Donald Trump: 1,600 ಉದ್ಯೋಗಿಗಳಿಗೆ ದಿಢೀರ್ ಮನೆ ದಾರಿ ತೋರಿಸಿದ ಟ್ರಂಪ್!
ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ಪ್ರತಿಯೊಂದು ಕ್ರಮ ಕೂಡ ಇದೀಗ ಟೀಕೆಗೆ ಗುರಿಯಾಗಿ ದೊಡ್ಡ ಸಂಚಲನ ಸೃಷ್ಟಿ ಮಾಡುತ್ತಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅವರ ಎಡವಟ್ಟು ಒಂದೆರಡಲ್ಲ ಬಿಡಿ. ಅದರಲ್ಲೂ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ವಿಚಾರದಲ್ಲಿ ಇದೇ ಟ್ರಂಪ್ ದೊಡ್ಡ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಮೆರಿಕದ ಸರ್ಕಾರಿ ನೌಕರರಿಗೆ ಭಯ ಶುರುವಾಗಿದ್ದು, ಹೀಗಿದ್ದಾಗಲೇ ಮತ್ತೆ 1,600 ಉದ್ಯೋಗಿಗಳಿಗೆ ದಿಢೀರ್ ಮನೆ ದಾರಿ ತೋರಿಸಲಾಗಿದೆ.
ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ, ಅಂದರೆ ಅಮೆರಿಕದ ಹೊರಗಡೆ ಬೇರೆ ದೇಶಗಳಿಗೆ ಸಹಾಯ ಮಾಡಲು ಸೃಷ್ಟಿಯಾಗಿರುವ ಸಂಸ್ಥೆ USAID ಆಗಿದೆ. ಆದರೆ ಇದೇ ಸಂಸ್ಥೆ ಮೇಲೆ ಟ್ರಂಪ್ & ಜೊತೆಗಾರರ ಕಣ್ಣು ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ. ಅಮೆರಿಕ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಈ ಸಂಸ್ಥೆಯಿಂದ ನೌಕರರನ್ನು ಮನೆಗೆ ಕಳುಹಿಸುವ ಕೆಲಸ ಭರ್ಜರಿಯಾಗಿ ಸಾಗಿದೆ. ಸಂಸ್ಥೆಯಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದರು, ಆದರೆ ಈ ಪೈಕಿ ಕೆಲವೇ ಕೆಲವು ನೌಕರರನ್ನು ಉಳಿಸಿಕೊಂಡು 1,600 ಜನರನ್ನು ದಿಢೀರ್ ವಜಾ ಮಾಡಿರುವ ಆರೋಪ ಕೇಳಿಬಂದಿದೆ.

ವಜಾ ಜೊತೆಗೆ ರಜೆ ಅಸ್ತ್ರ ಪ್ರಯೋಗ!
ದಿಢೀರ್ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಜೊತೆಗೆ ಇನ್ನೂ ನೂರಾರು ನೌಕರರಿಗೆ ಕಡ್ಡಾಯ ರಜೆ ನೀಡಿದೆ ಡೊನಾಲ್ಡ್ ಟ್ರಂಪ್ ಆಡಳಿತ. ಈ ಮೂಲಕ, ದಿಢೀರ್ ಅಮೆರಿಕದಲ್ಲಿ ಸರ್ಕಾರಿ ನೌಕರರಿಗೆ ತಮ್ಮ ಕೆಲಸದ ಭದ್ರತೆ ಬಗ್ಗೆ ಭಯ ಶುರುವಾಗಿದೆ. ಇದೇ ರೀತಿ ಕೆಲಸದಿಂದ ತೆಗೆಯುತ್ತಿದ್ದರೆ ಮುಂದಿನ ಕಥೆ ಏನು? ಎನ್ನುವ ಪ್ರಶ್ನೆ ಕೂಡ ಅವರಲ್ಲಿ ಮೂಡಿದೆ. ಮತ್ತೊಂದು ಕಡೆ ಸರ್ಕಾರದ ಮೇಲೆ ಹೆಚ್ಚುವರಿ ಹೊರೆ ಇರುವ ಕಾರಣಕ್ಕೆ ಹೀಗೆ ಉದ್ಯೋಗ ಕಡಿತ ಅನಿವಾರ್ಯ ಎಂದು ಟ್ರಂಪ್ ಆಡಳಿತ ತನ್ನ ಕ್ರಮ ಸಮರ್ಥಿಸಿಕೊಳ್ಳುತ್ತಿದೆ.












Click it and Unblock the Notifications