North Korea: ಉತ್ತರ ಕೊರಿಯಾ ಜೊತೆಗೆ ಈಗಲೂ ಉತ್ತಮ ಸಂಬಂಧ ಇದೆ ಎಂದ ಡೊನಾಲ್ಡ್ ಟ್ರಂಪ್!
ಉತ್ತರ ಕೊರಿಯಾ & ಅಮೆರಿಕ ನಡುವೆ ಜನುಮ ಜನುಮದ ಶತ್ರುತ್ವ ಇದ್ದು, ಈ ಎರಡೂ ದೇಶಗಳು ಪದೇ ಪದೇ ಒಬ್ಬರ ಮೇಲೆ ಮತ್ತೊಬ್ಬರು ಅಣುಬಾಂಬ್ ಹಾಕುವ ಎಚ್ಚರಿಕೆಯನ್ನ ನೀಡುತ್ತಲೇ ಬಂದಿವೆ. ಆದರೆ 2016ರ ಸಮಯದಲ್ಲಿ ಮೊಟ್ಟ ಮೊದಲ ಬಾರಿಗೆ ದೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಮೆರಿಕದ ಅಧಿಕಾರ ವಹಿಸಿಕೊಂಡ ನಂತರ ಪರಿಸ್ಥಿತಿ ಸುಧಾರಿಸಿತ್ತು. ಈ ಬೆಳವಣಿಗೆ ನಂತರ ಟ್ರಂಪ್ ಅಧಿಕಾರದಿಂದ ಕೆಳಗಿಳಿದು ಜೋ ಬೈಡನ್ ಬಂದ ನಂತರ, ಮತ್ತೆ ಅದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹೀಗಿದ್ದಾಗಲೇ ಟ್ರಂಪ್ ಈಗ ಮತ್ತೆ ಉ.ಕೊರಿಯಾ ಸರ್ವಾಧಿಕಾರಿ ಬಗ್ಗೆ ಮಾತನಾಡಿದ್ದಾರೆ.
ಉತ್ತರ ಕೊರಿಯಾ ಕಮ್ಯುನಿಸ್ಟ್ ಸಿದ್ಧಾಂತದ ದೇಶ & ಅಮೆರಿಕ ಬಲಪಂಥೀಯ ನಿಲುವು ಇರುವ ದೇಶ, ಇದೇ ಕಾರಣಕ್ಕೆ ಎರಡೂ ದೇಶಗಳ ನಡುವೆ ದೊಡ್ಡ ತಿಕ್ಕಾಟ ಇತ್ತು. ಆದರೆ, ಎಲ್ಲಾ ಮಾತುಗಳನ್ನು ಡೊನಾಲ್ಡ್ ಟ್ರಂಪ್ ಸುಳ್ಳು ಮಾಡಿದ್ದರು. ನೇರವಾಗಿ ಉತ್ತರ ಕೊರಿಯಾದಲ್ಲಿ ನಿಂತು ಕಿಮ್ ಜಾಂಗ್ ಉನ್ ಕೈ ಕುಲುಕಿದ್ದರು. ಹೀಗಿದ್ದಾಗ 2020ರಲ್ಲಿ ಡೊನಾಲ್ಡ್ ಟ್ರಂಪ್ ಸೋತು ಹೋಗಿ, ಅಧಿಕಾರ ತಪ್ಪಿದ ನಂತರ ಮತ್ತೆ ಅಮೆರಿಕ & ಉತ್ತರ ಕೊರಿಯಾ ನಡುವೆ ದೊಡ್ಡ ಗಲಾಟೆ ಶುರುವಾಗಿತ್ತು. ಆದರೆ ಈಗ ಮತ್ತೊಮ್ಮೆ ಉತ್ತರ ಕೊರಿಯಾ ಬಗ್ಗೆ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದು, ಈಗಲೂ ನಮ್ಮ ಸಂಬಂಧ ಹಾಗೇ ಇದೆ ಎಂದಿದ್ದಾರೆ.

ಕಿಮ್ ಜಾಂಗ್ ಉನ್ ಜೊತೆಗೆ ಸ್ನೇಹ!
ಹೌದು, ಡೊನಾಲ್ಡ್ ಟ್ರಂಪ್ ಅವರು ಈ ಬಗ್ಗೆ ಮಹತ್ವದ ಹೇಳಿಕೆಯನ್ನ ನೀಡಿದ್ದಾರೆ. ಅವರೇ ಹೇಳಿರುವಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಜೊತೆಗೆ ಈಗಲೂ ಉತ್ತಮ ಸಂಬಂಧ ಇದೆಯಂತೆ. ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟಿ ಜೊತೆಯಲ್ಲಿ ಚರ್ಚೆ ನಡೆಸುವ ಸಮಯದಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ ಟ್ರಂಪ್. ಡೊನಾಲ್ಡ್ ಟ್ರಂಪ್‌ಗೆ ಪತ್ರಕರ್ತರು ಪ್ರಶ್ನೆಯೊಂದನ್ನ ಕೇಳಿದ್ದು, ಉತ್ತರ ಕೊರಿಯಾ & ಕಿಮ್ ಜೊತೆಗಿನ ಸ್ನೇಹವನ್ನ ಸುಧಾರಿಸುವ ಕುರಿತು ಮಾತನಾಡಿದ್ದರು.
ಪರಮಾಣು ಶಕ್ತಿಯ ಬಗ್ಗೆ ಉಲ್ಲೇಖ!
ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಡೊನಾಲ್ಡ್ ಟ್ರಂಪ್ ಅವರು, ಕಿಮ್ ಜಾಂಗ್ ಉನ್ ಜೊತೆ ಈಗಲೂ ಉತ್ತಮ ಸಂಬಂಧ ಇದೆ. ಏನಾಗುತ್ತಿದೆ ಎಂಬುದನ್ನ ಗಮನಿಸುತ್ತಿದ್ದು ಉ. ಕೊರಿಯಾ ಖಂಡಿತವಾಗೂ ಪರಮಾಣು ಶಕ್ತಿ ಹೊಂದಿದೆ ಎಂದಿದ್ದಾರೆ ಅಮೆರಿಕದ ನೂತನ ಅಧ್ಯಕ್ಷರು. ಈ ಮೂಲಕ ಮತ್ತೊಮ್ಮೆ ಕಿಮ್ ಜಾಂಗ್ ಉನ್ ಭೇಟಿಯ ಬಗ್ಗೆ ಮುನ್ಸೂಚನೆ ಸಿಕ್ಕಂತಾಗಿದ್ದು, ಸಾಕಷ್ಟು ಕುತೂಹಲ ಮೂಡಿದೆ. ಉತ್ತರ ಕೊರಿಯಾ ಪರಮಾಣು ಅಸ್ತ್ರಗಳ ಪರೀಕ್ಷೆಯನ್ನು ಆರಂಭಿಸಿದ ನಂತರ ಅಮೆರಿಕ & ಉತ್ತರ ಕೊರಿಯಾ ನಡುವೆ ಸಂಬಂಧ ಮುರಿದು ಬಿದ್ದಿತ್ತು.












Click it and Unblock the Notifications