ಯುಎಸ್ ಕೋರ್ಟ್ : ಭಗವದ್ಗೀತೆ ಮೇಲೆ ಜಡ್ಜ್ ಪ್ರಮಾಣ
ವಾಷಿಂಗ್ಟನ್,ಸೆ.27: ಅಮೆರಿಕದ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಭಾರತೀಯ ವ್ಯಕ್ತಿಯೊಬ್ಬರು ಜಿಲ್ಲಾ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಶ್ರೀನಿವಾಸನ್ ಅವರು ತಮ್ಮ ತಾಯಿ ಸರೋಜಾ ಅವರ ಕೈಯಲ್ಲಿ ಭಗವದ್ಗೀತೆ ಪುಸ್ತಕದ ಮೇಲೆ ಆಣೆಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು.
ಚಂಡೀಘಡದ ಶ್ರೀನಿವಾಸನ್ ಅಮೆರಿಕದ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 1970ರ ದಶಕದಲ್ಲಿ ಶೀನಿವಾಸನ್ ಹೆತ್ತವರು ಅಮೆರಿಕಕ್ಕೆ ವಲಸೆ ಬಂದಿದ್ದರು. ಶ್ರೀನಿವಾಸನ್ ತಮ್ಮ ವಕೀಲಿ ವೃತ್ತಿಯ ಅವಧಿಯಲ್ಲಿ ಅತ್ಯಂತ ನ್ಯಾಯವಂತ, ದೋಷರಹಿತ ಹಾಗೂ ಅಸಾಧಾರಣ ಪ್ರತಿಭೆವುಳ್ಳವರು ಎಂಬ ಹೆಸರಿಗೆ ಪಾತ್ರರಾದವರು.
46 ವರ್ಷದ ಶ್ರೀನಿವಾಸನ ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ಕೊಲಂಬಿಯಾ ಜಿಲ್ಲಾ ಸಂಚಾರಿ ನ್ಯಾಯಾಲಯಗಳ (ರೋರ್ಟ್ ಆಫ್ ಅಪೀಲ್ಸ್-ಮೇಲ್ಮನವಿಗಳ ಕೋರ್ಟ್) ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ಈ ಮುನ್ನ ಮುಖ್ಯ ನ್ಯಾಯಾಧೀಶರಾದ ನ್ಯಾ.ಸಾಂಡ್ರಾ ಡೆ.ಒಕೊನೋರ್ ಅವರು ಪ್ರಮಾಣ ವಚನ ಬೋಧಿಸಿ ಮಾತನಾಡಿ, ಶ್ರೀನಿವಾಸನ್ ನ್ಯಾಯೋಚಿತ, ದೋಷರಹಿತ ಮತ್ತು ಅಸಾಧಾರಣ ಪ್ರೌಢಿಮೆಯ ವ್ಯಕ್ತಿ ಎಂದು ಬಣ್ಣಿಸಿದರು.
ಈ ಸಮಾರಂಭದ ಇನ್ನೊಂದು ವಿಶೇಷವೆಂದರೆ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪತ್ನಿ ಗುರು ಶರಣ್ ಕೌರ್ ಹಾಜರಾಗಿದ್ದು, ಅಮೆರಿಕಕ್ಕೆ ಆಗಮಿಸಿ ವಿಮಾನ ಇಳಿಯುತ್ತಿದ್ದಂತೆಯೇ ಅತ್ಯಂತ ಆತುರದಲ್ಲಿ ಕೌರ್ ನೇರವಾಗಿ ನ್ಯಾಯಾಲಯಕ್ಕೆ ಧಾವಿಸಿ ಶ್ರೀನಿವಾಸನ್ ಗೆ ಶುಭ ಹಾರೈಸಿದರು. ಶ್ರೀನಿವಾಸನ್ ಅವರ ಪ್ರಮಾಣ ವಚನ ಸಮಾರಂಭದ ಚಿತ್ರಗಳು ಇಲ್ಲಿವೆ ನೋಡಿ...(ಪಿಟಿಐ)

ಚುನಾವಣೆ ಹೇಗಿತ್ತು
ಮೇ ತಿಂಗಳಲ್ಲಿ ಸೆನೆಟ್ ನಲ್ಲಿ ನಡೆದ ಮತ ಸಂಗ್ರಹದಲ್ಲಿ ಶ್ರೀನಿವಾಸನ್ ಗೆ ಅತ್ಯಧಿಕ 97-0 ಮತಗಳಿಂದ ಆಯ್ಕೆಯಾಗಿದ್ದರು. ಸೆನೆಟ್ ನ ಎಲ್ಲಾ 97 ಮತಗಳನ್ನು ಪಡೆದದ್ದು ಶ್ರೀನಿವಾಸನ್ ಮೊದಲ ಸಾಧನೆ.
ಸಂಚಾರಿ ನ್ಯಾಯಾಲಯಗಳ ನ್ಯಾಯಾಧೀಶರಾಗಿ ಭಾರತ ಮೂಲದ ವ್ಯಕ್ತಿ ಹಾಗೂ ದಕ್ಷಿಣ ಏಷ್ಯಾ ಮೂಲದ ವ್ಯಕ್ತಿ ನೇಮಕವಾಗಿದ್ದು ಅಮೆರಿಕ ಇತಿಹಾಸದಲ್ಲಿಯೇ ಪ್ರಥಮ.
ಸಾಲಿಸಿಟರ್ ಜನರಲ್ ಆಗಿದ್ದರು
ಈ ಪ್ರಕ್ರಿಯೆ ಆರಂಭವಾಗಿದ್ದು 2012ರಲ್ಲಿ.2012ರ ಜೂನ್ 11ರಂದು ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ರೀಕಾಂತ್ ಶ್ರೀನಿವಾಸನ್ ಹೆಸರನ್ನು ನಾಮ ನಿರ್ದೇಶನ ಮಾಡಿದ್ದರು.
ಆಗ ಸದನ ಮುಂದೂಡಿಕೆಯಾಗಿದ್ದರಿಂದ 2013ರ ಜನವರಿ 2ರಂದು ಅಧ್ಯಕ್ಷರಿಗೆ ಹಿಂದಿರುಗಿಸಲಾಗಿತ್ತು. ನಂತರ ಜನವರಿ 3ರಂದೇ ಅಧ್ಯಕ್ಷರು ಶ್ರೀನಿವಾಸನ್ ಹೆಸರನ್ನು ಮರು ನಾಮನಿರ್ದೇಶನ ಮಾಡಿದ್ದರು.
ಇದಕ್ಕೂ ಮುನ್ನ ಶ್ರೀನಿವಾಸನ್ ಅಮೆರಿಕದ ಸುಪ್ರೀಂಕೋರ್ಟ್ ಸಾಲಿಸಿಟರ್ ಜನರಲ್ ಆಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು.

ಕುಟುಂಬದೊಡನೆ
ವಾಷ್ಟಿಂಗ್ಟನ್ : ಜಡ್ಜ್ ಶ್ರೀಕಾಂತ್ ಶ್ರೀನಿವಾಸನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಅವರ ತಾಯಿ ಹಾಗೂ ತಂಗಿ ಕೂಡಾ ಪಾಲ್ಗೊಂಡಿದ್ದರು. ಅಮೆರಿಕಕ್ಕೆ ಭಾರತೀಯ ರಾಯಭಾರಿ ನಿರುಪಮಾ ರಾವ್ ಅವರು ಕೂಡಾ ಉಪಸ್ಥಿತರಿದ್ದರು.

ಪ್ರಧಾನಿ ಪತ್ನಿ ಉಪಸ್ಥಿತಿ
ಪ್ರಧಾನಿ ಮನಮೋಹನ್ ಸಿಂಗ್ ಆರ ಪತ್ನಿ ಗುರುಶರಣ್ ಕೌರ್, ಮಕ್ಕಳಾದ ಉಪೇಂದ್ರ ಕೌರ್ ಹಾಗೂ ಅಮೃತ್ ಕೌರ್ ಅವರು ಕೂಡಾ ಶ್ರೀನಿವಾಸನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದರು.
ಅಮೆರಿಕದ ಸುಪ್ರೀಂಕೋರ್ಟ್ ನಂತರ ಎರಡನೆ ಮಹತ್ವದ ಕೋರ್ಟಿಗೆ ಈಗ ಶ್ರೀನಿವಾಸನ್ ಅವರು ಜಡ್ಜ್ ಆಗಿದ್ದಾರೆ.












Click it and Unblock the Notifications