ಫುಕುಶಿಮಾ ಪರಮಾಣು ಘಟಕಕ್ಕೆ ಯಾವುದೇ ಹಾನಿಯಿಲ್ಲ

Posted By:
Subscribe to Oneindia Kannada

ಫುಕುಶಿಮಾ, ನವೆಂಬರ್ 22 : ಜಪಾನ್‌ನ ಫುಕುಶಿಮಾದಲ್ಲಿ ಮಂಗಳವಾರ ಸಂಭವಿಸಿದ 7.4 ಪ್ರಮಾಣದ ಪ್ರಬಲ ಭೂಕಂಪದಿಂದ ಫುಕುಶಿಮಾ ಪರಮಾಣು ವಿದ್ಯುತ್ ಘಟಕಕ್ಕೆ ಯಾವುದೇ ಧಕ್ಕೆ ಸಂಭವಿಸಿಲ್ಲ. ಭೂಕಂಪ ಸಂಭವಿಸಿದ ನಾಲ್ಕು ಗಂಟೆಗಳ ನಂತರ ಸುನಾಮಿಯ ಎಚ್ಚರಿಕೆಯನ್ನೂ ಹಿಂತೆಗೆದುಕೊಳ್ಳಲಾಗಿದೆ.

ಫುಕುಶಿಮಾ ಬಳಿಯೇ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದರಿಂದ ಪರಮಾಣು ಘಟಕಕ್ಕೆ ಹಾನಿಯುಂಟಾಗಬಹುದು ಎಂಬ ಆತಂಕ ಉಂಟಾಗಿತ್ತು. ಸರಿಯಾಗಿ 5 ವರ್ಷಗಳ ಹಿಂದೆ 2011ರಲ್ಲಿ ಸಂಭವಿಸಿದ್ದ ಭೂಕಂಪದಿಂದ ಸುನಾಮಿ ಉಕ್ಕಿ ಪರಮಾಣು ಘಟಕಕ್ಕೆ ಭಾರೀ ಹಾನಿಯುಂಟಾಗಿತ್ತು. ಸದ್ಯಕ್ಕೆ ಆ ಆತಂಕ ತಪ್ಪಿದೆ. [ಜಪಾನ್ ನಲ್ಲಿ 7.3ರ ಪ್ರಮಾಣ ಭೂಕಂಪ, ಸುನಾಮಿ ಎಚ್ಚರಿಕೆ]

Tsunami warning withdrawn : No damage to Fukushima nuclear plant

2011ರಲ್ಲಿ ಸಂಭವಿಸಿದ್ದ ಭೂಕಂಪ ಮತ್ತು ಸುನಾಮಿಯಿಂದಾಗಿ 18 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದರು. ಆದರೆ, ಈ ಬಾರಿ ಅಂತಹ ದುರ್ಘಟನೆ ಸಂಭವಿಸಿಲ್ಲ. ಭೂಕಂಪನದ ಕೇಂದ್ರದಿಂದ 240 ಕಿ.ಮೀ. ದೂರದಲ್ಲಿರುವ ಟೋಕಿಯೋದಲ್ಲಿಯೂ ಕಟ್ಟಡಗಳು ಅಲುಗಾಡಿದ್ದು, ಅಲ್ಲಿಯೂ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಫುಕುಶಿಮಾ ನದಿಯಲ್ಲಿ ಸುನಾಮಿ ಅಲೆಗಳು ಬರುತ್ತಿರುವುದನ್ನು ವಿಡಿಯೋ ಮಾಡಿ ಟ್ವಿಟ್ಟರಲ್ಲಿ ಹಾಕಿದ್ದರು. ಆದರೆ, ತಡೆಗೋಡೆ ಸಾಕಷ್ಟು ಎತ್ತರವಿದ್ದರಿಂದ ಅನಾಹುವೇನೂ ಆಗಿಲ್ಲ. ಆರಂಭದಲ್ಲಿ ಸೆಂಡೈ ಬೇನಲ್ಲಿ 1.4 ಮೀಟರ್ ಎತ್ತರದ ಸುನಾಮಿ ಅಲೆಗಳು ಎದ್ದು ನಂತರ ತಣ್ಣಗಾದವು. 2011ರಲ್ಲಿ ಭಾರೀ ಗಾತ್ರದ ಅಲೆಗಳು ಎದ್ದು ವಿಧ್ವಂಸಕ ಕೃತ್ಯ ಎಸಗಿದ್ದವು. [2011 : ಫುಕುಶಿಮಾ ಅಣು ಸ್ಥಾವರ ಧ್ವಂಸ, ಪರಿಸ್ಥಿತಿ ಗಂಭೀರ]

ಫುಕುಶಿಮಾ ಡೈ-ಇಚಿ ಪ್ಲಾಂಟ್‌ನಲ್ಲಿ ಯಾವುದೇ ಏರುಪೇರುಗಳಾಗಿಲ್ಲ ಘಟಕದ ಅಧಿಕಾರಿಯಬ್ಬರು ಹೇಳಿಕೆ ನೀಡಿದ್ದಾರೆ. 2011ರಲ್ಲಿ ಫುಕುಶಿಮಾದ ಮೂರು ಪರಮಾಣು ಘಟಕಗಳಿಗೆ ಹಾನಿಯುಂಟಾಗಿ ವಿಕಿರಣ ಸೋರಿಕೆಯಾಗಿತ್ತು. ಈ ಬಾರಿ ಹಾನಿ ಸಂಭವಿಸಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A powerful earthquake of 7.4 magnitude hit Japan near Fukushima on 22nd November, Tuesday. After 4 hours tsunami warning was withdrawn. A spokesperson has said there is no harm to Fukushima nuclear plant. In 2011 earthquake tsunami had destroyed Fukushima power plant.
Please Wait while comments are loading...