ನ್ಯೂಜಿಲೆಂಡ್‌ನಲ್ಲಿ ಪ್ರಬಲ ಭೂಕಂಪ : ಅಪ್ಪಳಿಸಿದ ಸುನಾಮಿ

Posted By:
Subscribe to Oneindia Kannada

ಕ್ರೈಸ್ಟ್ ಚರ್ಚ್, ನವೆಂಬರ್ 13 : ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್ ನಿಂದ 95 ಕಿ.ಮೀ. ದೂರದಲ್ಲಿ 7.8 ಪ್ರಮಾಣದ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಅಪ್ಪಳಿಸಿದೆ. ಸೋಮವಾರ ಸ್ಥಳೀಯ ಸಮಯ ಬೆಳಗಿನ ಜಾವ 12 ಗಂಟೆಗೆ ಭೂಕಂಪವಾಗಿದೆ.

ಭೂಕಂಪ ಸಂಭವಿಸಿದ ಎರಡು ಗಂಟೆಯ ನಂತರ ನ್ಯೂಜಿಲೆಂಡ್‌ನ ಈಶಾನ್ಯ ಕರಾವಳಿಗೆ ಸುನಾಮಿ ಅಪ್ಪಳಿಸಿದೆ. ಕಡಲತೀರದಿಂದ ಜನರು ಒಳನಾಡಿಗೆ ಸ್ಥಳಾಂತರಗೊಳ್ಳಬೇಕು ಅಥವಾ ಎತ್ತರದ ಸ್ಥಳಕ್ಕೆ ತೆರಳಬೇಕು ಎಂದು ಸಂದೇಶ ರವಾನಿಸಲಾಗಿದೆ.

ಕ್ರೈಸ್ಟ್ ಚರ್ಚ್ ನಿಂದ 181 ಕಿ.ಮೀ. ದೂರದಲ್ಲಿರುವ ಕೈಕೌರಾ ಎಂಬಲ್ಲಿ ಎರಡು ಮೀಟರ್ ಎತ್ತರದ ಅಲೆಗಳು ಎದ್ದಿದ್ದು, ವೆಲ್ಲಿಂಗ್ಟನ್ ಮತ್ತಿತರ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಅಲೆಗಳು ತಲುಪುತ್ತಿವೆ ಎಂದು ವೆದರ್‌ವಾಚ್ ವೆಬ್ ಸೈಟ್ ವರದಿ ಮಾಡಿದೆ.

Tsunami hits New Zealand after powerful earthquake

ಚಾಧಮ್ ದ್ವೀಪದ ಜನರು ಈ ಭೀಕರ ಭೂಕಂಪದಿಂದ ಭಯಭೀತರಾಗಿದ್ದು, ಸಾವಿರಾರು ಜನರು ಸುನಾಮಿಯ ಭಯದಿಂದ ಮನೆಗಳನ್ನು ತೊರೆದು ದೂರ ಪ್ರದೇಶಕ್ಕೆ ತೆರಳುತ್ತಿದ್ದಾರೆ ಎಂದು ರೇಡಿಯೋ ನ್ಯೂಜಿಲೆಂಡ್ ಮಾಹಿತಿ ನೀಡಿದೆ.

ಸೋಷಿಯಲ್ ಮೀಡಿಯಾ ಮುಖಾಂತರ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗುತ್ತಿದೆ. ವೆಲ್ಲಿಂಗ್ಟನ್ ನಲ್ಲಿ ಭೂಕಂಪ ಸಂಭವಿಸಿದ ಕೂಡಲೆ ಸೈರನ್ ಬಾರಿಸುತ್ತಿದ್ದಂತೆ ಜನರೆಲ್ಲ ಕಟ್ಟಡ ತೊರೆದು ಬೀದಿಗೆ ಓಡಲು ಆರಂಭಿಸಿದರು. ಹಲವಾರು ಜನರು ಆತಂಕದಿಂದ ಕಣ್ಣೀರಿಡುತ್ತಿದ್ದುದು ಕಂಡುಬಂದಿತು.

ಕ್ರೈಸ್ಟ್ ಚರ್ಚ್ ನಲ್ಲಿ 2011ರಲ್ಲಿ ಬಾರೀ ಭೂಕಂಪ ಸಂಭವಿಸಿ 185 ಜನರನ್ನು ಬಲಿ ಪಡೆದಿತ್ತು ಮತ್ತು ನೂರಾರು ಕಟ್ಟಡಗಳು ಧರೆಗುರುಳಿ ನಗರದ ಮಧ್ಯಭಾಗ ಸರ್ವನಾಶವಾಗಿತ್ತು. ಈ ಬಾರಿಯ ಕಂಪನದಿಂದ ಹಲವಾರು ಕಟ್ಟಡಗಳು ಬಿರುಕುಬಿಟ್ಟಿದ್ದರೂ ಸಾವುನೋವಿನ ವರದಿ ಇನ್ನೂ ಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tsunami hits New Zealand after powerful earthquake
Please Wait while comments are loading...