Donald Trump: ಚೀನಾ ಅಧ್ಯಕ್ಷರ ಜೊತೆ ಡೊನಾಲ್ಡ್ ಟ್ರಂಪ್ ಚರ್ಚೆ, ಭೇಟಿಗೆ ಸಜ್ಜಾದ ವೇದಿಕೆ!
ಅಮೆರಿಕ ತನಗೆ ಹೇಗೆ ಬೇಕೋ ಅದೇ ರೀತಿಯಾಗಿ ಜಗತ್ತನ್ನು ಬಳಸಿಕೊಳ್ಳುವ ಕಲೆ ರೂಢಿಸಿಕೊಂಡಿದೆ. ಈ ಮಾತು ಪದೇ ಪದೇ ನಿಜವಾಗುತ್ತಿದ್ದು, ಇದೀಗ ತೆರಿಗೆ ಹೇರಿಕೆ ವಿಚಾರದಲ್ಲಿ ಕೂಡ ಅಮೆರಿಕದ ನಡೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈಗ ಅದೇ ತೆರಿಗೆ ಅಸ್ತ್ರವನ್ನು ತನ್ನ ಸ್ವಾರ್ಥಕ್ಕೆ ಬಳಸಿ, ಹೊಸ ಲಾಭ ಪಡೆಯಲು ಅಮೆರಿಕ ಮುಂದಾದಂತೆ ಕಾಣುತ್ತಿದೆ. ದಿಢೀರ್ ಚೀನಾ ಜೊತೆಗೆ ಮಾತುಕತೆ ಮಾಡಿ ಅಮೆರಿಕದ ಬೆಳೆಗಳಿಗೆ ಭರ್ಜರಿ ಬಂಪರ್ ಕೊಡಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಈಗ ಮುಂದೆ ಬಂದಿದ್ದಾರೆ.
ಭಾರತ ಎಂಬ ದೈತ್ಯ ದೇಶವನ್ನು ಎದುರು ಹಾಕಿಕೊಂಡು ಅಮೆರಿಕ ನೂರಾರು ಸಮಸ್ಯೆ ಸುಳಿಗೆ ಸಿಲುಕಿದೆ. ಭಾರತ ಇಲ್ಲದೆ ಅಮೆರಿಕ ನೆಮ್ಮದಿಯಾಗಿ ಜೀವನ ನಡೆಸಲು ಆಗಲ್ಲ ಅನ್ನೋದು ಮತ್ತೊಮ್ಮೆ ಇದೀಗ ಇಡೀ ಜಗತ್ತಿಗೇ ಗೊತ್ತಾಗಿದೆ. ಭಾರತ ಅಮೆರಿಕ ಸಂಬಂಧ ಇನ್ನೇನು ಟ್ರಂಪ್ ನಿರ್ಧಾರದಿಂದ ಹಾಳಾಗಿ ಹೋಯ್ತು ಅನ್ನುವಾಗ ಎರಡೂ ದೇಶಗಳ ನಡುವೆ ಮಹತ್ವದ ಮಾತುಕತೆ ನಡೆಯಬಹುದು ಅನ್ನೋ ನಿರೀಕ್ಷೆ ಇತ್ತು. ಹೀಗಿದ್ದಾಗ ದಿಢೀರ್ ಅಂತಾ ಡೊನಾಲ್ಡ್ ಟ್ರಂಪ್ ಆಡಳಿತ ಚೀನಾ ಜೊತೆಗೆ ಮಹತ್ವದ ಮೀಟಿಂಗ್ ಮಾಡಿ ಸಮಸ್ಯೆ ಸರಿ ಮಾಡಲು ಮುಂದಾಗಿರುವುದು ತಲ್ಲಣ ಎಬ್ಬಿಸಿದೆ.

ಚೀನಾ & ಅಮೆರಿಕ ನಡುವೆ ಒಪ್ಪಂದ?
ಅಂದಹಾಗೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ & ಅವರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಇನ್ನು ಕೇವಲ 4 ವಾರ ಒಳಗೆ ಇಬ್ಬರ ನಡುವೆ ಮಹತ್ವದ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಈ ಮೂಲಕ ಅಮೆರಿಕದ ರೈತರಿಗೆ ಹೊಸ ಹುಮ್ಮಸ್ಸು ತರಿಸಲು ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಾದಂತೆ ಕಾಣುತ್ತಿದೆ. ಈ ನಡುವೆ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಅಮೆರಿಕ ವಿರುದ್ಧ ರೊಚ್ಚಿಗೆದ್ದಿವೆ. ಟ್ರಂಪ್ ಆ ಎಲ್ಲಾ ದೇಶಗಳ ಜೊತೆಗೆ ಮಾತುಕತೆ ನಡೆಸುತ್ತಾರಾ? ಎಂಬ ಚರ್ಚೆ ಶುರುವಾಗಿದೆ. ಹಾಗಾದರೆ ಭಾರತ & ಅಮೆರಿಕ ಅಧ್ಯಕ್ಷ ಟ್ರಂಪ್ ಮಾತುಕತೆ ಯಾವಾಗ?
ಭಾರತದ ಜೊತೆಗೆ ಶೀಘ್ರ ಚರ್ಚೆ
ಅಮೆರಿಕ ಜೊತೆ ಭಾರತ ಉತ್ತಮ ಸಂಬಂಧ ಇಟ್ಟುಕೊಂಡು ಬಂದಿದೆ. ಆದ್ರೆ ಟ್ರಂಪ್ ಬಂದ ನಂತರ ಕಿರಿಕ್ ಶುರುವಾಗಿದ್ದು, ಭಾರತ & ಅಮೆರಿಕ ಸಂಬಂಧ ಹಾಳಾಗಿ ಹೋಗ್ತಿದೆ. ಇದೇ ಕಾರಣಕ್ಕೆ ಚೀನಾ & ರಷ್ಯಾ ಜೊತೆ ಸಂಬಂಧ ಬೆಸೆಯಲು ನಮ್ಮ ಭಾರತ ಕೂಡ ಮುಂದಾಗಿತ್ತು. ಆದರೆ ಇದರಿಂದ ಹೆದರಿದ ಅಮೆರಿಕ ಈಗ ಭಾರತದ ಜೊತೆಯಲ್ಲಿ ತೆರಿಗೆ ಹೇರಿಕೆ ಸೇರಿ, ದ್ವಿಪಕ್ಷೀಯ ವ್ಯಾಪಾರ ಸಂಬಂಧ ಮಾತುಕತೆ ನಡೆಸಲು ಮುಂದಾಗುವ ನಿರೀಕ್ಷೆ ಇದೆ.












Click it and Unblock the Notifications