• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಹೊಸ ಅಧ್ಯಕ್ಷರ ಆಯ್ಕೆ, ನೆತನ್ಯಾಹು ಕೆಳಗಿಳಿಸಲು ತಂತ್ರ?

|
Google Oneindia Kannada News

ಟೆಲ್ ಅವೀವ್, ಜೂನ್ 3: ಇಸ್ರೇಲ್ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಭಾರಿ ರಾಜಕೀಯ ಬೆಳವಣಿಗೆ ನಡೆದಿದ್ದು, ಪ್ರಧಾನಮಂತ್ರಿ ಸ್ಥಾನಕ್ಕೂ ಹೊಸಬರನ್ನು ಆಯ್ಕೆ ಮಾಡುವ ಸಂದರ್ಭ ಬಂದಿದೆ. ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧ ಎಂಟಕ್ಕೂ ಅಧಿಕ ಪಕ್ಷಗಳು ಒಗ್ಗೂಡಿದ್ದು, ನೆತನ್ಯಾಹು ಆವರನ್ನು ಪಿಎಂ ಸ್ಥಾನದಿಂದ ಕೆಳಗಿಳಿಸಲು ಮುಂದಾಗಿವೆ.

ವಿಪಕ್ಷಗಳ ಮುಖಂಡರಾಗಿರುವ ಲಾಪಿಡ್ ಹಾಗೂ ಬೆನ್ನೆಟ್ ಅವರು ಪಿಎಂ ಆಗಿ ದೇಶವನ್ನು ಮುನ್ನಡೆಸುವ ಸಾಧ್ಯತೆಯಿದೆ. ಹೊಸ ಮೈತ್ರಿಕೂಟ ರಚನೆಯಾಗಿದ್ದು, ಬಹುಕಾಲದ ನಂತರ ಹೊಸ ನಾಯಕತ್ವವನ್ನು ಇಸ್ರೇಲ್ ಎದುರು ನೋಡುತ್ತಿದೆ.

ಭ್ರಷ್ಟಾಚಾರ ಕೇಸ್: ವಿಚಾರಣೆ ಎದುರಿಸಿ ದಾಖಲೆ ಬರೆದ ಇಸ್ರೇಲ್ ಪ್ರಧಾನಿಭ್ರಷ್ಟಾಚಾರ ಕೇಸ್: ವಿಚಾರಣೆ ಎದುರಿಸಿ ದಾಖಲೆ ಬರೆದ ಇಸ್ರೇಲ್ ಪ್ರಧಾನಿ

ಇಸ್ರೇಲ್ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಪ್ರಧಾನಿಯೊಬ್ಬರ ವಿರುದ್ಧ ಭ್ರಷ್ಟಾಚಾರದ ಪ್ರಕರಣ ಎದುರಿಸಿದ ಘಟನೆಗೆ ಇಸ್ರೇಲ್ ಸಾಕ್ಷಿಯಾಗಿತ್ತು.

ಬೆಂಜಮಿನ್ ನೇತನ್ಯಾಹು ವಿರುದ್ಧ ಭ್ರಷ್ಟಾಚಾರ, ಮೋಸ, ನಂಬಿಕೆ ದ್ರೋಹ ಪ್ರಕರಣಗಳು ದಾಖಲಾಗಿದೆ. ದೇಶದ ರಾಜಕೀಯ ಅಸ್ಥಿರತೆ ನಡುವೆ ವಿಚಾರಣೆಗೆ ಹಾಜರಾಗಿದ್ದರು.

ಬೆನ್ನಿ ಗಾಂಟ್ಜ್ ಜೊತೆ 18 ತಿಂಗಳ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡಿರುವ ನೇತನ್ಯಾಹು ಸರ್ಕಾರ ಉಳಿಸಿಕೊಂಡಿದ್ದಲ್ಲದೆ, ರಾಜೀನಾಮೆ ನೀಡದೆ ವಿಚಾರಣೆ ಎದುರಿಸಿದ್ದರು.

ಇನ್ನೊಂದೆಡೆ, ಸಂಸತ್ತಿನಲ್ಲಿ 120 ಸದಸ್ಯರು ಲೇಬರ್ ಪಾರ್ಟಿಯ ಮಾಜಿ ಅಧ್ಯಕ್ಷ, ವಿಪಕ್ಷ ನಾಯಕ ಹೆರ್ಜೋಗ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

English summary
Opposition reach coalition deal to oust Israeli PM Netanyahu and Isaac Herzog has been elected the new president of Israel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X