Donald Trump: ಯುರೋಪ್ ಒಕ್ಕೂಟಕ್ಕೆ ತೆರಿಗೆ ಆಘಾತ ನೀಡಿದ ಟ್ರಂಪ್, ಕೆನಡಾ ದೇಶಕ್ಕೂ ಕಾದಿದೆ ಶಾಕ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ತೆರಿಗೆ ಅಸ್ತ್ರವನ್ನು ಮುಂದುವರಿಸಿದ್ದು, ಪ್ರತಿ ದಿನಕ್ಕೂ ಆಘಾತ ಹೆಚ್ಚಿಸುತ್ತಿದ್ದಾರೆ. ಒಂದು ಕಡೆ ಅಮೆರಿಕದ ಅಕ್ಕಪಕ್ಕದ ದೇಶಗಳಾದ ಕೆನಡಾ & ಮೆಕ್ಸಿಕೋ ನಾಯಕರಿಗೆ ತೆರಿಗೆ ಅಸ್ತ್ರದ ಭಯ ಹುಟ್ಟಿಸಿದ್ದ ಟ್ರಂಪ್ ಅವರು, ಈಗ ದೂರದ ಯುರೋಪ್ ಒಕ್ಕೂಟಕ್ಕೂ ತೆರಿಗೆ ಭಯ ಮೂಡುವಂತೆ ಮಾಡಿದ್ದಾರೆ. ಹಾಗಾದ್ರೆ ಡೊನಾಲ್ಡ್ ಟ್ರಂಪ್ ಪ್ಲಾನ್ ಏನು?
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಸವಾರಿ ಆರಂಭಿಸಿದ ಮರು ಕ್ಷಣದಿಂದ ದೊಡ್ಡ ದೊಡ್ಡ ಬಿರುಗಾಳಿಯೇ ಏಳುತ್ತಿದೆ. ಡೊನಾಲ್ಡ್ ಟ್ರಂಪ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದು ಬೀಗಿ, ಅಮೆರಿಕದ ಅಧ್ಯಕ್ಷರ ಪಟ್ಟದಲ್ಲಿ ಕೂತಿದ್ದಾರೆ. ಹೀಗೆ ಅಧಿಕಾರಕ್ಕೆ ಬಂದ ತಕ್ಷಣ ಹಲವು ಮಹತ್ವದ ಬದಲಾವಣೆಗೆ ಕೂಡ ಅವರು ಮುಂದಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ತೆರಿಗೆ ವಿಚಾರದಲ್ಲಿನ ಬದಲಾವಣೆಗೆ ಪ್ರಾಮುಖ್ಯತೆ ನೀಡಿರುವ ಟ್ರಂಪ್ ತಮ್ಮ ಎದುರಾಳಿಗಳಿಗೆ ಆಘಾತ ನೀಡಿದ್ದಾರೆ. ಇದು ಸಾಲದು ಎನ್ನವಂತೆ ಯುರೋಪ್ ಒಕ್ಕೂಟಕ್ಕೆ ಭರ್ಜರಿ ಶಾಕ್ ಎದುರಾಗಿದೆ.

ತೆರಿಗೆ ಬಲೆಯಲ್ಲಿ ಸಿಲುಕಿದ ಯುರೋಪ್?
ಅಂದಹಾಗೆ ಹೊಸ ವಿಚಾರ ಪ್ರಸ್ತಾಪ ಮಾಡಿರುವ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು, ಯುರೋಪ್ ದೇಶದ ಮೂಲಕ ಅಮೆರಿಕಗೆ ಬರುವ ವಸ್ತುಗಳ ಮೇಲೆ ಸಾಮಾನ್ಯವಾಗಿ ಶೇಕಡಾ 25 ರಷ್ಟು ತೆರಿಗೆ ಹಾಕುವ ಘೋಷಣೆ ಮಾಡಿದ್ದಾರೆ. ಹಾಗೇ ತೆರಿಗೆ ವಿಚಾರದಲ್ಲಿ ಇನ್ನೂ ಹಲವಾರು ಬದಲಾವಣೆ ತರುವ ಮುನ್ಸೂಚನೆ ಕೂಡ ನೀಡಿದ್ದು, ಯುರೋಪ್ ದೇಶಗಳಲ್ಲಿ ಉತ್ಪಾದನೆ ಆಗುವ ವಸ್ತುಗಳು ಅಮೆರಿಕದಲ್ಲಿ ಮಾರಾಟ ಆಗಲು ಭಾರಿ ಪ್ರಮಾಣದ ಟ್ಯಾಕ್ಸ್ ಕಟ್ಟಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
ಈ ಮೂಲಕ ಕೆನಡಾ ಸೇರಿದಂತೆ ಮೆಕ್ಸಿಕೋ ದೇಶಗಳಿಗೂ ಆಘಾತ ಎದುರಾಗುವ ಆತಂಕದ ವಾತಾವರಣ ಈಗ ನಿರ್ಮಾಣ ಆಗಿದೆ. ಮೊದಲೇ ಆರ್ಥಿಕವಾಗಿ ಒದ್ದಾಡುತ್ತಿರುವ ಯುರೋಪ್ ದೇಶಗಳಿಗೆ ಟ್ರಂಪ್ ನಿರ್ಧಾರ ಇನ್ನಷ್ಟು ತಲೆನೋವು ತರುವ ಮುನ್ಸೂಚನೆಯನ್ನ ಕೊಟ್ಟಿದೆ. ಹಾಗೇ ಅಮೆರಿಕದ ಜೊತೆಗಿನ ಯುರೋಪ್ ಸಂಬಂಧಕ್ಕೆ ಇದು ಅಡ್ಡಿಯಾಗುವ ಸೂಚನೆಯೂ ಸಿಗುತ್ತಿದ್ದು, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ನಡೆ ದೊಡ್ಡ ಚರ್ಚೆ ಹುಟ್ಟುಹಾಕಿದೆ.












Click it and Unblock the Notifications