ಚಿತ್ರಗಳಲ್ಲಿ: ದೇಶ, ವಿದೇಶಗಳ ಸಂಕ್ಷಿಪ್ತ ಸುದ್ದಿ
ಬೆಂಗಳೂರು,
ಮೇ.20: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ ಆಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. id="toptextpromo"> id='are-slot-1' class='oiad oi-axt oiadv'>ಹುಬ್ಬಳ್ಳಿಯಲ್ಲಿ
ನಡೆದ ಸಾಮೂಹಿಕ ಉಪನಯನ ಹಾಗೂ ಸಾಮೂಹಿಕ ಮದುವೆ ಸಂಭ್ರಮದ ಚಿತ್ರ ಇಲ್ಲಿದೆ. ನವದೆಹಲಿಯಲ್ಲಿ ಬಾಡ್ಮಿಂಟನ್ ಹಬ್ಬ ಜಾರಿಯಲ್ಲಿದ್ದು ಭಾರತೀಯ ಪಟುಗಳು ಭರ್ಜರಿ ಜಯ ಸಾಧಿಸುತ್ತಿದ್ದಾರೆ. ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ಸೈನಾ ನೆಹ್ವಾಲ್ ಆಟದ ಭಂಗಿ ಇಲ್ಲಿ ಕಾಣಬಹುದು, ಗೆಲುವಿನ ಸಂಭ್ರಮದ ನಂತರ ದೇವರಿಗೆ ಕೈ ಮುಗಿದ ನಾಯ್ಡು, ರೋಮ್ ನಲ್ಲಿ ಬ್ರಿಟಿಷ್ ಪ್ರಿನ್ಸ್ ಹ್ಯಾರಿ ಮುಂತಾದ ಚಿತ್ರಗಳು ಇಂದಿನ ಸಂಗ್ರಹದಲ್ಲಿದೆ ತಪ್ಪದೇ ನೋಡಿ... id='are-slot-2' class='oiad oi-axt oiadv'>
ಹುಬ್ಬಳ್ಳಿಯಿಂದ ರೋಮ್ ತನಕ
ಹುಬ್ಬಳ್ಳಿಯಲ್ಲಿ ನಡೆದ ಸಾಮೂಹಿಕ ಉಪನಯನ. ಚಿತ್ರ ಕೃಪೆ: ಪಿಟಿಐ

ರೋಮ್ ನಲ್ಲಿ ಪ್ರಿನ್ಸ್ ಹ್ಯಾರಿ
ರೋಮ್ ನಲ್ಲಿ ಬ್ರಿಟನ್ನಿನ ಪ್ರಿನ್ಸ್ ಹ್ಯಾರಿ(ಬಲಗಡೆ) ಇಟಾಲಿಯನ್ ಗಈಡ್ ಲಾಆ ಸಿಗ್ಲಿಯಾನಿ ಅವರ ಜತೆ ಕೊಲೊಸ್ಸಾಮ್ ಸ್ಮಾರಕಕ್ಕೆ ಭೇಟಿ ನೀಡಿದ್ದರು. ರೋಮನ್ ಸಾಮ್ರಾಜ್ಯದ ಅವಶೇಷದ ಬಗ್ಗೆ ಪ್ರಿನ್ಸ್ ಹ್ಯಾರಿ ವಿಶೇಷ ಆಸಕ್ತಿಯಿಂದ ತಿಳಿದುಕೊಂಡರು ಎಂದು ತಿಳಿದು ಬಂದಿದೆ.AP/PTI

ಹುಬ್ಬಳ್ಳಿಯಲ್ಲಿ ಸಾಮೂಹಿಕ ವಿವಾಹ
ಕರ್ನಾಟಕದ ಹುಬ್ಬಳ್ಳಿಯಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಇತ್ತೀಚೆಗೆ ನಡೆಯಿತು.

ಜ್ವಾಲಾ ಗುಟ್ಟಾ-ಅಶ್ವಿನಿ ಆಟದ ಭಂಗಿ
ನವದೆಹಲಿಯಲಿ ನಡೆದಿರುವ ಉಬೆರ್ ಕಪ್ ಬಾಡ್ಮಿಂಟನ್ ಪಂದ್ಯದಲ್ಲಿ ಹಾಂಕಾಂಗ್ ನ ಹೊಯಿ ವಾಹ್ ಚಾವ್ ಹಾಗೂ ಲೊಕ್ ಯಾನ್ ಪೂನ್ ಅವರನ್ನು ಮಣಿಸಿದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅವರ ವಿಜಯದ ಕ್ಷಣ. ಪಿಟಿಐ ಚಿತ್ರ

ಸಭೆಯತ್ತ ಸೋನಿಯಾ -ರಾಹುಲ್ ನಡಿಗೆ
ನವದೆಹಲಿಯಲ್ಲಿ ಸೋಮವಾರ ಸಂಜೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಳ್ಳಲು ಉಪಾಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೊರಟ್ಟಿದ್ದು ಹೀಗೆ PTI Photo by Subhav Shukla

ತಿರುಪತಿಯಲ್ಲಿ ಟಿಡಿಪಿ ಅಧ್ಯಕ್ಷ ನಾಯ್ಡು
ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು.

ಅಭಿಮಾನಿಗಳತ್ತ ಕೈ ಬೀಸಿದ ಸೈನಾ
ನವದೆಹಲಿಯಲ್ಲಿ ನಡೆದಿರುವ ಥಾಮಸ್ ಕಪ್ ಟೂರ್ನಿಯಲ್ಲಿ ಭಾರತದ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಹಾಂಕಾಂಗ್ ನ ಪೂಯಿ ಯಿನ್ ಯುಪ್ ಅವರನ್ನು ಸೋಲಿಸಿ ಅಭಿಮಾನಿಗಳತ್ತ ಕೈ ಬೀಸಿದರು.PTI Photo by Manvender Vashist












Click it and Unblock the Notifications