ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್, ಒಬಾಮಾ ಕಳವಳ
ಕ್ಯಾಲಿಫೋರ್ನಿಯಾ, ಡಿ. 03: ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಬೆರ್ನಾಡಿನೋ ನಗರದಲ್ಲಿ ಮೂವರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ 14 ಜನ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.
ಹೆಚ್ಚುತ್ತಿರುವ ಶೂಟೌಟ್ ಪ್ರಕರಣಗಳ ಬಗ್ಗೆ ಅಧ್ಯಕ್ಷ ಬರಾಕ್ ಒಬಾಮಾ ಅವರು ತೀವ್ರ ಕಳಕಳ ವ್ಯಕ್ತಪಡಿಸಿದ್ದಾರೆ. ಜನರ ಸುರಕ್ಷತೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಜನತೆ ಆತಂಕ ಪಡಬೇಕಾಗಿಲ್ಲ. ದುಷ್ಕರ್ಮಿಗಳ ಸದೆಬಡಿಯಲಾಗುವುದು ಎಂದು ಹೇಳಿದ್ದಾರೆ.
ಮೂವರು ಶಂಕಿತ ದಾಳಿಕೋರರ ಪೈಕಿ ಇಬ್ಬರನ್ನು ಕೊಲ್ಲಲಾಗಿದೆ. ಮತ್ತೊಬ್ಬನನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಯಾನ್ ಬೆರ್ನಾಡಿನೋ ನಗರದ ಇನ್ ಲ್ಯಾಂಡ್ ಪ್ರಾದೇಶಿಕ ಕೇಂದ್ರ ಕಟ್ಟಡದ ಬಳಿ ಗುಂಡಿನ ದಾಳಿ ನಡೆದಿದ್ದು, 14 ಜನ ಮೃತಪಟ್ಟಿದ್ದಾರೆ. 17ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂವರು ಬಂದೂಕುಧಾರಿಗಳು ಸೇನಾ ಸಿಬ್ಬಂದಿ ವೇಶದಲ್ಲಿ ಬಂದು ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ ಕಟ್ಟಡದಲ್ಲಿ ನೂರಾರು ಮಂದಿ ಒಳಗಿದ್ದರು. ದಾಳಿಯ ಹಿನ್ನಲೆ ಇನ್ನೂ ತಿಳಿದು ಬಂದಿಲ್ಲ. ಕಪ್ಪು ಬಣ್ಣದ ಎಸ್ ಯುವಿ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದರು. ಅದರೆ, ವಾಹನದ ಮೇಲೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಕೊಂದು ಹಾಕಲಾಗಿದೆ.
Here's the latest on the California mass shooting situation. #9News https://t.co/D4Fuhh6lCE
— Nine News Australia (@9NewsAUS) ಡಿಸೆಂಬರ್ 3, 2015 ಇಲ್ಲಿನ ವಿಕಲಾಂಗರ ಅಭಿವೃದ್ಧಿ ಕೇಂದ್ರದಲ್ಲಿ ನಡೆಯುತ್ತಿದ್ದ ಸಮ್ಮೇಳನದ ಕೊಠಡಿಗೆ ಒಬ್ಬ ಬಂದೂಕುಧಾರಿ ನುಗ್ಗಿ ಹತ್ಯೆಗೈದಿದ್ದಾನೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಬಂದೂಕುಧಾರಿಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ತತ್ ಕ್ಷಣದ ಮಾಹಿತಿಯಂತೆ ಇಬ್ಬರು ಬಂದೂಕುಧಾರಿಯನ್ನು ಕೊಂದು ಹಾಕಲಾಗಿದೆ. ಮೃತಪಟ್ಟವರ ಪೈಕಿ ಒಬ್ಬನನ್ನು ಸೈಯದ್ ಫರೂಕ್ ಎಂದು ಗುರುತಿಸಲಾಗಿದೆ ಎಂದು ಎಫ್ ಬಿಐ ನ ಸಹಾಯಕ ನಿರ್ದೇಶಕ ಡೇವಿಡ್ ಬೌಡಿಕ್ ಹೇಳಿದ್ದಾರೆ. ಘಟನೆ ಸಂಬಂಧಿಸಿದ ವಿಡಿಯೋ ವರದಿ ನೋಡಿ:












Click it and Unblock the Notifications