• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಹೋರ್ ವಿಮಾನ ನಿಲ್ದಾಣದಲ್ಲಿ ಗುಂಡಿಟ್ಟು ಇಬ್ಬರ ಹತ್ಯೆ; ಆತಂಕದ ವಾತಾವರಣ

|

ಲಾಹೋರ್, ಜುಲೈ 3: ಸೌದಿ ಅರೇಬಿಯಾದಲ್ಲಿ ಉಮ್ರಾ ಮುಗಿಸಿಕೊಂಡು ಹಿಂತಿರುಗಿದ ಇಬ್ಬರನ್ನು ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಲಾಹೋರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ವಿಮಾನ ನಿಲ್ದಾಣದ ಆಗಮನ ಪ್ರವೇಶ ದ್ವಾರದಲ್ಲಿ ನೂರಾರು ಪ್ರಯಾಣಿಕರು ಆತಂಕಕ್ಕೆ ಈಡಾದರು.

ಅಲ್ಲಮ ಇಕ್ಬಾಲ್ ಅಂತರರಾಷ್ಟ್ರೀಯ ವಿಮಾನದ ಅಂತರರಾಷ್ಟ್ರೀಯ ಆಗಮನದ ಲೌಂಜ್ ಬಳಿ ಸ್ಥಳೀಯ ಕಾಲಮಾನ ಬೆಳಗ್ಗೆ ಹತ್ತು ಗಂಟೆಗೆ ಗುಂಡಿಟ್ಟು ಕೊಲ್ಲಲಾಗಿದೆ.

ಗುಂಡಿನ ದಾಳಿ ವೇಳೆ ಒಬ್ಬರಿಗೆ ಗಾಯವಾಗಿವೆ. ಶಂಕಿತರನ್ನು ಅರ್ಷದ್ ಹಾಗೂ ಶಾನ್ ಎಂದು ಗುರುತಿಸಲಾಗಿದೆ. ಅವರಿಬ್ಬರನ್ನೂ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಶಂಕಿತರು ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿಯಲ್ಲಿ ಬಂದಿಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏರ್ ಪೋರ್ಟ್ ನೊಳಗೆ ಹೀಗೆ ಗುಂಡಿನ ದಾಳಿ ನಡೆದಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆವರಣದಲ್ಲಿ ಭದ್ರತೆ ಒದಗಿಸುವ ಸಲುವಾಗಿ ಭಾರೀ ಪ್ರಮಾಣದಲ್ಲಿ ಪೊಲೀಸರು ಸ್ಥಳದಲ್ಲಿ ಜಮೆ ಆಗಿದ್ದಾರೆ. ವಿಧಿವಿಜ್ಞಾನ ತಂಡದ ಸದಸ್ಯರು ಸ್ಥಳಕ್ಕೆ ಬಂದಿದ್ದು, ವಿಮಾನ ನಿಲ್ದಾಣದ ಆಗಮನ- ನಿರ್ಗಮನದ ದ್ವಾರಗಳನ್ನು ಮುಚ್ಚಲಾಗಿತ್ತು.

English summary
Two people shot dead in Pakistan's Lahore international airport on Wednesday. They were returning from Saudi Arabia, after completing Umrah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X