ಅಮೆರಿಕಾ ಅಧ್ಯಕ್ಷ ಟ್ರಂಪ್ ಬದುಕಿನ 10 ಇಂಟರೆಸ್ಟಿಂಗ್ ಅಂಶಗಳು

Subscribe to Oneindia Kannada

ಬೆಂಗಳೂರು, ಜನವರಿ 20: ಅಮೆರಿಕಾದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು ರಾತ್ರಿ (ಭಾರತೀಯ ಕಾಲಮಾನ) ಅಧಿಕಾರ ಸ್ವೀಕರಿಸಲಿದ್ದಾರೆ. ಮಹಾನ್ ರಸಿಕ, ರಿಯಲ್ ಎಸ್ಟೇಟ್ ಡಾನ್, ಮೂವರು ಹೆಂಡಿರ ಮುದ್ದಿನ ಗಂಡ, ಕಿರುತೆರೆಯ ಸ್ಟಾರ್.. ಹೀಗೆ ಡೊನಾಲ್ಡ್ ಟ್ರಂಪ್ ಬದುಕಿನ ಆಸಕ್ತಿಕರ ವಿಷಯಗಳು ನೂರಾರು.[WWE ದಿಗ್ಗಜ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್]

2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಪ್ರಥಮ ಮಹಿಳೆ ಮತ್ತು ಪ್ರಭಾವಿ ರಾಜಕಾರಣಿ ಹಿಲರಿ ಕ್ಲಿಂಟನ್ ಮುಂದೆ ಟ್ರಂಪ್ ಗೆದ್ದಿದ್ದು ಸಾಮಾನ್ಯ ಸಂಗತಿಯಲ್ಲ. ಸಮೀಕ್ಷೆಗಳೆಲ್ಲಾ ಟ್ರಂಪ್ ಸೋಲಲಿವೆ ಎಂದೇ ಹೇಳುತ್ತಿದ್ದರೆ, ಅವರು ಮಾತ್ರ ನೇರವಾಗಿ ಶ್ವೇತಭವನಕ್ಕೆ ದಾಗುಂಡಿ ಇಟ್ಟೇ ಬಿಟ್ಟರು. ಅವರ ಗೆಲುವಿನ ಹಿಂದೆ ರಷ್ಯಾ ಕೈವಾಡವು ಇತ್ತೆನ್ನಿ. ಟ್ರಂಪ್ ಬದುಕಿನ ಕೆಲವು ಆಸಕ್ತಿಕರ ವಿಚಾರಗಳು ಇಲ್ಲಿವೆ.[ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಿಚಿತ್ರ]

ರಿಯಲ್ ಎಸ್ಟೇಟ್ ಉದ್ಯಮಿಯ ಮಗ

ರಿಯಲ್ ಎಸ್ಟೇಟ್ ಉದ್ಯಮಿಯ ಮಗ

ಡೊನಾಲ್ಡ್ ಟ್ರಂಪ್ ಹುಟ್ಟಿದ್ದು 1947ರಲ್ಲಿ. ಡೊನಾಲ್ಡ್ ತಂದೆ ಫ್ರೆಡ್ರಿಕ್ ಟ್ರಂಪ್ ಬಿಲ್ಡರ್. ಮಧ್ಯಮ ವರ್ಗಕ್ಕೆ ಬೇಕಾದ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸುವ ಜನಪ್ರಿಯ ರಿಯಲ್ ಎಸ್ಟೇಟ್ ಉದ್ಯಮಿ.

ತಂದೆಗೆ ತಕ್ಕ ಮಗ

ತಂದೆಗೆ ತಕ್ಕ ಮಗ

ಟ್ರಂಪ್‍ 13ನೇ ವಯಸ್ಸಿಗೇ ನ್ಯೂಯಾರ್ಕ್ ಮಿಲಿಟರಿ ಶಾಲೆ ಸೇರಿದರು. ಟ್ರಂಪ್ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದ ಹುಡುಗ. ಬೆಳೆದು ದೊಡ್ಡವನಾದ ಟ್ರಂಪ್ ತಮ್ಮ ತಂದೆಯ ಉದ್ಯಮದಲ್ಲೇ ತೊಡಗಿಸಿಕೊಂಡ್ರು.

ರಿಯಲ್ ಎಸ್ಟೇಟ್ ಡಾನ್

ರಿಯಲ್ ಎಸ್ಟೇಟ್ ಡಾನ್

ಮ್ಯಾನ್‍ಹಟ್ಟನ್‍ನಲ್ಲಿ ಲಾಭದಾಯಕ ಬಿಲ್ಡಿಂಗ್ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಯೋಜನೆಗಳನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಮುಗಿಸಿದ್ರು. ಅಧಿಕಾರ ಕೇಂದ್ರದ ಸುತ್ತ ಸುತ್ತಾಡುವ ಪ್ರಭಾವಿ ವ್ಯಕ್ತಿಗಳ ಗೆಳೆತನ ಬೆಳೆಸಿಕೊಂಡು. ಟ್ರಂಪ್ ಹೆಚ್ಚಿನ ಲಾಭ ಗಳಿಸಲು ಆರಂಭಿಸಿದರು.

ಗಗನಚುಂಬಿ ಕಟ್ಟಡಗಳ ಸರದಾರ

ಗಗನಚುಂಬಿ ಕಟ್ಟಡಗಳ ಸರದಾರ

ತಮ್ಮ ಕಂಪೆನಿಯ ಹೆಸರನ್ನು 1971ರಲ್ಲಿ ಟ್ರಂಪ್ ಆರ್ಗನೈಜೇಷನ್ ಎಂದು ಬದಲಾಯಿಸಿದರು. 1980ರಲ್ಲಿ 'ಡೊನಾಲ್ಡ್ ಟ್ರಂಪ್', 'ಗ್ರಾಂಡ್ ಹೈಟ್' ಬಿಲ್ಡಿಂಗ್ ಗಳನ್ನು ನಿರ್ಮಾಣ ಮಾಡಿ ಮ್ಯಾನ್‍ಹಟ್ಟನ್ ನಗರದ ಜನಪ್ರಿಯ ಬಿಲ್ಡರ್ ಆದ್ರು. 1982ರಲ್ಲಿ ಟ್ರಂಪ್ ಟವರ್ ನಿರ್ಮಾಣವಾಯ್ತು. ಟ್ರಂಪ್‍ರನ್ನು ರಾಷ್ಟ್ರಮಟ್ಟದಲ್ಲಿ ಜನಪ್ರಿಯವಾದರು.

ಶ್ರೀಮಂತ ಟ್ರಂಪ್

ಶ್ರೀಮಂತ ಟ್ರಂಪ್

2016ರಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿದ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 324ನೇ ಸ್ಥಾನ ಪಡೆದಿದ್ದರು ಡೊನಾಲ್ಡ್ ಟ್ರಂಪ್. ಅಮೆರಿಕದ ಧನಿಕರ ಪಟ್ಟಿಯಲ್ಲಿ 156ನೇ ಸ್ಥಾನ ಅಲಂಕರಿಸಿರುವ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗುತ್ತಿರುವ ಻ಅತ್ಯಂತ ಶ್ರೀಮಂತರಾಗಿದ್ದಾರೆ.

ಮೂವರು ಹೆಂಡಿರ ಮುದ್ದಿನ ಗಂಡ

ಮೂವರು ಹೆಂಡಿರ ಮುದ್ದಿನ ಗಂಡ

ನ್ಯೂಯಾರ್ಕ್‍ನ ಜನಪ್ರಿಯ ಮಾಡೆಲ್ ಇವಾನಾ ವಿಂಕಲ್‍ಮೈರ್‍ ಟ್ರಂಪ್ ಮೊದಲ ಹೆಂಡತಿ. ಈ ದಂಪತಿಗಳಿಗೆ ಮೂರು ಮಕ್ಕಳಿವೆ. 1991ರಲ್ಲಿ ಇವಾನಗೆ ಟ್ರಂಪ್ ವಿಚ್ಚೇದನ ನೀಡಿದರು. ಮುಂದೆ ನಟಿ ಮಾರ್ಲಾ ಮ್ಯಾಪಲ್‍ರನ್ನು ವರಿಸಿದರಾದರೂ ಆ ದಾಂಪತ್ಯವೂ 1993ರಲ್ಲಿ ಮುರಿದು ಬಿತ್ತು. ಇದಾದ ಬಳಿಕ ಟ್ರಂಪ್ ರಿಂಗ್ ಬದಲಾಯಿಸದ್ದು ಸೂಪರ್ ಮಾಡೆಲ್ ಮೆಲಾನಿಯಾ ಕ್ಲೌಸ್ ಜೊತೆ. ಇದು ಅವರ ಪಾಲಿನ ಮೂರನೇ ಮದುವೆ.

ತತ್ತರಿಸಿ ಹೋಗಿತ್ತು ಟ್ರಂಪ್ ಸಾಮ್ರಾಜ್ಯ

ತತ್ತರಿಸಿ ಹೋಗಿತ್ತು ಟ್ರಂಪ್ ಸಾಮ್ರಾಜ್ಯ

1990ರಲ್ಲಿ ಅಮೆರಿಕಾದಲ್ಲಿ ಆರ್ಥಿಕ ಕುಸಿತ ಆರಂಭವಾದಾಗ ಡೊನಾಲ್ಡ್ ಟ್ರಂಪ್‍ ತಮ್ಮ ಮುಕ್ಕಾಲು ಪಾಲು ಆಸ್ತಿ ಕಳೆದುಕೊಂಡರು. ಬ್ಯಾಂಕ್‍ಗಳ ಸಾಲ ಕಟ್ಟಲಾಗದೆ ಹಲವು ಬಿಲ್ಡಿಂಗ್‍ಗಳನ್ನು ಅವತ್ತು ಟ್ರಂಪ್ ಕಳೆದುಕೊಳ್ಳಬೇಕಾಯಿತು.

ಟಿವಿ ಸ್ಟಾರ್

ಟಿವಿ ಸ್ಟಾರ್

2004ನೇ ಇಸವಿಯಲ್ಲಿ ಎನ್‍ಬಿಸಿಯ ದಿ ಅಪ್ರೆಂಟೈಸ್ ಶೋದಲ್ಲಿ ಟ್ರಂಪ್ ಸೆಲೆಬ್ರಿಟಿಯಾಗಿ ಭಾಗವಹಿಸಿದರು. ಈ ಶೋ ಮೂಲಕ ಟ್ರಂಪ್ ಅಮೆರಿಕಾದಲ್ಲಿ ಮನೆಮಾತಾದರು.

ದೇಶವಾಳುವ ಕನಸು

ದೇಶವಾಳುವ ಕನಸು

2000ರಲ್ಲೇ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗುವ ಪ್ರಯತ್ನ ನಡೆಸಿದ್ದರು. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲೇ ಟ್ರಂಪ್ ಹೀನಾಯವಾಗಿ ಸೋಲಬೇಕಾಯಿತು.

ಅಧ್ಯಕ್ಷ ಟ್ರಂಪ್

ಅಧ್ಯಕ್ಷ ಟ್ರಂಪ್

ಟ್ರಂಪ್ ಮತ್ತೆ ಪ್ರೆಸಿಡೆಂಟ್ ರೇಸಿನಲ್ಲಿ ಕಾಣಿಸಿಕೊಂಡಿದ್ದು 2012ರಲ್ಲಿ. ತಾವೂ ಮುಂದಿನ ಅಧ್ಯಕ್ಷೀಯ ಚುಣಾವಣೆಯ ರೇಸ್‍ನಲ್ಲಿರುವುದಾಗಿ ಪ್ರಕಟಿಸಿದರು. ಅಮೆರಿಕಾ ದೇಶದೊಳಗೆ ಮುಸ್ಲಿಮರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಮೆಕ್ಸಿಕೋ ವಲಸೆ ತಡೆಯಲು ತಾನು ಅಮೆರಿಕಾ ಮೆಕ್ಸಿಕೋ ನಡುವೆ ಗೋಡೆ ಕಟ್ಟುತ್ತೇನೆ, ಚೀನಾ ಒಂದು ದರೋಡೆಕೋರ ರಾಷ್ಟ್ರ ಎಂದೆಲ್ಲಾ ಹೇಳಿ ಮತದಾರರ ಬೆಂಬಲ ಗಿಟ್ಟಿಸಿದರು. ಪ್ ನೋಟ ನೋಡುತ್ತಲೇ ಎಲ್ಲಾ ಲೆಕ್ಕಾಚಾರ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಶ್ವೇತ ಭವನ ಪ್ರವೇಶಿಸಿಯೇ ಬಿಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
10 important facts about America’s 45th president Donald Trump. His personnel, business and political life story is here.
Please Wait while comments are loading...