ಮುಗೀತು ಮನುಷ್ಯರ ಕಥೆ... ಪರಮಾಣು ಬಾಂಬ್ ಪ್ರಯೋಗಕ್ಕೆ ರಷ್ಯಾ... Ukraine War
ಮನುಷ್ಯರು ಮಾಡುತ್ತಿರುವ ಎಡವಟ್ಟುಗಳು ಒಂದೊಂದಾಗಿ ಇಡೀ ಭೂಮಿಯನ್ನೇ ನುಂಗಿ ಹಾಕುವ ವಾತಾವರಣ ಸೃಷ್ಟಿ ಮಾಡುತ್ತಿದೆ. ಪರಮಾಣು ಬಾಂಬ್ ಎಂಬ ಭೂಮಿಯನ್ನೇ ನಾಶ ಮಾಡುವ ವಿನಾಶಕಾರಿ ಅಸ್ತ್ರ ಇಂದಿಗೂ ಮಾನವರ ಜೀವನ ನಾಶ ಮಾಡಲು ಕಾಯುತ್ತಿದೆ. ಹಿಂದಿನ ಹಲವು ತಪ್ಪುಗಳಿಂದ ಪಾಠ ಕಲಿಯದ ಮನುಷ್ಯ ಇಂದಿಗೂ ತನ್ನ ತಪ್ಪುಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದು ಸಾಲು ಸಾಲು ವಿನಾಶ ಸೃಷ್ಟಿ ಮಾಡುತ್ತಿದ್ದಾನೆ. ಇಂತಹ ಸಮಯದಲ್ಲೇ, ಮುಗೀತು ಮನುಷ್ಯರ ಕಥೆ... ಪರಮಾಣು ಬಾಂಬ್ ಪ್ರಯೋಗಕ್ಕೆ ರಷ್ಯಾ...
ಯುದ್ಧ ಎಂಬ ಕುಲುಮೆಯಲ್ಲಿ ಬೇಯುತ್ತಿರುವ ರಷ್ಯಾ & ಉಕ್ರೇನ್ ತಿಕ್ಕಾಟ ಈ ಮತ್ತಷ್ಟು ಜೋರು ಜೋರಾಗುತ್ತಿದೆ. ರಷ್ಯಾ & ಉಕ್ರೇನ್ ಯುದ್ಧವನ್ನ ನಿಲ್ಲಿಸುವುದು ಯಾರು? ಹಿಂಗೆ ಬಡಿದಾಡುತ್ತಿರುವ ರಷ್ಯಾ & ಉಕ್ರೇನ್ ಸಮಾಧಾನ ಮಾಡುವುದು ಯಾರು? ಎಂಬ ಪ್ರಶ್ನೆಗಳ ನಡುವೆ ಇದೀಗ ಭಯಾನಕ ವಿಚಾರ ಸಂಚಲನ ಸೃಷ್ಟಿ ಮಾಡಿದೆ. ಅಂದಹಾಗ ಉಕ್ರೇನ್ ವಿರುದ್ಧ ಇದೀಗ ರಷ್ಯಾ ತನ್ನ ಬಳಿ ಇರುವ ಭಯಾನಕ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ ಎಂಬ ಸುದ್ದಿ ಇಡೀ ಪ್ರಪಂಚದ ಕೈಕಾಲು ನಡುಗುವಂತೆ ಮಾಡಿದೆ.

ಪರಮಾಣು ಬಾಂಬ್ ಪ್ರಯೋಗಕ್ಕೆ ರಷ್ಯಾ...
ನಿಮಗೆಲ್ಲಾ ಗೊತ್ತಿರುವಂತೆ ರಷ್ಯಾ ಎಂಬ ದೇಶವನ್ನ ಮಿಲಿಟರಿ ವಿಚಾರದಲ್ಲಿ ಮೀರಿಸಲು ಆಗಲ್ಲ ಅನ್ನೋದು ಮತ್ತೊಮ್ಮೆ ಗೊತ್ತಾಗಿದೆ. ಅಕಸ್ಮಾತ್ ರಷ್ಯಾ ದೇಶವನ್ನ ಮೀರಿಸುವ ಕೆಲಸ ಮಾಡಿದ್ರೆ ಅದು ತನ್ನ ಬಳಿ ಇರುವ ಪರಮಾಣು ಅಸ್ತ್ರ ಬಳಸುವುದು ಗ್ಯಾರಂಟಿ ಅನ್ನೋದು ಕೂಡ ಇದೀಗ ಗೊತ್ತಾಗಿದೆ. ಇಂತಹ ಸಮಯದಲ್ಲೇ ಸ್ಪೋಟಕ ವಿಚಾರ ಒಂದು ಬಯಲಾಗಿದೆ...
ಆದಷ್ಟು ಬೇಗ ಯುದ್ಧ ನಿಲ್ಲುತ್ತಾ?
ಉಕ್ರೇನ್ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ, ಸದ್ಯಕ್ಕೆ ಯುದ್ಧ ನಿಂತರೆ ಸಾಕಪ್ಪಾ... ಸಾಕು... ಅಂತಿದ್ದಾರೆ ಅಲ್ಲಿನ ಜನರು. ಆದರೆ ಉಕ್ರೇನ್ ಅಧ್ಯಕ್ಷ ಮಾತ್ರ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಎಡವಟ್ಟು, ಎಡವಟ್ಟು ಆಲೋಚನೆ ಮಾಡುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಉಕ್ರೇನ್ ಇದೇ ರೀತಿಯಾಗಿ ನಿಲುವು ಹೊಂದಿದ್ದರೆ ಇನ್ನೇನು ಮತ್ತಷ್ಟು ಕಠಿಣ ಪರಿಸ್ಥಿತಿ ಗ್ಯಾರಂಟಿ ಎನ್ನಲಾಗುತ್ತಿದೆ. ಇದೆಲ್ಲವನ್ನೂ ಮೀರಿ ಸ್ವತಃ ರಷ್ಯಾ ಈಗ ಸಂಧಾನ ಮಾತುಕತೆಗೆ ಸಿದ್ಧವಾಗಿರುವುದು ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಯುದ್ಧ ನಿಂತರೆ ಸಾಕು ಅಂತಾ ಇಡೀ ಜಗತ್ತು ಈಗ ಹೇಳುತ್ತಿದೆ. ಆದರೆ ಯುದ್ಧ ನಿಲ್ಲಿಸಲು ರಷ್ಯಾ ಸಿದ್ಧವಿಲ್ಲ, ಹಾಗೇ ಸಂಧಾನ ಮಾಡಿಕೊಳ್ಳಲು ಉಕ್ರೇನ್ ಕೂಡ ಸಿದ್ಧ ಇಲ್ಲ ಈಗ...












Click it and Unblock the Notifications