ಉಬರ್ ನಿಂದ ಮಹಾವಂಚನೆ 500 ಮಿಲಿಯನ್ ಡಾಲರ್ ಗುಳಂ?
ಸ್ಯಾನ್ ಫ್ರಾನಿಸ್ಕೋ, ಸೆಪ್ಟೆಂಬರ್ 12: ಕ್ಯಾಲಿಫೋರ್ನಿಯಾ ಮೂಲದ ಉಬರ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಚಾಲಕರಿಗೆ ನೀಡಬೇಕಿರುವ ಗುತ್ತಿಗೆ ಮೊತ್ತವನ್ನು ನೀಡದೆ ಭಾರಿ ವಂಚನೆ ಮಾಡಿದೆ ಎಂದು ಆರೋಪಿಸಲಾಗಿದೆ.
ಪ್ರತಿ ಗಂಟೆಗೆ ನೀಡಬೇಕಿರುವ 9.07 ಡಾಲರ್ ಭತ್ಯೆಯನ್ನು ನೀಡುತ್ತಿಲ್ಲ. ಚಾಲಕರನ್ನು ಉದ್ಯೋಗಿಗಳಂತೆ ಪರಿಗಣಿಸದೆ ಅವರಿಗೆ ಸಿಗಬೇಕಿರುವ ಸಂಬಳ, ಭತ್ಯೆ ಗುಳಂ ಮಾಡಲಾಗಿದೆ. ಈ ರೀತಿ 500 ಮಿಲಿಯನ್ ಡಾಲರ್ ಗೂ ಅಧಿಕ ಮೊತ್ತ ಉಳಿಸಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ಕೋರ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಾಲಕರಿಗೆ ಸಾಮಾಜಿಕ ಭದ್ರತೆ ಹಾಗೂ ಆರೋಗ್ಯ ಭತ್ಯೆ ಸಿಗುತ್ತಿಲ್ಲ, ಕನಿಷ್ಟ ವೇತನ, ಓವರ್ ಟೈಮ್, ಊಟ, ವಿಶ್ರಾಂತಿ ಅವಧಿ, ಕಾರ್ಮಿಕ ಪರಿಹಾರ, ನಿರುದ್ಯೋಗ ಭತ್ಯೆ, ಆರೋಗ್ಯ ವಿಮೆ ಯಾವುದೂ ಅವರನ್ನು ತಲುಪುತ್ತಿಲ್ಲ ಎಂದು ವಾದಿಸಲಾಗಿದೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಕ್ಯಾಲಿಫೋರ್ನಿಯಾ ಸುಪ್ರೀಂಕೋರ್ಟ್, ಸ್ವತಂತ್ರ ಗುತ್ತಿಗೆದಾರರನ್ನು ಕಾರ್ಮಿಕರಂತೆ ಪರಿಗಣಿಸಲು ಆದೇಶಿಸಿತ್ತು. ಇದನ್ನು ಉಲ್ಲೇಖಿಸಿರುವ ದೂರುದಾರರಾದ ಕಾರು ಸರ್ವೀಸ್ ಸಂಸ್ಥೆ, ಉಬರ್ ನಿಂದ ಗುತ್ತಿಗೆ ಅಧಾರಿತ ಸಿಬ್ಬಂದಿಗಳಿಗೆ ಮೋಸವಾಗಿದೆ ಎಂದಿದೆ.
Diva Limousine v. Uber Technologies Inc., 18-cv-05546, U.S. District Court, Northern District of California (San Francisco)- ಬಗ್ಗೆ ಉಬರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications