ಕಾಂಚನಜುಂಗಾದಲ್ಲಿ ಭಾರತದ ಇಬ್ಬರು ಪರ್ವತಾರೋಹಿಗಳ ಸಾವು
ಕಠ್ಮಂಡು, ಮೇ 16: ದೇಶದ ಮೂರನೇ ಅತಿ ಎತ್ತರದ ಪರ್ವತ ಎಂಬ ಖ್ಯಾತಿಗೆ ಪಾತ್ರವಾಗಿರುವ ನೇಪಾಳದ ಕಾಂಚನಗಂಗಾ ಪರ್ವತ ಏರುವಾಗ ಭಾರತದ ಇಬ್ಬರು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.
ಬಿಪ್ಲಬ್ ಬೈದ್ಯ(48), ಕುಂತಲ್ ಕನ್ರಾರ್(46) ಮೃತರು.ಪೀಕ್ ಪ್ರಮೋಷನ್ ಕಂಪನಿಯ ಪಸಂಗ್ ಶೆರ್ಪಾ ಹೇಳುವ ಪ್ರಕಾರ ಬೈದ್ಯ ಅವರು 8,586 ಮೀಟರ್ ಎತ್ತರಕ್ಕೇರಿದ್ದರು ಅಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕನ್ರಾರ್ ಪರ್ವತವನ್ನು ಏರುವಾಗಲೇ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇಬ್ಬರೂ ಕೊಲ್ಕತ್ತ ಮೂಲದವರು ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಸ್ಪ್ರಿಂಗ್ ಸೀಸನ್‌ನನ್ನು ನೂರಾರು ಮಂದಿ ಪರ್ವತಾರೋಹಿಗಳು ಬೇರೆ ಬೇರೆ ಪರ್ವತಗಳನ್ನು ಏರುತ್ತಾರೆ. ಅವರ ಚಾರಣ ಮೇ ತಿಂಗಳು ಕೊನೆಗೊಳ್ಳುತ್ತದೆ.












Click it and Unblock the Notifications