• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!

|

ಚೀನಾದಲ್ಲಿ ಮೊದಲು ಕಾಣಿಸಿಕೊಂಡು ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಜಗತ್ತು ಹೆಣಗಾಡುತ್ತಿದೆ. ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ 4 ಸಾವಿರ ಗಡಿ ದಾಟಿದೆ.

   There is a hope for a potential Universal Flu Vaccine in next five years | WHO | Vaccine

   ಕಳೆದ ವರ್ಷದ ಡಿಸೆಂಬರ್ ತಿಂಗಳ ಕೊನೆಯ ವಾರದಿಂದ ಯಮಸ್ವರೂಪಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಇಲ್ಲಿಯವರೆಗೂ ನಿರ್ದಿಷ್ಟ ಔಷಧಿ ಕಂಡು ಹಿಡಿದಿಲ್ಲ. ಆದರೂ Anti-biotics ಮೂಲಕ 60 ಸಾವಿರಕ್ಕೂ ಹೆಚ್ಚು ಮಂದಿಯನ್ನ ಕೊರೊನಾ ವೈರಸ್ ಸೋಂಕಿನಿಂದ ಗುಣಪಡಿಸಲಾಗಿದೆ.

   SARS, MERS ಮಹಾಮಾರಿಗಳಿಗೆ ಬಗ್ಗದ ಭಾರತ ಕೊರೊನಾ ಗುಮ್ಮನಿಗೆ ಜಗ್ಗಿತೇ?

   ಈ ನಡುವೆ ವಿಜ್ಞಾನ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಮಹತ್ವದ ಪ್ರಯೋಗವೊಂದು ಮಹತ್ತರ ಹೆಜ್ಜೆಯೊಂದನ್ನು ದಾಖಲಿಸಿದೆ. ಸಕಲ ಜ್ವರಗಳನ್ನು ಸುರಕ್ಷಾ ಕವಚದಂತೆ ತಡೆಗಟ್ಟುವ ಪ್ರಬಲ ಶಕ್ತಿ ಹೊಂದಿರುವ ಒಂದೇ ಒಂದು ಲಸಿಕೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

   ಎಲ್ಲಾ ಜ್ವರಗಳಿಗೂ ಒಂದೇ ರಾಮಬಾಣ

   ಎಲ್ಲಾ ಜ್ವರಗಳಿಗೂ ಒಂದೇ ರಾಮಬಾಣ

   ಯಾವುದೇ ವೈರಾಣುವಿನಂತ ಸೂಕ್ಷ್ಮಾಣು ಜೀವಿಗಳಿಂದ ಬರುವ ಎಲ್ಲಾ ರೋಗಗಳಿಂದ ರಕ್ಷಣೆ ಮಾಡಲು ಇಂತಹದೊಂದು ಲಸಿಕೆ ಸಾಕು ಎಂಬುದನ್ನು ವಿಜ್ಞಾನಿಗಳು ಹಲವು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಯೂನಿವರ್ಸಲ್ ಫ್ಲೂ ಶಾಟ್ ಅನ್ನು ಜಗತ್ತಿನಲ್ಲಿ ಬದುಕುವ ಪ್ರತಿಯೊಬ್ಬರಿಗೂ ನೀಡುವ ನಿಟ್ಟಿನಲ್ಲಿ ಪ್ರಯೋಗ ಜಾರಿಯಲ್ಲಿದೆ. ಅದರಲ್ಲೂ ಕೊರೊನಾದಂತಹ ಸಾಂಕ್ರಾಮಿಕ ರೋಗ ಹಬ್ಬಿರುವ ಈ ದಿನಗಳಲ್ಲಿ ಇಂತಹದೊಂದು ಲಸಿಕೆಯ ಸುತ್ತ ಸಹಜವಾಗಿಯೇ ನಿರೀಕ್ಷೆಗಳು ಹುಟ್ಟಿಕೊಂಡಿವೆ.

   FLU-v ಲಸಿಕೆ

   FLU-v ಲಸಿಕೆ

   ಹಕ್ಕಿ ಜ್ವರ, ಬಾವಲಿ ಜ್ವರ, ಹಂದಿ ಜ್ವರ, ಸಾರ್ಸ್, ಕೊರೊನಾ.. ಹೀಗೆ ಯಾವುದೇ ಮಾರಣಾಂತಿಕ ಜ್ವರದಿಂದ ಒಂದೇ ಶಾಟ್ ನಲ್ಲಿ ದೀರ್ಘಕಾಲೀನ ರಕ್ಷಣೆ ಪಡೆಯಲು ಸಾರ್ವತ್ರಿಕ ಜ್ವರ ಲಸಿಕೆ ರಾಮಬಾಣವಾಗಲಿದೆ. 'FLU-v' ಎಂದು ಕರೆಯಿಸಿಕೊಳ್ಳುತ್ತಿರುವ ಈ ಲಸಿಕೆ ಈಗಾಗಲೇ ಎರಡು ಹಂತಗಳ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದ್ದು, ಸುರಕ್ಷತಾ ದೃಷ್ಟಿಯಿಂದ ಮುಂದಿನ ಹಂತಗಳ ಫಲಿತಾಂಶಕ್ಕಾಗಿ ವಿಜ್ಞಾನಿಗಳು ಕಾಯುತ್ತಿದ್ದಾರೆ.

   'ನಮಸ್ತೆ' ಹೇಳಿ.. ಡೆಡ್ಲಿ ಕೊರೊನಾ ವೈರಸ್ ನ ದೂರ ತಳ್ಳಿ!

   ಐದು ವರ್ಷಗಳಲ್ಲಿ ಲಭ್ಯ

   ಐದು ವರ್ಷಗಳಲ್ಲಿ ಲಭ್ಯ

   ಎಲ್ಲಾ ರೀತಿಯ ಜ್ವರಗಳಿಗೂ ಒಂದೇ ಲಸಿಕೆ ನೀಡುವ ಕುರಿತು ದಶಕಗಳಿಂದ ಸಂಶೋಧನೆ ನಡೆಯುತ್ತಲೇ ಇದೆ. ಈಗ ಅದಕ್ಕೆ ಉತ್ತಮ ಫಲಿತಾಂಶ ಲಭ್ಯವಾಗಿದ್ದು, ಇನ್ನೂ ಐದು ವರ್ಷಗಳಲ್ಲಿ 'ಸಾರ್ವತ್ರಿಕ ಜ್ವರ ಲಸಿಕೆ' ಅರ್ಥಾತ್ 'FLU-v' ನ ನಿರೀಕ್ಷಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

   ಯಶಸ್ವಿಯಾಗದ ಸೂಪರ್ Anti-body

   ಯಶಸ್ವಿಯಾಗದ ಸೂಪರ್ Anti-body

   ಈ ಹಿಂದೆ 'ಸೂಪರ್ Anti-body'ಗಾಗಿ ಸಂಶೋಧನೆ ನಡೆಸಲಾಗಿತ್ತು. ಎಲ್ಲಾ ಜ್ವರಗಳನ್ನು ಒಂದೇ ಔಷಧಿಯಿಂದ ಗುಣಪಡಿಸುವ ನಿಟ್ಟಿನಲ್ಲಿ ಸಂಶೋಧಕರು 'ಸೂಪರ್ Anti-body' ಮೇಲೆ ಫೋಕಸ್ ಮಾಡಿದ್ದರು. ಆದ್ರೆ, ಅದು ಯಶಸ್ವಿ ಆಗಲಿಲ್ಲ. ಹೀಗಾಗಿ, ಈ ಬಾರಿ ವೈರಸ್ ಮೇಲೆಯೇ ದೃಷ್ಟಿ ನೆಟ್ಟಿರುವ ಸಂಶೋಧಕರು ಲಸಿಕೆಯನ್ನು ಮಾರುಕಟ್ಟೆಗೆ ತರುವ ತಯಾರಿಯಲ್ಲಿದ್ದಾರೆ.

   ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!

   ಪರಿಣಾಮಕಾರಿಯಾಗಿರಲಿದೆ FLU-v

   ಪರಿಣಾಮಕಾರಿಯಾಗಿರಲಿದೆ FLU-v

   ಕಂಪ್ಯೂಟರ್ ಆಲ್ಗೊರಿದಮ್ ಮೂಲಕ, ಇನ್ ಫ್ಲುಯೆನ್ಝಾ ವೈರಸ್ ನಲ್ಲಿ ಮಾರ್ಪಾಡಾಗದ ಪ್ರೋಟೀನ್ ಭಾಗಗಳನ್ನು ಸಂಶೋಧಕರ ತಂಡ ಗುರುತಿಸಿದೆ. FLU-v ಲಸಿಕೆಯಲ್ಲಿ ನಾಲ್ಕು ವಿವಿಧ ಅಂಶಗಳಿದ್ದು, ವೈರಾಣುವಿನ ನಾಲ್ಕು ಭಾಗಗಳ ವಿರುದ್ಧ ಹೋರಾಡಲಿದೆ. ವೈರಾಣುವಿನ ಯಾವುದೇ ಒಂದು ಭಾಗ ಮಾರ್ಪಾಡಾದರೂ, ಉಳಿದ ಮೂರು ಭಾಗಗಳಲ್ಲಿ ಪರಿಣಾಮಕಾರಿಯಾಗಿರಲಿದೆ ಎನ್ನುತ್ತಾರೆ ವಿಜ್ಞಾನಿಗಳು.

   ತಜ್ಞರ ಮಾತು

   ತಜ್ಞರ ಮಾತು

   T-cells ಗಳನ್ನು ಸಕ್ರಿಯಗೊಳಿಸುವ ಮೂಲಕ FLU-v ಲಸಿಕೆ ಕಾರ್ಯನಿರ್ವಹಿಸುತ್ತದೆ. ಹಾಗೇ, ಸೋಂಕನ್ನು ತಡೆಗಟ್ಟುತ್ತದೆ. ವೈರಾಣುಗಳನ್ನು ತಡೆಗಟ್ಟುವಲ್ಲಿ T-cells ಪ್ರಮುಖ ಪಾತ್ರವಹಿಸಲಿದ್ದು, FLU-v ಲಸಿಕೆ ಮನುಷ್ಯರಲ್ಲಿ ಪರಿಣಾಮಕಾರಿಯಾಗಿರಲಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಗಳ ತಜ್ಞ ಅಮೇಶ್ ಅದಾಲ್ಜ ಹೇಳಿದ್ದಾರೆ. FLU-v ಲಸಿಕೆ ಸದ್ಯ ಮೂರನೇ ಹಂತದ ಪ್ರಯೋಗಕ್ಕೆ ಕಾಲಿಡಲಿದ್ದು, ಧನಸಹಾಯಕ್ಕಾಗಿ ವಿಜ್ಞಾನಿಗಳು ಕಾಯುತ್ತಿದ್ದಾರೆ.

   English summary
   There is a hope for a potential Universal Flu Vaccine in next five years.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X