Turkey: ಭಾರತದ ಮುಂದೆ ಮತ್ತೆ ಅಂಗಲಾಚಿದ ಮಿತ್ರದ್ರೋಹಿ ಟರ್ಕಿ! ಹೊಸ ವರಸೆ... ಈ ಸಲ ನಡೆಯಲ್ಲ ಎಂದ ಭಾರತೀಯರು!
Turkey: ಮಾಡುವುದನ್ನೆಲ್ಲವೂ ಮಾಡಿ, ಟರ್ಕಿ ದೇಶವು ಮತ್ತೆ ಭಾರತೀಯರ ಮುಂದೆ ಮತ್ತೆ ಅಂಗಲಾಚಲು ಪ್ರಾರಂಭಿಸಿದೆ ಅಂತ ಭಾರತೀಯರು ವ್ಯಂಗ್ಯವಾಡುತ್ತಿದ್ದಾರೆ. ಇದಕ್ಕೆ ಕಾರಣ ಟರ್ಕಿ ಮಾಡಿಕೊಂಡಿರುವ ಹೊಸ ರಿಕ್ವೆಸ್ಟ್. ಭಾರತ ಹಾಗೂ ಪಾಕಿಸ್ತಾನದ ನಡುವೆ ಇದೀಗ ಕದನ ವಿರಾಮ ಘೋಷಣೆಯಾಗಿದೆ. ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಎದುರಾದಾಗಲೇ ಟರ್ಕಿ ದೇಶದ ಯುದ್ಧ ವಿಮಾನಗಳು ಹಾಗೂ ಶಸ್ತ್ರಾಸ್ತ್ರಗಳು ಇರುವ ವಿಮಾನಗಳು ಪಾಕಿಸ್ತಾನದಲ್ಲಿ ಇಳಿದಿರುವ ಬಗ್ಗೆ ವರದಿಯಾಗಿತ್ತು. ಆದರೆ, ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ನಾವು ಪಾಕಿಸ್ತಾನಕ್ಕೆ ಯಾವುದೇ ನೆರವು ನೀಡಿಲ್ಲ ಅಂತ ಟರ್ಕಿ ನುಣುಚಿಕೊಂಡಿತ್ತು. ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟಾಗ ಟರ್ಕಿ ಕೊಟ್ಟ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಿ ಸೇನೆಯು ಭಾರತದ ವಿರುದ್ಧ ಬಳಸಿದ್ದು ಖಚಿತವಾಗಿತ್ತು. ಮಿತ್ರದೋಹ್ರಿ ಟರ್ಕಿ ಮತ್ತೆ ಭಾರತದ ಸಹಾಯವನ್ನು ಕೇಳುತ್ತಿದೆ.
ಟರ್ಕಿ ದೇಶಕ್ಕೆ ಸಂಕಷ್ಟ ಎದುರಾದ ಪ್ರತಿ ಸಂದರ್ಭದಲ್ಲೂ ಭಾರತವು ಮಿತ್ರ ರಾಷ್ಟ್ರವಾಗಿ ಬೆಂಬಲಕ್ಕೆ ನಿಂತಿದೆ. ಟರ್ಕಿಯಲ್ಲಿ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಆಪರೇಷನ್ ದೋಸ್ತ್ ಎನ್ನುವ ಹೆಸರಿನ ಮೂಲಕ ಭರಪೂರ ಸಹಾಯವನ್ನು ಭಾರತ ಮಾಡಿತ್ತು. ಹೌದು 2023ರಲ್ಲಿ ಟರ್ಕಿಯಲ್ಲಿ ಭೀಕರ ಭೂಕಂಪನ ಸಂಭವಿಸಿತ್ತು.

ಆಗ ಟರ್ಕಿಗೆ ಸಹಾಯ ಮಾಡಿದ್ದು ಭಾರತ. ಆದರೆ ಭಾರತದ ಬೆಂಬಲ ಹಾಗೂ ಸಹಕಾರವನ್ನೇ ಮರೆತಿರುವ ಟರ್ಕಿ ದೇಶವು ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿದೆ. ಭಾರತದ ವಿರುದ್ಧದ ಕಳ್ಳ ಮಾರ್ಗವಾಗಿ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಮಾಡಿರುವ ಪಾಕಿಸ್ತಾನಕ್ಕೆ ಭಾರೀ ಬೆಂಬಲ ಸೂಚಿಸುವ ಮೂಲಕ ಭಾರತಕ್ಕೆ ದ್ರೋಹ ಬಗೆಯುವ ಕೆಲಸವನ್ನು ಮಾಡಿದೆ.
ಭಾರತ ಹಾಗೂ ಪಾಕಿಸ್ತಾನದ ಸಂಘರ್ಷದ ವಿಚಾರದಲ್ಲಿ ಟರ್ಕಿ ನಡೆದುಕೊಂಡಿರುವ ರೀತಿಗೆ ಭಾರತೀಯರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ರೀತಿ ಇರುವಾಗಲೇ ಟರ್ಕಿ ಭಾರತೀಯರಲ್ಲಿ ಒಂದು ಮನವಿಯನ್ನು ಮಾಡಿದೆ ಎನ್ನಲಾಗಿದ್ದು. ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಟರ್ಕಿಯ ಹೊಸ ನಾಟಕಕ್ಕೆ ಭಾರತೀಯರು ಕೆಂಡವಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನವು ಟರ್ಕಿಯ ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಿರುವುದನ್ನು ಭಾರತೀಯ ಸೇನೆಯು ಈಚೆಗೆ ಬಹಿರಂಗಪಡಿಸಿತ್ತು.
ಟರ್ಕಿಯ ಹೊಸ ಮನವಿಯಲ್ಲಿ ಏನಿದೆ ?
ಟರ್ಕಿ ದೇಶಕ್ಕೆ ಪ್ರವಾಸೋದ್ಯಮವು ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿದೆ. ಭಾರತದ ಲಕ್ಷಾಂತರ ಜನ ಪ್ರತಿ ವರ್ಷ ಈ ದೇಶಕ್ಕೆ ಪ್ರವಾಸಕ್ಕೆಂದು ಹೋಗುತ್ತಾರೆ. ಇದರಿಂದ ಟರ್ಕಿ ಕೋಟ್ಯಾಂತರ ರೂಪಾಯಿ ಆದಾಯವನ್ನು ಗಳಿಸುತ್ತದೆ. ಆದರೆ, ಟರ್ಕಿ ಬಗೆದಿರುವ ದ್ರೋಹಕ್ಕೆ ಭಾರತೀಯರು ಪಾಠ ಕಲಿಸುವುದಕ್ಕೆ ಮುಂದಾಗಿದ್ದಾರೆ. ಬಾಯ್ ಕಟ್ ಟರ್ಕಿ ಟ್ರೆಂಡ್ ಸೃಷ್ಟಿಯಾಗಿದ್ದು. ಇದರ ಬೆನ್ನಲ್ಲೇ ನಮ್ಮನ್ನು ದೂರ ಬೇಡಿ ಪ್ಲೀಸ್ ಅಂತ ಟರ್ಕಿ ಹೊಸ ರಾಗ ಶುರು ಮಾಡಿಕೊಂಡಿದೆ.
ಟರ್ಕಿ ಪ್ರವಾಸೋದ್ಯಮ ಇಲಾಖೆಯು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಸ್ಥಳೀಯರಲ್ಲಿ ಬಹುಪಾಲು ಜನರಿಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ತಿಳಿದಿಲ್ಲ. ಅಲ್ಲದೇ ಇದು ನಮ್ಮ ದೇಶದ ದೈನಂದಿನ ಜೀವನ ಅಥವಾ ಇಲ್ಲಿನ ಪ್ರವಾಸೋದ್ಯಮ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ.
ಟರ್ಕಿಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಅಂಗಡಿಗಳು ಮತ್ತು ಎಲ್ಲಾ ಪ್ರವಾಸಿ ಆಕರ್ಷಣೆಗಳಲ್ಲಿ ಭಾರತೀಯ ಪ್ರಯಾಣಿಕರನ್ನು ಸ್ವಾಗತಿಸಲಾಗುತ್ತದೆ. ಅತ್ಯಂತ ಸೌಜನ್ಯದಿಂದ ನಡೆಸಿಕೊಳ್ಳಲಾಗುತ್ತದೆ ಹಾಗೂ ಯಾವಾಗಲೂ ಇದ್ದಂತೆಯೇ ಇದ್ದೇವೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿಯನ್ನು ಆಧರಿಸಿ ಟರ್ಕಿಗೆ ಯಾವುದೇ ಪ್ರವಾಸಗಳನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಭಾರತೀಯರಿಗೆ ಯಾವುದೇ ಕಾರಣವಿಲ್ಲ ಎಂದು ನಾವು ಅಂದುಕೊಂಡಿದ್ದೇವೆ. ಎಲ್ಲಾ ಪ್ರಯಾಣ ಪ್ಲ್ಯಾನ್‌ಗಳು ಯೋಜಿಸಿದಂತೆ ಮುಂದುವರಿಯಲಿದೆ. ಭಾರತೀಯ ಅತಿಥಿಗಳ ಮೇಲೆ ಯಾವುದೇ ನಿರ್ಬಂಧಗಳು ಅಥವಾ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳಿಲ್ಲ ಎಂದು ಹೇಳಿದೆ.
No thank you. 🤮#BoycottTurkey #SayNoToTurkey pic.twitter.com/YpTb4yzaSY
— Rajeev Chandrasekhar 🇮🇳 (@RajeevRC_X) May 13, 2025
ಮುಂದುವರಿದು ಟರ್ಕಿಯಲ್ಲಿ ನಿಮ್ಮ ವಾಸ್ತವ್ಯದ ಉದ್ದಕ್ಕೂ ಸೌಕರ್ಯ, ಸುರಕ್ಷತೆ ಮತ್ತು ಒಳ್ಳೆಯ ಅನುಭವ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ನಿಮಗೆ ಯಾವುದೇ ಹೆಚ್ಚುವರಿ ಗೊಂದಲಗಳು ಅಥವಾ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ. ವಿಧೇಯಪೂರ್ವಕವಾಗಿ, ಪ್ರವಾಸೋದ್ಯಮ ಇಲಾಖೆ, ಅಂಕಾರಾ ಎನ್ನುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಅನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಹಂಚಿಕೊಂಡಿದ್ದಾರೆ.
350 ಡ್ರೋನ್ ಬಳಕೆ: ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟ ಸಂದರ್ಭದಲ್ಲಿ ಬರೋಬ್ಬರಿ 350 ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ಪಾಕಿಸ್ತಾನ ಬಳಸಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಭಾರತದ ವಿರುದ್ಧದ ಹೋರಾಟದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ನೆರವಾಗಿರುವುದು ಖಚಿತವಾಗಿದೆ. ಇದನ್ನು ಭಾರತೀಯ ಸೇನೆಯೂ ಖಚಿತಪಡಿಸಿದೆ. ಹೀಗಾಗಿ, ಭಾರತೀಯರು ಸಹ ಈ ವಿಚಾರದಲ್ಲಿ ಬಾಯ್ ಕಟ್ ಟರ್ಕಿ ಅಂತ ಹೇಳುತ್ತಿದ್ದಾರೆ.
ಭಾರತೀಯರ ಆಕ್ರೋಶ: ಇನ್ನು ಟರ್ಕಿ ಡಬಲ್ ಗೇಮ್‌ಗೆ ಭಾರತೀಯರು ಕೆಂಡಾ ಮಂಡಲರಾಗಿದ್ದಾರೆ. ಭಾರತೀಯರು ಟರ್ಕಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಚೀನಾ ದೇಶವು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಆದರೆ, ಟರ್ಕಿ ಈ ವಿಚಾರದಲ್ಲಿ ಮಿತ್ರದ್ರೋಹವನ್ನೆಸಗಿದೆ. ನಾವು ಪಾಕಿಸ್ತಾನಕ್ಕೆ ಯಾವುದೇ ಸಹಾಯವನ್ನು ಮಾಡುತ್ತಿಲ್ಲ ಅಂತ ಹೇಳುತ್ತಲ್ಲೇ ಪಾಕಿಸ್ತಾನಕ್ಕೆ ಸಹಾಯ ಮಾಡಿರುವುದು ಇದೀಗ ಬಹಿರಂಗವಾಗಿದೆ.
ಟರ್ಕಿ ದೇಶಕ್ಕೆ ಪ್ರವಾಸೋದ್ಯಮದ ಜೊತೆಗೆ ವ್ಯಾಪಾರಕ್ಕೂ ಹೊಡೆತ
ಇನ್ನು ಭಾರತಕ್ಕೆ ಮಿತ್ರದ್ರೋಹ ವೆಸಗಿರುವು ಟರ್ಕಿ ದೇಶಕ್ಕೆ ಕೇವಲ ಪ್ರವಾಸೋದ್ಯಮ ವಿಚಾರದಲ್ಲಿ ಮಾತ್ರವಲ್ಲ ವ್ಯಾಪಾರದ ವಿಚಾರದಲ್ಲೂ ಭಾರೀ ನಷ್ಟ ಎದುರಾಗಿದೆ. ಭಾರತ ಹಾಗೂ ಪಾಕ್ ನಡುವಿನ ಸಂಘರ್ಷದ ಸಮಯದಲ್ಲಿ ಟರ್ಕಿ ಹಾಗೂ ಅಜರ್‌ಬೈಜಾನ್ ಬೆಂಬಲಿಸಿದ್ದು. ಈ ದೇಶಗಳಿಂದ ಆಮದು ಆಗುವ ವಸ್ತುಗಳ ಮೇಲೆ ನಿರ್ಬಂಧ ವಿಧಿಸಬೇಕು ಎನ್ನುವ ಆಗ್ರಹ ಜೋರಾಗಿದೆ. ಅಲ್ಲದೇ ಈ ದೇಶಗಳಿಂದ ಆಮದು ಆಗುತ್ತಿರುವ ಪ್ರಮುಖ ವಸ್ತುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಈ ಎರಡೂ ದೇಶಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆಯಲ್ಲೂ ಭಾರೀ ಇಳಿಕೆ ಕಂಡು ಬರುತ್ತಿದೆ.
ಭಾರೀ ನಷ್ಟ: ಇನ್ನು ಭಾರತವನ್ನು ಎದುರು ಹಾಕಿಕೊಂಡಿರುವ ಟರ್ಕಿಗೆ ದಿನೇ ದಿನೇ ಭಾರೀ ನಷ್ಟವುಂಟಾಗುತ್ತಿದೆ. ಟರ್ಕಿ ಪ್ರವಾಸೋದ್ಯ ರದ್ದು ಮಾಡುವ ಹಾಗೂ ಟಿಕೆಟ್ ಕ್ಯಾನ್ಸಲ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಟರ್ಕಿಗೆ ಪ್ರವಾಸೋದ್ಯಮದಿಂದಲೇ 400 ಕೋಟಿಗೂ ಹೆಚ್ಚು ಆದಾಯವಿದೆ.
ನಾವು ಪಾಕ್ ಪರ ಎಂದ ಟರ್ಕಿ!
ಸಂಕಷ್ಟದ ಸಮಯದಲ್ಲಿ ಭಾರತದಿಂದ ಎಲ್ಲಾ ಮಾದರಿಯ ನೆರವು ಪಡೆದುಕೊಂಡಿದ್ದ ಟರ್ಕಿ ದೇಶವು ನಾವು ಮುಸ್ಲಿಂ ಸಹೋದರ ರಾಷ್ಟ್ರ ಪಾಕಿಸ್ತಾನದ ಪರ ಎಂದು ಹೇಳಿದೆ. ಭಾರತದಾದ್ಯಂತ ಬಾಯ್ಕಟ್ ಟರ್ಕಿ ಟ್ರೆಂಡ್ ಸೃಷ್ಟಿಯಾಗಿರುವಾಗಲೇ ಟರ್ಕಿ ಈ ರೀತಿ ಹೇಳಿದೆ. ನಾವು ಪಾಕಿಸ್ತಾನದ ಒಳ್ಳೆಯ ಹಾಗೂ ಕೆಟ್ಟ ಸಮಯದಲ್ಲಿ ಪಾಕ್‌ನೊಂದಿಗೆ ನಿಲ್ಲಲಿದ್ದೇವೆ ಎಂದು ಟರ್ಕಿ ಅಧ್ಯಕ್ಷರು ಹೇಳಿದ್ದಾರೆ.












Click it and Unblock the Notifications