Israel: ಇಸ್ರೇಲ್ ವೈಮಾನಿಕ ದಾಳಿ; ಹಿಜ್ಬುಲ್ಲಾದ ಮುಖ್ಯ ಕಮಾಂಡರ್ ಸಾವು
ಪ್ರಮುಖ ಬೆಳವಣಿಗೆಯೊಂದರಲ್ಲಿ ಇಸ್ರೇಲ್ ಹಿಜ್ಬುಲ್ಲಾದ ಕಮಾಂಡರ್ ಅನ್ನು ಕೊಂದು ಹಾಕಿರುವುದಾಗಿ ಘೋಷಣೆ ಮಾಡಿದೆ. ವೈಮಾನಿಕ ದಾಳಿಯಿಂದಾಗಿ ಬೈರುತ್‌ನಲ್ಲಿ 12 ಮಂದಿ ಮೃತಪಟ್ಟಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಪೇಜರ್, ವಾಕಿ ಟಾಕಿಗಳು ಸ್ಫೋಟಗೊಂಡು ಕಳೆದ ಎರಡು ದಿನಗಳಿಂದ 27 ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಗಾಯಗೊಂಡ ಘಟನೆ ಬಳಿಕ ಈ ಘಟನೆ ನಡೆದಿದೆ.
1983 ರಲ್ಲಿ ಬೈರುತ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿನ ಗಣ್ಯ ಇಬ್ರಾಹಿಂ ಅಕಿಲ್ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈತ ಲೆಬನಾನ್‌ನಲ್ಲಿ ರಾಡ್ವಾನ್ ಘಟಕದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ.

ವೈಮಾನಿಕ ದಾಳಿ ನಡೆದ ಸ್ಥಳದಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿದೆ ಎಂದು ಎಎಫ್‌ಪಿ ಪತ್ರಕರ್ತರು ವರದಿ ಮಾಡಿರುವುದಾಗಿ ಎನ್‌ಡಿಟಿವಿ ಹೇಳಿದೆ. ಹಿಜ್ಬುಲ್ಲಾ ಭದ್ರಕೋಟೆಯಲ್ಲಿ ಬಹುಮಹಡಿ ಕಟ್ಟಡದ ಕೆಳ ಮಹಡಿಗಳು ಕೂಡ ದಾಳಿಯಲ್ಲಿ ನಾಶವಾಗಿದೆ ಎಂದು ವರದಿಯಾಗಿದೆ.
ತೀವ್ರಗೊಳ್ಳುತ್ತಿದೆ ಸಂಘರ್ಷ
ಮಂಗಳವಾರ ಮತ್ತು ಬುಧವಾರ ಹಿಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ಸಂವಹನ ಸಾಧನಗಳು ಸ್ಫೋಟಗೊಂಡಿದ್ದಕ್ಕೆ ಇಸ್ರೇಲ್ ಕಾರಣ ಎಂದು ದೂಷಿಸಲಾಗಿದೆ. ಈ ಸ್ಫೋಟಗಳಲ್ಲಿ 27 ಮಂದಿ ಸಾವನ್ನಪ್ಪಿದ್ದು, ಇದು ಹಿಜ್ಬುಲ್ಲಾವನ್ನು ತತ್ತರಿಸುವಂತೆ ಮಾಡಿದೆ.
ಇಸ್ರೇಲ್ ಸೈನ್ಯವು ಶುಕ್ರವಾರ ಅಖಿಲ್ ಅನ್ನು ಕೊಲ್ಲಲು ದಾಳಿ ನಡೆಸಿದೆ ಮತ್ತು ಇದು ಸುಮಾರು 10 ಹಿರಿಯ ರಾದ್ವಾನ್ ಕಮಾಂಡರ್ ಗಳನ್ನು ಕೊಂದಿದೆ ಎಂದು ಹೇಳಿದೆ. ಈ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 66 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಹಿಜ್ಬುಲ್ಲಾ ಅಧಿಕೃತವಾಗಿ ಕಮಾಂಡರ್ ಸಾವನ್ನು ದೃಢೀಕರಿಸಿಲ್ಲ, ಆದರೆ ದಾಳಿಯ ನಂತರ ಅದು ಇಸ್ರೇಲಿ ಗುಪ್ತಚರ ನೆಲೆಗಳನ್ನು ಗುರಿಯಾಗಿಸಿ ರಾಕೆಟ್‌ಗಳನ್ನು ಉಡಾಯಿಸಿದೆ ಎಂದು ಹೇಳಿದೆ. ಹಮಾಸ್ ತನ್ನ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಬಳಿಕ ಶುರುವಾದ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಹಿಜ್ಬುಲ್ಲಾ ಹೋರಾಟಗಾರರು ಮತ್ತೊಂದು ಗಡೆ ಇಸ್ರೇಲ್-ಲೆಬನಾನ್ ಗಡಿಯಲ್ಲಿ ದಾಳಿ ಮಾಡುತ್ತಿದ್ದು, ಇಸ್ರೇಲ್ ಹೋರಾಟ ನಡೆಸುತ್ತಿದೆ.
ಒಂದು ವರ್ಷದಿಂದ ಇಸ್ರೇಲ್ ಗಾಜಾ ಮೇಲೆ ಗಮನ ಹರಿಸಿತ್ತು, ಆದರೆ ಹಮಾಸ್ ಹೆಚ್ಚು ದುರ್ಬಲವಾದ ಬಳಿಕ ಯುದ್ಧದ ಗಮನ ಇಸ್ರೇಲ್‌ನ ಉತ್ತರ ಭಾಗದ ಕಡೆಗೆ ತಿರುಗಿದೆ. ದಿನದಿಂದ ದಿನಕ್ಕೆ ಸಂಘರ್ಷ ತೀವ್ರಗೊಳ್ಳುತ್ತಿದೆ, ಇಸ್ರೇಲ್ ಉಗ್ರರನ್ನು ಸದೆ ಬಡಿಯುವವರೆಗೂ ದಾಳಿಯನ್ನು ನಿಲ್ಲಿಸಲ್ಲ ಎನ್ನುತ್ತಿದೆ.












Click it and Unblock the Notifications