Donald Trump: ಎಲಾನ್ ಮಸ್ಕ್‌ಗೆ ವಾರ್ನಿಂಗ್ ಕೊಟ್ಟ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ & ಡೊನಾಲ್ಡ್ ಟ್ರಂಪ್ ನಡುವೆ ಕಿಚ್ಚು ಹೊತ್ತಿಕೊಂಡಿದ್ದು, ಈ ಬೆಂಕಿಯ ಕಿಡಿಯಿಂದ ಇದೀಗ ಇಡೀ ಅಮೆರಿಕ ಹೊತ್ತಿ ಉರಿಯುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಯಾಕಂದ್ರೆ ಇಬ್ಬರು ಚನ್ನಾಗಿಯೇ ಇದ್ದು ಈಗ ಜಗಳ ಶುರು ಮಾಡಿದ್ದಾರೆ. ಒಬ್ಬರ ಮೇಲೆ ಮತ್ತೊಬ್ಬರು ಕೆಂಡ ಕಾರುವ ಹಂತಕ್ಕೆ ಈ ಇಬ್ಬರ ಸಂಬಂಧ ಈಗ ಬಂದು ತಲುಪಿದೆ. ಇಂತಹ ಸಮಯದಲ್ಲೇ, ಎಲಾನ್ ಮಸ್ಕ್‌ಗೆ ವಾರ್ನಿಂಗ್ ಕೊಟ್ಟ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಹೇಳಿದ್ದಾರೆ ಗೊತ್ತಾ?
ಡೊನಾಲ್ಡ್ ಟ್ರಂಪ್ ಜೊತೆ ಯಾರೇ ಕಿರಿಕ್ ಮಾಡಿಕೊಂಡರೂ ಅವರ ನೆಮ್ಮದಿ ಹಾಳಾಗುವುದು ಗ್ಯಾರಂಟಿ ಎನ್ನಬಹುದು. ಯೆಸ್, ಟ್ರಂಪ್ ಅವರ ತೆರಿಗೆ ಕಡಿತ ಮತ್ತು ಖರ್ಚು ಮಸೂದೆ ವಿರುದ್ಧ ಎಲಾನ್ ಮಸ್ಕ್ ರೊಚ್ಚಿಗೆದ್ದು ಕೂತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಇದೇ ವಿಚಾರವಾಗಿ ಎಲಾನ್ ಮಸ್ಕ್ & ಡೊನಾಲ್ಡ್ ಟ್ರಂಪ್ ನಡುವೆ ವಾರ್ ಕೂಡ ಶುರುವಾಗಿತ್ತು. ಹೀಗೆ ಎಲಾನ್ ಮಸ್ಕ್ & ಡೊನಾಲ್ಡ್ ಟ್ರಂಪ್ ತಿಕ್ಕಾಟ ಜೋರಾಗಿದ್ದ ಸಮಯದಲ್ಲೇ, ಎಲಾನ್ ಮಸ್ಕ್‌ಗೆ ಭಾರಿ ದೊಡ್ಡ ವಾರ್ನಿಂಗ್ ಕೊಟ್ಟಿದ್ದಾರೆ ಅಮೆರಿಕ ಅಧ್ಯಕ್ಷ ಟ್ರಂಪ್. ಅದರಲ್ಲೂ ತಮ್ಮ ಎದುರಾಳಿ ಪಕ್ಷವನ್ನ ಬೆಂಬಲಿಸಿ ನಿಂತರೆ ಆಪತ್ತು ಗ್ಯಾರಂಟಿ ಎಂಬ ಸಂದೇಶ ಕೂಡ ರವಾನೆ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಏನು?
ಅಂದಹಾಗೆ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಬೆಂಬಲ ಇದ್ದ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರು 2024 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಇಷ್ಟೆಲ್ಲಾ ನಡೆದಿದ್ದರೂ ಕೂಡ ಇದೀಗ ಟ್ರಂಪ್ ಅವರ ತೆರಿಗೆ ಕಡಿತ ಮತ್ತು ಖರ್ಚು ಮಸೂದೆ ವಿರುದ್ಧ ಎಲಾನ್ ಮಸ್ಕ್ ರೊಚ್ಚಿಗೆದ್ದು ಕೂತಿದ್ದರು ಎಂಬ ಕಾರಣ ಟ್ರಂಪ್ & ಮಸ್ಕ್ ನಡುವೆ ಯುದ್ಧ ಆರಂಭವಾಗಿದೆ. ಹೀಗಿದ್ದಾಗ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಬಿಟ್ಟು, ಟ್ರಂಪ್ ಅವರ ವಿರೋಧಿ ಪಕ್ಷ ಡೆಮಾಕ್ರಟಿಕ್ ಬೆಂಬಲಕ್ಕೆ ಎಲಾನ್ ಮಸ್ಕ್ ನಿಲ್ಲಲಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರ ಈಗ ಟ್ರಂಪ್ ಪಿತ್ತ ನೆತ್ತಿಗೆ ಏರಿಸಿದ್ದು, ಮುಂಬರುವ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳನ್ನ ಬೆಂಬಲಿಸಿದರೆ ಗಂಭೀರ ಪರಿಣಾಮ ಎದುರಿಸುವುದು ಗ್ಯಾರಂಟಿ ಅಂತಾ ಎಲಾನ್ ಮಸ್ಕ್‌ಗೆ ಎಚ್ಚರಿಸಿದ್ದಾರೆ ಟ್ರಂಪ್!
ಇಬ್ಬರ ಸಂಬಂಧ ಮುಗಿದ ಕಥೆ?
ಅಮೆರಿಕದ ಖಾಸಗಿ ನ್ಯೂಸ್ ಚಾನಲ್‌ಗೆ ಡೊನಾಲ್ಡ್ ಟ್ರಂಪ್ ಫೋನ್ ಮೂಲಕ ಸಂದರ್ಶನ ನೀಡಿದ್ದರು, ಈ ಸಮಯದಲ್ಲಿ ಎಲಾನ್ ಮಸ್ಕ್ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಡೊನಾಲ್ಡ್ ಟ್ರಂಪ್. ಆದರೆ ಮಸ್ಕ್ ಯಾವ ಪರಿಣಾಮಗಳನ್ನು ಎದುರಿಸಬಹುದು? ಎಂಬುದನ್ನು ಸ್ಪಷ್ಟಪಡಿಸಲು ಟ್ರಂಪ್ ನಿರಾಕರಿಸಿದ್ದಾರೆ. ಹಾಗೂ, ಮಸ್ಕ್ ಜೊತೆಗಿನ ಸಂಬಂಧ ಮತ್ತೆ ಸರಿ ಮಾಡಿಕೊಳ್ಳಲು ಕೂಡ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ ಟ್ರಂಪ್. ಹೀಗಾಗಿ, ಇಬ್ಬರ ಜಗಳ ಮುಗಿಲು ಮುಟ್ಟಿದ್ದು, ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ.












Click it and Unblock the Notifications