆಗೆ ಯುಕೆ, ಇಂಡಿಯಾಗಳ ಸಂಬಂಧದ ಸಂಭ್ರಮಾಚರಣೆಗಳನ್ನು ಆಯೋಜಿಸಲಾಗಿದ್ದು, ಎರಡೂ ದೇಶಗಳ ಗಣ್ಯಾತಿಗಣ್ಯರು ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

  ಬ್ರಿಟನ್ ಸಂಸದ ಹಾಗೂ ಇಂಟರ್‌ನ್ಯಾಷನಲ್ ಟ್ರೇಡ್ ಸೆಕ್ರೆಟರಿ ಲಿಯಾಮ್ ಫಾಕ್ಸ್, ಸಂಸದ ಎಮಿಲಿ ಥಾರ್ನಬೆರ್ರಿ, ಸಂಸದ ಹಾಗೂ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಡಿಜಿಟಲ್, ಕಲ್ಚರ್, ಮೀಡಿಯಾ ಆಂಡ್ ಸ್ಪೋರ್ಟ್‌ನ ಮ್ಯಾಟ್ ಹ್ಯಾನಕಾಕ್, ಬ್ರಿಟನ್ ನಲ್ಲಿರುವ ಭಾರತದ ಹೈ ಕಮೀಶನರ್ ಯಶವರ್ಧನ್ ಸಿನ್ಹಾ, ಭಾರತದ ಸಚಿವ ಮನೋಜ್ ಸಿನ್ಹಾ, ಇಂಡಿಯಾ ಇನ್ ಕಾರ್ಪ್ ಸಿಇಒ ಮನೋಜ್ ಲಡ್ವಾ ಜಂಟಿಯಾಗಿ ಸಮಾರಂಭವನ್ನು ಉದ್ಘಾಟಿಸಿದರು.

  UK-India week 2018: 5-day global event begins in London

  ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಲಿಯಾಮ್ ಫಾಕ್ಸ್, "ಎರಡೂ ದೇಶಗಳು ಪರಸ್ಪರರ ಅಭಿವೃದ್ಧಿಗೆ, ಉದ್ಯೋಗಗಳ ಉತ್ಪಾದನೆಗೆ, ಕೌಶಲ್ಯ ವೃದ್ಧಿ ಹಾಗೂ ಎರಡೂ ಆರ್ಥಿಕತೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಆಸಕ್ತಿಯನ್ನು ಹೊಂದಿವೆ," ಎಂದು ಅಭಿಪ್ರಾಯಪಟ್ಟರು.

  ಇನ್ನು, "ಯುಕೆ ಇಂಡಿಯಾ ವೀಕ್-2018 ನಮ್ಮೊಳಗಿನ ಹಂಚಿಕೊಂಡ ಅವಕಾಶಗಳನ್ನು ನಿರ್ಮಿಸಲು ಒಂದು ಅದ್ಭುತ ಕಾರ್ಯಕ್ರಮವಾಗಿದೆ," ಎಂದು ಮ್ಯಾಟ್ ಹ್ಯಾನಕಾಕ್ ಬಣ್ಣಿಸಿದರು.

  ಇದಕ್ಕೂ ಮೊದಲು ಪ್ರಾಸ್ತವಿಕ ಮಾತನ್ನಾಡಿದ ಕಾರ್ಯಕ್ರಮದ ಸಂಸ್ಥಾಪಕ ಮತ್ತು ಇಂಡಿಯಾ ಇನ್ ಕಾರ್ಪ್ ಸಿಇಒ ಮನೋಜ್ ಲಡ್ವಾ, "ಎರಡು ರಾಷ್ಟ್ರಗಳ ನಡುವಿನ ಭವಿಷ್ಯವು ಜನರ ಬಳಿಯಲ್ಲಿದೆ," ಎಂದು ಹೇಳಿದರು.

  UK-India week 2018: 5-day global event begins in London

  ಇದೇ ವೇದಿಕೆಯಲ್ಲಿ ಭಾರತದ ಅರ್ಥ ಶಾಸ್ತ್ರಜ್ಞ ಹಾಗೂ ಭಾರತದ ನೀತಿ ಆಯೋಗದ ಅಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ತಮ್ಮ ವಿಚಾರ ಮಂಡಿಸಲಿದ್ದಾರೆ.

  ಯುಕೆ-ಇಂಡಿಯಾ ವೀಕ್‌ನಲ್ಲಿ ಭಾಗವಹಿಸಲಿದೆ ಗಣ್ಯರ ದಂಡು

  ಭಾರತೀಯ ಜನತಾ ಪಕ್ಷದ ವಿದೇಶಾಂಗ ನೀತಿ ವೇದಿಕೆ ಮುಖ್ಯಸ್ಥ ವಿಜಯ ಚೌಥಾಯಿವಾಲೆ, ಲೋಕಸಭಾ ಸದಸ್ಯ ಡಾ. ಸ್ವಪನ್ ದಾಸಗುಪ್ತಾ ಇದರಲ್ಲಿ ಪಾಲ್ಗೊಂಡಿದ್ದಾರೆ. ಭಾರತದ ಹಣಕಾಸು, ರೈಲ್ವೆ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪಿಯೂಶ್ ಗೋಯೆಲ್ ವಿಡಿಯೋ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

  ಒಟ್ಟಾರೆ ಪ್ರತಿಷ್ಠಿತ ಕಾರ್ಯಕ್ರಮವಾಗಿರುವ ಯುಕೆ-ಇಂಡಿಯಾ ಲೀಡರ್‌ಶಿಪ್ ಕಾನ್‌ಕ್ಲೇವ್‌ನಲ್ಲಿ ಭಾರತದ ಹಲವಾರು ರಾಜಕೀಯ ಹಾಗೂ ಉದ್ಯಮ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಬ್ರೆಕ್ಸಿಟ್ ನಂತರದ ಬ್ರಿಟನ್‌ನಲ್ಲಿ ಭಾರತಕ್ಕಿರುವ ಹೂಡಿಕೆಗಳ ಅವಕಾಶಗಳ ಕುರಿತು ಈ ಶೃಂಗ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  UK-India Week 2018 and the 2nd Edition of 100 Most Influential in UK India Relations formally launched today. The five-day international event where 'Global Britain Meets Global India' will be held in London and Buckinghamshire.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more