ಗೋಡೆ ಹಣ ಪೀಕಲು ಮೆಕ್ಸಿಕೋಗೆ ತೆರಿಗೆ ಬರೆ ಹಾಕಲಿದೆ ಅಮೆರಿಕ

Posted By:
Subscribe to Oneindia Kannada

ವಾಷಿಂಗ್ಟನ್, ಜನವರಿ 27: ಮೆಕ್ಸಿಕೋದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳಿಗೆ ಶೇ 20ರಷ್ಟು ತೆರಿಗೆ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ ಎಂದು ವೈಟ್ ಹೌಸ್ ನ ವಕ್ತಾರ ಸೀನ್ ಸ್ಪೈಸರ್ ಹೇಳಿದ್ದಾರೆ. ಈ ಬಗ್ಗೆ ಗುರುವಾರ ತಿಳಿಸಿದ ಅವರು, ಟ್ರಂಪ್ ಹೊಸ ತೆರಿಗೆ ಹಾಕಲು ನಿರ್ಧರಿಸಿದ್ದು, ಆ ಹಣವನ್ನು ಅಮೆರಿಕ ಮತ್ತು ಮೆಕ್ಸಿಕೋ ಮಧ್ಯೆ ಗೋಡೆ ನಿರ್ಮಾಣಕ್ಕೆ ಬಳಸಲಾಗುವುದು ಎಂದಿದ್ದಾರೆ.

ಮೆಕ್ಸಿಕನ್ ಅಧ್ಯಕ್ಷ ಎನ್ರಿಕ್ ನೀಟೋ ಅವರು ಡೊನಾಲ್ಡ್ ಟ್ರಂಪ್ ಭೇಟಿ ರದ್ದು ಮಾಡಿದ ಗಂಟೆಗಳ ನಂತರ ಈ ಘೋಷಣೆಯಾಗಿದೆ. ಟ್ರಂಪ್ ಮತ್ತು ನೀಟೋ ಮಧ್ಯೆ ಮುಂದಿನ ಮಂಗಳವಾರ ವಾಷಿಂಗ್ಟನ್ ನಲ್ಲಿ ಭೇಟಿ ನಿಗದಿಯಾಗಿತ್ತು. ತೆರಿಗೆಗೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸ್ಪೈಸರ್ ನೀಡಿಲ್ಲ.[ಅಮೆರಿಕ- ಮೆಕ್ಸಿಕೋ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಾಣ!]

Trump wants 20% border tax on imports from Mexico

ಅಮೆರಿಕದ ದಕ್ಷಿಣ ಭಾಗಕ್ಕೆ ಮೆಕ್ಸಿಕೋ ದೇಶದ ಗಡಿಯಲ್ಲಿ ಗೋಡೆ ನಿರ್ಮಿಸಲಾಗುವುದು ಅದಕ್ಕೆ ಆ ದೇಶವೇ ಹಣ ನೀಡುತ್ತದೆ ಎಂದು ಟ್ರಂಪ್ ಹೇಳಿದ್ದರು. ಬುಧವಾರವಷ್ಟೇ ಗೋಡೆ ನಿರ್ಮಾಣ ಪ್ರಸ್ತಾವಕ್ಕೆ ಅಧಿಕೃತವಾಗಿ ಅಮೆರಿಕ ಅಧ್ಯಕ್ಷ ಸಹಿ ಹಾಕಿದ್ದರು. ಶೀಘ್ರದಲ್ಲೇ ಗೋಡೆ ನಿರ್ಮಾಣವಾಗುತ್ತದೆ. ಅದಕ್ಕೆ ವಾಷಿಂಗ್ಟನ್ ಹಣ ಒದಗಿಸುತ್ತದೆ. ಆ ನಂತರ ಅದನ್ನು ಮೆಕ್ಸಿಕೋ ಪಾವತಿಸುತ್ತದೆ ಎಂದಿದ್ದರು ಟ್ರಂಪ್.

ಆದರೆ, ಈ ಮಾತನ್ನು ಮೆಕ್ಸಿಕೋ ಸರಕಾರ ಹಲವು ಬಾರಿ ನಿರಾಕರಿಸಿದೆ. ಇದೀಗ ಮೆಕ್ಸಿಕೋದಿಂದ ಆಮದಾಗುವ ವಸ್ತುಗಳಿಗೆ ತೆರಿಗೆ ವಿಧಿಸುವ ಮೂಲಕ ಗೋಡೆ ನಿರ್ಮಾಣಕ್ಕೆ ಹಣ ಹೊಂದಿಸಲು ಮುಂದಾಗಿದೆ ಅಮೆರಿಕ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
US President Donald Trump wants a 20 per cent border tax on all imports from Mexico, White House spokesman Sean Spicer has said. Spicer on Thursday said Trump wanted to use the new tax to fund the proposed wall between the US and Mexico.
Please Wait while comments are loading...