ವುಹಾನ್ ವೈರಸ್ ಬಗ್ಗೆ ತಿಳಿಸಿದ ಲಿ ಮೆಂಗ್ ಟ್ವಿಟ್ಟರ್ ಖಾತೆ ಬಂದ್
ಬೆಂಗಳೂರು, ಸೆ. 17: ಚೀನಾದ ವುಹಾನ್ ಪ್ರಾಂತ್ಯದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಲ್ಯಾಬಿನಿಂದಲೇ ಜಾಗತಿಕ ಸಾಂಕ್ರಾಮಿಕ ವೈರಸ್ ಕೊವಿಡ್ 19 ಉತ್ಪತ್ತಿಯಾಗಿದ್ದು, ಅಲ್ಲಿಂದಲೇ ಎಲ್ಲೆಡೆ ಪ್ರಸಾರವಾಗಿದೆ ಎಂದು ಸಂಶೋಧಕಿ ಡಾ. ಲಿ ಮೆಂಗ್ ಯಾನ್ ಪ್ರತಿಪಾದಿಸಿದ್ದು ತಿಳಿದಿರಬಹುದು. ಡಾ. ಲಿ ಮೆಂಗ್ ಅವರ ಸಾಮಾಜಿಕ ಜಾಲ ತಾಣ ಖಾತೆಗಳನ್ನು ಸ್ಥಗಿತಗೊಳಿಸಿರುವ ಸುದ್ದಿ ಬಂದಿದೆ.
ಡೈಲಿಮೇಲ್ ವರದಿಯಂತೆ , ವುಹಾನ್ ಲ್ಯಾಬಿನ ಬಗ್ಗೆ ಡಾ. ಲಿ ಮೆಂಗ್ ಅವರು ತಿಳಿಸುತ್ತಿದ್ದಂತೆ ಅವರ ಟ್ವಿಟ್ಟರ್ ಖಾತೆ ಸ್ಥಗಿತಗೊಂಡಿದೆ. Account suspended. Twitter suspends accounts which violate the Twitter Rules ಎಂಬ ಸಂದೇಶ ಸದ್ಯಕ್ಕೆ ಕಾಣಿಸುತ್ತಿದೆ.
ಈ ಬಗ್ಗೆ ಟ್ವಿಟ್ಟರ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಇತ್ತೀಚೆಗೆ ಕೊರೊನಾವೈರಸ್ ಕುರಿತ ಸತ್ಯಾಸತ್ಯತೆ ಸಂದೇಶಗಳಿದ್ದರೆ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಾ ಬಂದಿತ್ತು. ಕೊರೊನಾವೈರಸ್ ಕುರಿತಂತೆ ಸುಳ್ಳುಸುದ್ದಿ ಹಬ್ಬದಂತೆ ತಡೆಯುವುದು ಇದರ ಉದ್ದೇಶವಾಗಿತ್ತು.

ವುಹಾನ್ ಲ್ಯಾಬಿನಲ್ಲೇ ಕೊರೊನಾವೈರಸ್ ಸೃಷ್ಟಿಸಲಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ಇದು ಬಾವಲಿ, ಪಶು, ಪಕ್ಷಿ, ಸಸ್ತನಿಯಿಂದ ಉತ್ಪಾದನೆ ಹಾಗೂ ಹರಡುವಂಥ ವೈರಸ್ ಅಲ್ಲವೇ ಅಲ್ಲ, ಇದನ್ನು ಪ್ರಯೋಗಾಲಯದಲ್ಲೇ ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ಇರುವ ಸಾಕ್ಷಿ, ಪುರಾವೆಗಳನ್ನು ಮುಂದಿಟ್ಟುಕೊಂಡು ಮುಂದಿನ ವಿಜ್ಞಾನ ಸರಣಿ ಲೇಖನವನ್ನು ಸಾರ್ವಜನಿಕರ ಮುಂದಿಡುತ್ತೇನೆ ಎಂದು ವೈರೊಲೊಜಿಸ್ಟ್ ಹೇಳಿದ್ದಾರೆ.












Click it and Unblock the Notifications