ಟರ್ಕಿ ಭೂಕಂಪ: ಸಾವಿನ ಸಂಖ್ಯೆ 41,000ಕ್ಕೆ ಏರಿಕೆ- ಮುಂದುವರೆದ ರಕ್ಷಣಾ ಕಾರ್ಯ!
41,000 ಜನರನ್ನು ಕೊಂದ ಬೃಹತ್ ಭೂಕಂಪ ಸಂಭವಿಸಿ 278 ಗಂಟೆಗಳ ನಂತರವೂ ಟರ್ಕಿಯಲ್ಲಿ ಹಲವರನ್ನು ರಕ್ಷಣೆ ಮಾಡಲಾಗಿದೆ.
ಟರ್ಕಿ ಫೆಬ್ರವರಿ 18: ಟರ್ಕಿಯಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿ ಸುಮಾರು 12 ದಿನಗಳ ಬಳಿಕವೂ ರಕ್ಷಣಾ ತಂಡ ಅವಶೇಷಗಳ ಅಡಿ ಮೃತದೇಹಗಳನ್ನು ಪತ್ತೆ ಕಾರ್ಯದಲ್ಲಿ ತೊಡಗಿವೆ. ರಕ್ಷಣಾ ಸಿಬ್ಬಂದಿ ಶುಕ್ರವಾರ 45 ವರ್ಷದ ವ್ಯಕ್ತಿಯನ್ನು ಅವಶೇಷಗಳಿಂದ ಹೊರತೆಗೆದಿದ್ದಾರೆ. ಬೃಹತ್ ಭೂಕಂಪ ಸಂಭವಿಸಿ 278 ಗಂಟೆಗಳ ನಂತರ ಟರ್ಕಿಯಲ್ಲಿ 41,000 ಜನರು ಸಾವನ್ನಪ್ಪಿರುವುದು ವರದಿಯಾಗಿದೆ.
ಕಳೆದ ಕೆಲವು ದಿನಗಳಲ್ಲಿ ಮೃತರ ಪತ್ತೆ ಕಾರ್ಯದ ವೇಳೆ ಮೃತದೇಹಗಳು ಕಡಿಮೆ ಸಂಖ್ಯೆಯಲ್ಲಿ ಪತ್ತೆಯಾಗಿದ್ದವು. ಟರ್ಕಿಯಲ್ಲಿ ಹಿಮಪಾತ ಹವಮಾನ ಬದಲಾವಣೆಯಿಂದಾಗಿ ಜನ ಬದುಕುಳಿದಿರುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿ ಭೂಕಂಪ ಸಂಭವಿಸಿ ಸುಮಾರು ದಿನಗಳಾದರೂ ರಕ್ಷಣಾ ತಂಡ ಪತ್ತೆ ಕಾರ್ಯವನ್ನು ಮುಂದುವರೆಸಿದೆ.

7.8 ತೀವ್ರತೆಯ ಕಂಪನ ಸಂಭವಿಸಿ 278 ಗಂಟೆಗಳ ನಂತರ ಹಕನ್ ಯಾಸಿನೊಗ್ಲು ಎಂಬ ವ್ಯಕ್ತಿಯನ್ನು ಸಿರಿಯಾದ ಗಡಿಯ ಸಮೀಪವಿರುವ ದಕ್ಷಿಣ ಪ್ರಾಂತ್ಯದ ಹಟಾಯ್‌ನಲ್ಲಿ ರಕ್ಷಿಸಲಾಯಿತು. ಸಾಮಾಜಿಕ ಮಾಧ್ಯಮದಲ್ಲಿನ ಚಿತ್ರಗಳು ರಕ್ಷಕರು ಚಪ್ಪಟೆಯಾದ ಕಟ್ಟಡದ ಅವಶೇಷಗಳ ಮೂಲಕ ವ್ಯಕ್ತಿಯನ್ನು ಸ್ಟ್ರೆಚರ್ ನಲ್ಲಿ ಒಯ್ಯುತ್ತಿರುವುದನ್ನು ಕಾಣಬಹುದು. ವ್ಯಕ್ತಿಯನ್ನು ಥರ್ಮಲ್ ಜಾಕೆಟ್‌ನಿಂದ ಮುಚ್ಚಲಾಗಿತ್ತು.
278. saat mucizesi!
— Ekrem İmamoğlu (@ekrem_imamoglu) February 17, 2023
Hatay'da 278 saat sonra Hakan Yasinoğlu sağ olarak kurtarıldı. pic.twitter.com/O8excnDmi9
ಇನ್ನೂ ಗುರುವಾರ ತಡರಾತ್ರಿ ಮತ್ತು ಶುಕ್ರವಾರದ ಆರಂಭದಲ್ಲಿ 14 ವರ್ಷದ ಬಾಲಕ ಸೇರಿದಂತೆ ಇತರ ಮೂವರನ್ನು ರಕ್ಷಿಸಲಾಗಿದೆ. ಕೆಲವು ಸೈಟ್‌ಗಳಲ್ಲಿ ಹುಡುಕಾಟ ಮುಂದುವರೆದಿದೆ. ಈ ಪ್ರದೇಶದಲ್ಲಿ 200 ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ರಕ್ಷಣಾ ಪ್ರಯತ್ನಗಳು ಮುಂದುವರಿದಿವೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಶುಕ್ರವಾರ ಹೇಳಿದ್ದಾರೆ.

ಭೂಕಂಪವು ಟರ್ಕಿ ಮತ್ತು ಸಿರಿಯಾದಲ್ಲಿ 41,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ, ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಲಕ್ಷಾಂತರ ಜನರು ಘನೀಕರಿಸುವ ತಾಪಮಾನದಲ್ಲಿ ಆಶ್ರಯವಿಲ್ಲದೆ ಬೀದಿಪಾಲಾಗಿದ್ದಾರೆ. ಟರ್ಕಿಯ 11 ಪ್ರಾಂತ್ಯಗಳಲ್ಲಿ ಕಂಪನ ಸಂಭವಿಸಿದೆ. ಅದಾನ, ಕಿಲಿಸ್ ಮತ್ತು ಸ್ಯಾನ್ಲಿಯುರ್ಫಾ ಎಂಬ ಮೂರು ಪ್ರಾಂತ್ಯಗಳಲ್ಲಿ ರಕ್ಷಣಾ ಪ್ರಯತ್ನಗಳು ಪೂರ್ಣಗೊಂಡಿವೆ ಎಂದು ಟರ್ಕಿಯ ಅಧಿಕಾರಿಗಳು ತಿಳಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications