ಕಷ್ಟಕ್ಕಾದ ಗ್ರಾಮಕ್ಕೆ ನೆರವಾಗಿ ನಿಂತ ಬಿಲಿಯನೇರ್: ಈತನ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ತುಂಬಾ ಸಹಾಯ ಮಾಡಿ ಎತ್ತರಕ್ಕೆ ಬೆಳೆಯುವಂತೆ ಶ್ರಮಿಸಿದವರನ್ನು ಅತೀ ಬೇಗನೆ ಮರೆತುಬಿಡುತ್ತಾರೆ. ಯಾಕೆಂದರೆ ಕೈಯಲ್ಲಿ ಹಣ ಇದೆ ಏನು ಬೇಕಾದರೂ ಮಾಡಬಹುದೆಂಬ ದೌಲತ್ತು ಬಂದುಬಿಡುತ್ತದೆ. ಇದರ ನಡುವೆಯೂ ಕಷ್ಟಕ್ಕಾದರನ್ನ ಕೈಬಿಡದೇ ನೋಡಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ. ಇದಕ್ಕೆ ಉದಾಹರಣೆ ಈ ಒಬ್ಬ ಉದ್ಯಮಿ ಆಗಿದ್ದಾರೆ.
ಈಗ ದೊಡ್ಡ ಮಟ್ಟಕ್ಕೆ ಬೆಳೆದ ವ್ಯಕ್ತಿ ನೆರವಾದರನ್ನ ನಡು ನೀರಿನಲ್ಲಿ ಕೈಬಿಟ್ಟು ಅವರನ್ನ ಜಾಡಿಸಿ ಹೊದ್ದುಬಿಡುತ್ತಾರೆ. ಅಂತಹದ್ದರಲ್ಲಿ ಇಲ್ಲೊಬ್ಬ ಉದ್ಯಮಿ ತಾನು ಬಿಲಿಯನೇರ್ ಆಗುವುದಕ್ಕೆ ಕಾರಣವಾದ ಗ್ರಾಮವನ್ನು ಇದುವರೆಗೂ ಮರೆಯದೇ ಆ ಗ್ರಾಮದವರ ಕಷ್ಟಗಳಿಗೆ ಸ್ಪಂದಿಸುತ್ತಾ ಈಗಲೂ ನೆರವಾಗುತ್ತಲೇ ಬಂದಿದ್ದಾರೆ ಎನ್ನುವ ಮಾಹಿತಿ ಇದೆ.

ಕಾಲೇಜು ದಿನದಲ್ಲಿ ಕಾಲೇಜು ಶುಲ್ಕ ಕಟ್ಟಲು ಎಲ್ಲೆಲ್ಲೋ ಅಲೆದಾಡಿದ ಇಲ್ಲೊಬ್ಬ ವ್ಯಕ್ತಿ ಇದೀಗ ದೊಡ್ಡ ಉದ್ಯಮಿಯಾಗಿದ್ದಾನೆ. ಹಾಗೆ ತಾನು ಬೆಳೆದು ಬಂದ ಹಾದಿ ಮರೆಯದೆ ಈಗಲೂ ತನ್ನ ಓದಿಗೆ ಸಹಾತ ಮಾಡಿದಂತಹವರನ್ನು ದೇವರಂತೆ ನೋಡಿಕೊಳ್ಳುತ್ತಿದ್ದಾನೆ. ಆತ ಈಗ ಬೇರೆ ಯಾರು ಅಲ್ಲ, ಚೀನಾದ ಬಿಲಿಯನೇರ್ ರಿಚರ್ಡ್ ಲಿಯು ಕಿಯಾಂಗ್‌ಡಾಂಗ್. ಆತ ಪ್ರತಿ ವರ್ಷ ತನ್ನ ಹುಟ್ಟೂರಿಗೆ ಎಷ್ಟು ಸಹಾಯ ಮಾಡುತ್ತಾನೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚೀನಾದ ಚಿಕ್ಕ ಗ್ರಾಮದಲ್ಲಿ ಬೆಳೆದ ರಿಚರ್ಡ್ ಲಿಯು ಕಿಯಾಂಗ್‌ಡಾಂಗ್ ಕಾಲೇಜು ದಿನಗಳಲ್ಲಿ ಕಾಲೇಜು ಶುಲ್ಕ ಕಟ್ಟಲಾಗದೆ ಅಲೆದಾಡಿದ್ದ. ಕೊನೆಗೆ ಇದನ್ನು ಗಮನಿಸಿದ ಗ್ರಾಮದವರು ಆತನ ಸಹಾಯಕ್ಕೆ ದಾವಿಸಿ ಆತನ ಕಾಲೇಜು ಶುಲ್ಕವನ್ನು ಸಂಗ್ರಹಿಸಿ ಕೊಟ್ಟಿದ್ದರು. ಆದ್ದರಿಂದ ಈಗ ಆತ ದೊಡ್ಡ ಉದ್ಯಮಿಯಾದ ಮೇಲೂ ಈ ಸಹಾಯವನ್ನ ಮರೆಯದೇ ಪ್ರತಿ ವರ್ಷ ತನ್ನ ಹುಟ್ಟೂರಿನ ಪ್ರತಿ ಕುಟುಂಬಕ್ಕೂ 1 ಲಕ್ಷ ರೂಪಾಯಿ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ.
ಅಲ್ಲದೆ, ಈ ಗ್ರಾಮದಲ್ಲಿ 60 ವರ್ಷ ಮೇಲ್ಪಟ್ಟವರಿಗೆ 1,400 ಡಾಲರ್ ನಗದು ರೂಪದಲ್ಲಿ ಸಹಾಯ ಮಾಡುತ್ತಿದ್ದಾನೆ. ಪ್ರತಿ ಕುಟುಂಬಕ್ಕೆ ಸಾವಿರಾರು ಯುವಾನ್ ಮೌಲ್ಯದ ಆಹಾರ ಪದಾರ್ಥ, ಬಟ್ಟೆ, ಗೃಹಪಯೋಗಿ ವಸ್ತುಗಳು ಸೇರಿದಂತೆ ಹಲವು ಉಡುಗೊರೆಗಳನ್ನು ಕೊಡುತ್ತಾ ಬಂದಿದ್ದಾನೆ. ಇದು ಆರಂಭಗೊಂಡಿದ್ದು, 90ರ ದಶಕದಲ್ಲಿ.
ಚೀನಾದ ಬೀಜಿಂಗ್‌ನಲ್ಲಿರುವ ವಿಶ್ವವಿದ್ಯಾಲಯ ವಿಶ್ವದಲ್ಲೇ ಪ್ರಸಿದ್ಧಿಯಾಗಿದ್ದು, ಎಲ್ಲರೂ ಇಲ್ಲಿ ಓದಬೇಕೆಂಬ ಕನಸು ಕಾಣುವಂತಹ ವಿವಿ ಆಗಿದೆ. ವಿಶ್ವದ ಎಲ್ಲಾ ಕಡೆಗಳಿಂದಲೂ ಈ ವಿಶ್ವವಿದ್ಯಾಲಯಕ್ಕೆ ವಿದ್ಯಾಭ್ಯಾಸಕ್ಕೆ ಆಗಮಿಸುತ್ತಾರೆ. ಅದೇ ರೀತಿ 1990ರಲ್ಲಿ ಲಿಯು ಕೂಡ ಹೊರಟ್ಟಿದ್ದ. ಆದರೆ ಕಟ್ಟಲಾಗದಷ್ಟು ವಿವಿಯ ಶುಲ್ಕವಿತ್ತು. ಈ ವೇಳೆ ಊರಿನವರೆಲ್ಲ ಸೇರಿ ಆತನಿಗೆ 500 ಯುವಾನ್ ಹಣ, 76 ಮೊಟ್ಟೆಗಳನ್ನು ನೀಡಿ ಕಳುಹಿಸಿದ್ದರಂತೆ.
ಬಿಲಿಯನೇರ್ ರಿಚರ್ಡ್ ಲಿಯು ಕಿಯಾಂಗ್‌ಡಾಂಗ್ ಹಿನ್ನೆಲೆ: ಲಿಯು ಬೀಜಿಂಗ್ ವಿಶ್ವವಿದ್ಯಾಲಯದಲ್ಲಿ ಓದು ಮುಗಿಸಿ ತನ್ನದೇ ಸ್ವಂತ ಉದ್ಯಮವನ್ನ ಕಟ್ಟುವ ಕನಸು ಕಂಡಿದ್ದನು. ಈ ವೇಳೆ ಆತನ ಕಣ್ಣಿಗೆ ಬಿದ್ದಿದ್ದೇ ಇ-ಕಾಮರ್ಸ್. ಚೀನಾದಲ್ಲಿ ಇ-ಕಾಮರ್ಸ್ ಅಂದರೆ ಅಲಿಬಾಬಾ ಎಂಬ ಮಾತಿದೆ. ಇಂತಹ ದೊಡ್ಡ ಕ್ಷೇತ್ರದಲ್ಲಿ ಜೆಡಿ.ಕಾಮ್ ಎಂಬ ಇ-ಕಾಮರ್ಸ್ ಸಂಸ್ಥೆ ಹುಟ್ಟುಹಾಕಿದ. ಇದು ಇದದ್ದಕ್ಕಿದ್ದಂತೆ ದೊಡ್ಡ ಉದ್ಯಮವಾಗಿ ಬೆಳೆಯಿತು. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಲಾಭವನ್ನೂ ಕೂಡ ಕಂಡಿತು.
ಈಗ ಈ ಜೆಡಿ.ಕಾಮ್ 49.5 ಬಿಲಿಯನ್ ಯುವಾನ್ ಮೌಲ್ಯ ಹೊಂದಿದೆ. ಅಂದರೆ ಸುಮಾರು 6.8 ಬಿಲಿಯನ್ ಡಾಲರ್ ಉದ್ಯಮ ಆಗಿದೆ. ಅವರು 2016ರಿಂದಲೂ ಪ್ರತಿ ವರ್ಷ ತಮ್ಮ ಹುಟ್ಟೂರಿಗೆ ಆಗಮಿಸುತ್ತಿದ್ದರು. ಮೊದಲ ಬಾರಿಗೆ 2016ರಲ್ಲಿ ತನ್ನ ಪತ್ನಿಯೊಂದಿಗೆ ಹುಟ್ಟೂರಿಗೆ ಅವರು ಬಂದರು. ಬಳಿಕ ಪ್ರತಿ ವರ್ಷ ಬರಯತ್ತಲೇ ಬರುತ್ತಿದ್ದರು. ಇನ್ನು ಅವರು ಬರುತ್ತಿರುವ ಸುದ್ದಿ ತಿಳಿದ ತಕ್ಷಣ ಇಡೀ ಗ್ರಾಮವೇ ಹಬ್ಬದಂತೆ ಆಚರಿಸುತ್ತದೆ. ಅಲ್ಲದೆ, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳುತ್ತಾರೆ. ಈ ವೇಳೆ ರಿಚರ್ಡ್ ಲಿಯು ಅವರು ಹಲವು ವಸ್ತುಗಳ ತುಂಬಿರುವ ಟ್ರಕ್‌ಗಳ ಜೊತೆ ಗ್ರಾಮದೊಳಗೆ ಎಂಟ್ರಿ ಕೊಡುತ್ತಾರೆ.
ಸದ್ಯ ಈಗ ಅವರಿಗೆ 50 ವರ್ಷದ ಆಗಿದೆ. ತನಗೆ ಬಂದ ಕಷ್ಟ ಇನ್ಯಾರಿಗೂ ಬರಬಾರದೆಂದು ತಮ್ಮ ಊರಿನಲ್ಲಿದ್ದ ಶಾಲೆಗಳನ್ನು ಮೇಲ್ದರ್ಜೆಗೇರಸಿದ್ದಾರಂತೆ. ಅಲ್ಲದೆ, ಹಳ್ಳಿಗೆ ಬೇಕಿದ್ದ ಎಲ್ಲಾ ಸೌಲಭ್ಯಗಳನ್ನ ಕೊಟ್ಟಿದ್ದಾರೆ. ಇದರಿಂದ ಪ್ರತಿ ಕುಟುಂಬ ಈಗ ಅವರನ್ನು ನೆನೆಯುತ್ತಿದೆ. ಅವರು ಕೂಡ ಕಷ್ಟದಲ್ಲಿ ಸಹಾಯ ಮಾಡಿದ್ದ ಗ್ರಾಮಸ್ಥರ ಮರೆಯದೆ ಅವರ ಜೀವನವನ್ನೂ ಉತ್ತಮವಾಗಿಸಿದ್ದಾರೆ.
ಒಟ್ಟಿನಲ್ಲಿ ಕಷ್ಟಕಾದವರನ್ನು ಕೈಬಿಡದೇ ದೊಡ್ಡ ಮಟ್ಟಕ್ಕೆ ಬೆಳೆದ ಮೇಲೆ ಅವರನ್ನು ನೋಡಿಕೊಳ್ಳುವ ಸಂಖ್ಯೆ ತುಂಬಾ ಕಡಿಮೆ. ಹಾಗೆಯೇ ಬಿಲಿಯನೇರ್ ರಿಚರ್ಡ್ ಲಿಯು ಕಿಯಾಂಗ್‌ಡಾಂಗ್ ಕೂಡ ತಮಗೆ ನೆರವಾದ ಗ್ರಾಮದವರನ್ನು ಕೈಬಿಡದೇ ಅವರಿಗೆ ಅಹಾಯ ಮಾಡುತ್ತಲೇ ಬಂದಿದ್ದಾರೆ. ಈ ಮೂಲಕ ದೊಡ್ಡವರು ಹೇಳಿದಂತೆ ಕಷ್ಟಕ್ಕಾದವನೆ ಆಪತ್ಬಾಂದವ ಎನ್ನುವ ಮಾತನ್ನು ಪಾಲಿಸುವವರ ಸಾಲಿಗೆ ಇವರು ಕೂಡ ಸೇರಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications