ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿದೆ ಪುರಾವೆ?: ವಾಟ್ಸಾಪ್ ಸಂಖ್ಯೆಗಳ ದತ್ತಾಂಶ ಸೋರಿಕೆ ನಿರಾಕರಿಸಿದ ಕಂಪನಿ

|
Google Oneindia Kannada News

ನವದೆಹಲಿ, ನವೆಂಬರ್ 28: ಭಾರತದಲ್ಲಿ 50 ಕೋಟಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಸೈಬರ್‌ನ್ಯೂಸ್ ವರದಿ ಮಾಡಿದ ಕೆಲವೇ ದಿನಗಳಲ್ಲಿ ಇದನ್ನು ಕಂಪನಿಯು ನಿರಾಕರಿಸಿದೆ.

ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಸೋಮವಾರ ಈ ವರದಿಯನ್ನು ನಿರಾಕರಿಸಿದೆ. "ಸ್ಕ್ರೀನ್‌ಶಾಟ್‌ಗಳನ್ನು ಆಧರಿಸಿ ಸೈಬರ್‌ನ್ಯೂಸ್‌ನಲ್ಲಿ ಬರೆಯಲಾದ ಸುದ್ದಿಯು ಆಧಾರರಹಿತವಾಗಿದೆ. ವಾಟ್ಸಾಪ್‌ನಿಂದ ಡೇಟಾ ಸೋರಿಕೆಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ," ಎಂದು ಕಂಪನಿ ಹೇಳಿದೆ.

ವಾಟ್ಸಾಪ್‌ನಲ್ಲಿ ಇನ್ನು ಮುಂದೆ ನಿಮಗೆ ನೀವೇ ಮೆಸೇಜ್ ಮಾಡುವುದು ಹೇಗೆ?ವಾಟ್ಸಾಪ್‌ನಲ್ಲಿ ಇನ್ನು ಮುಂದೆ ನಿಮಗೆ ನೀವೇ ಮೆಸೇಜ್ ಮಾಡುವುದು ಹೇಗೆ?

48.7 ಕೋಟಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳ 2022 ಡೇಟಾಬೇಸ್ ಅನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಘೋಷಿಸುವುದಕ್ಕೆ ಸಂಬಂದಿಸಿದಂತೆ ಬೆದರಿಸುವ ಹ್ಯಾಕಿಂಗ್ ಸಮುದಾಯದ ಜಾಹೀರಾತನ್ನು ನಟರೊಬ್ಬರು ಪೋಸ್ಟ್ ಮಾಡಿದ್ದರು.

There is no evidence; WhatsApp Company Deny Report Claiming Sale Of 50 Crore Users Data Leak

ಸೈಬರ್‌ನ್ಯೂಸ್ ವರದಿಯಲ್ಲಿ ಏನಿದೆ?:

* ಈ ಕಂಪನಿಯ ಡೇಟಾಬೇಸ್ 84 ವಿವಿಧ ದೇಶಗಳ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಒಳಗೊಂಡಿದೆ.

* ಈ ರಾಷ್ಟ್ರಗಳ ಪಟ್ಟಿಯಲ್ಲಿ ಇಟಲಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ಸೇರಿವೆ.

* ಡೇಟಾ ಸೆಟ್ 32 ಮಿಲಿಯನ್ ಯುಎಸ್ ಬಳಕೆದಾರರ ದಾಖಲೆಗಳು, ಇಟಲಿಯಿಂದ 35 ಮಿಲಿಯನ್ ದಾಖಲೆಗಳು, 11 ಮಿಲಿಯನ್ ಬ್ರಿಟಿಷ್ ಬಳಕೆದಾರರ ದಾಖಲೆಗಳು ಇವೆ

* ರಷ್ಯಾದ ಸುಮಾರು 10 ಮಿಲಿಯನ್ ಬಳಕೆದಾರರ ದಾಖಲೆಗಳನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.

* ವಾಟ್ಸಾಪ್‌ನಲ್ಲಿ ಡೇಟಾ ಹ್ಯಾಕ್ ಅಥವಾ ಸೋರಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ ಎಂದು ಸೈಬರ್‌ನ್ಯೂಸ್ ಸುದ್ದಿಗೆ ಸ್ಪಷ್ಟೀಕರಣವನ್ನು ನೀಡಿದೆ. ಈ ಪ್ರಕಟಣೆಯ ಮುಖ್ಯ ಸಂಪಾದಕರಾದ ಜುರ್ಗಿಟಾ ಲ್ಯಾಪಿಯೆನಿಟ್ ಅವರು ಟ್ವೀಟ್ ಮಾಡಿದ್ದಾರೆ, "ವಾಟ್ಸಾಪ್ ಅನ್ನು ಹ್ಯಾಕ್ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೋರಿಕೆಯು ಸ್ಕ್ರ್ಯಾಪ್ ಆಗಿರಬಹುದು, ಆದರೆ ಪೀಡಿತ ಬಳಕೆದಾರರಿಗೆ ಇದು ಕಡಿಮೆ ಅಪಾಯಕಾರಿ ಎಂದು ಅರ್ಥವಲ್ಲ," ಎಂದು ಉಲ್ಲೇಖಿಸಿದ್ದಾರೆ.

English summary
There is no evidence; WhatsApp Company Deny Report Claiming Sale Of 50 Crore Users Data Leak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X