Plane Crash: ಮತ್ತೊಂದು ವಿಮಾನ ದುರಂತ, 181 ಜನರು ಇದ್ದ....
ಮೊನ್ನೆ ಮೊನ್ನೆ ಭೀಕರ ವಿಮಾನ ದುರಂತ ನೋಡಿ ನೊಂದಿದ್ದ ಜಗತ್ತಿಗೆ ಈಗ ಮತ್ತೊಂದು ಸ್ಫೋಟಕ ಸುದ್ದಿ ಸಿಕ್ಕಿದೆ. ಈ ಬಾರಿ ದಕ್ಷಿಣ ಕೊರಿಯಾ ದೇಶದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, 181 ಜನರು ಇದ್ದ ವಿಮಾನ ಕ್ರಾಶ್ ಲ್ಯಾಂಡಿಂಗ್ ಆಗಿದೆ. ಹಾಗಾದ್ರೆ ದುರಂತ ಸಂಭವಿಸಿದ್ದು ಹೇಗೆ? ಸಾವು & ನೋವಿನ ವರದಿ ಏನು ಹೇಳುತ್ತಿದೆ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದೋಣ...
ಸಾಮಾನ್ಯವಾಗಿ ವಿಮಾನ ಪ್ರಯಾಣ ಮಾಡಿದರೆ ಆರಾಮವಾಗಿ & ಅತಿ ಬೇಗ ತಮ್ಮ ಗುರಿಯನ್ನು ತಲುಪಬಹದು ಅಂತಾ ಪ್ರಯಾಣಿಕರು ಅಂದುಕೊಳ್ಳುತ್ತಾರೆ. ಅದರಲ್ಲೂ, ಶ್ರೀಮಂತರ ಬಳಿ ಇರುವ ಹಣ ಖರ್ಚು ಮಾಡಲು ಸುಲಭ ಮಾರ್ಗ ಅಂದ್ರೆ ಅದು ವಿಮಾನ ಪ್ರಯಾಣ ಅಂತಾ ವಾದ ಮಾಡುವವರು ಕೂಡ ಇದ್ದಾರೆ. ಹೀಗಿದ್ದಾಗ, ಇಷ್ಟು ದಿನ ಸೇಫ್ ಅರ್ಥಾತ್ ಸುರಕ್ಷಿತ ಅಂತಾ ಕರೆಸಿಕೊಳ್ಳುತ್ತಿದ್ದ ವಿಮಾನ ಪ್ರಯಾಣ ಈಗ ಭೀಕರ ದುರಂತಗಳ ಸರಮಾಲೆಗೆ ತುತ್ತಾಗಿ, ಭಯ ಹುಟ್ಟಿಸುತ್ತಿದೆ. ಹಾಗಾದ್ರೆ ದಕ್ಷಿಣ ಕೊರಿಯಾ ದೇಶದಲ್ಲಿ ಜಸ್ಟ್ ಸಂಭವಿಸಿರುವ ವಿಮಾನ ದುರಂತದಲ್ಲಿ ಏನಾಯ್ತು?

ದಕ್ಷಿಣ ಕೊರಿಯಾ ವಿಮಾನ ದುರಂತದಲ್ಲಿ....
ಹೌದು, ಕೆಲವು ದಿನಗಳ ಹಿಂದಷ್ಟೇ ಕಝಕಿಸ್ತಾನ್ ದೇಶದಲ್ಲಿ ವಿಮಾನ ದುರಂತ ನಡೆದಿದ್ದು 38 ಜನರು ಬಲಿಯಾಗಿದ್ದರು. ಈ ಘಟನೆ ಮಾಸುವ ಮೊದಲೇ ದಕ್ಷಿಣ ಕೊರಿಯಾ ದೇಶದಲ್ಲಿ ಕೂಡ ಮತ್ತೊಂದು ರಣಭೀಕರ ವಿಮಾನ ದುರಂತ ನಡೆದು ಹೋಗಿದ್ದು, 181 ಪ್ರಯಾಣಿಕರು ಇದ್ದ ವಿಮಾನ ಒಂದು ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೆ ತುತ್ತಾಗಿದೆ.
181 ಜನರಲ್ಲಿ 29 ಜನರು ಬಲಿ?
ಲ್ಯಾಂಡಿಂಗ್ ಮಾಡುವ ಸಮಯದಲ್ಲಿ ರನ್‌ವೇ ಮೂಲಕ ಜಾರಿರುವ ದಕ್ಷಿಣ ಕೊರಿಯಾದ ಈ ವಿಮಾನ ನೇರ ರನ್‌ವೇ ಪಕ್ಕಕ್ಕೆ ಹೋಗಿ ಕ್ರಾಶ್ ಲ್ಯಾಂಡ್ ಆಗಿದೆ. 'ಜೆಜು ಏರ್ ಫ್ಲೈಟ್ 2216' ವಿಮಾನವು ಥೈಲ್ಯಾಂಡ್ ಮೂಲಕ ದಕ್ಷಿಣ ಕೊರಿಯಾಗೆ ಬರುತ್ತಿತ್ತು ಎನ್ನಲಾಗಿದೆ. ಆದರೆ ಈ ರೀತಿ ಥೈಲ್ಯಾಂಡ್ ಮೂಲಕ ದಕ್ಷಿಣ ಕೊರಿಯಾಗೆ ಬಂದು ಲ್ಯಾಂಡ್ ಆಗುವ ಸಮಯದಲ್ಲೇ ಭೀಕರ ದುರಂತ ಸಂಭವಿಸಿದೆ. ಮತ್ತೊಂದು ಕಡೆ 181 ಜನರಿದ್ದ ವಿಮಾನದಲ್ಲಿ ಕನಿಷ್ಠ 29 ಜನರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ.
ಒಟ್ನಲ್ಲಿ ಬೆಳ್ಳಂ ಬೆಳಗ್ಗೆ ಮತ್ತೊಂದು ಭೀಕರ ವಿಮಾನ ದುರಂತ ಸಂಭವಿಸಿದ್ದು, ಈಗ ವಿಮಾನ ಪ್ರಯಾಣಕರಿಗೆ ಇಂತಹ ಘಟನೆಗಳು ಇನ್ನಷ್ಟು ಭಯ ಹುಟ್ಟಿಸಿವೆ. ಮತ್ತೊಂದು ಕಡೆ ಇದೀಗ ದಕ್ಷಿಣ ಕೊರಿಯಾದಲ್ಲಿ ನಡೆದ ವಿಮಾನ ದುರಂತದ ಬಗ್ಗೆ ಪ್ರಾಥಮಿಕ ತನಿಖೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಕಾರಣ ಏನು? ಅನ್ನೋದು ಬಯಲಾಗುವ ನಿರೀಕ್ಷೆ ಇದೆ.












Click it and Unblock the Notifications