ಮೊಟ್ಟ ಮೊದಲ ಕಿಡ್ನಿ ಕಸಿ ಮಾಡಿ ಇಂದಿಗೆ 51 ವರ್ಷ

ಬೆಂಗಳೂರು, ಡಿಸೆಂಬರ್, 23: ಡಿಸೆಂಬರ್ 23 ವೈದ್ಯಕೀಯ ಲೋಕದಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ದಿನ. 1954ರ ಇದೇ ದಿನ ಪ್ರಪ್ರಥಮ ಯಶಸ್ವಿ ಕಿಡ್ನಿ ಕಸಿ ಕಾರ್ಯವನ್ನು ಮಾಡಲಾಗಿತ್ತು. ಅಲ್ಲದೇ ಅವಳಿಗಳ ನಡುವೆ ಕಿಡ್ನಿ ಕಸಿ ಮಾಡಲಾಗಿತ್ತು.

ಬೋಸ್ಟನ್ ನ ಮಾಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಲೋಕದ ಅಚ್ಚರಿ ನಡೆದಿತ್ತು. ರಿಚರ್ಡ್ ಹೆರಿಕ್ ಎಂಬ 23 ವರ್ಷದ ಯುವಕ ತನ್ನ ಅವಳಿ ರೋನಾಲ್ಡ್ ನಿಂದ ಕಿಡ್ನಿ ದಾನ ಪಡೆದಿದ್ದ.[ಅಣ್ಣನಿಗೆ ಕಿಡ್ನಿ ದಾನ ಮಾಡಿದ ತಮ್ಮ ಅನಿಲ್ - ಸಂದರ್ಶನ]

medical

ಕಸಿ ಮಾಡಿದ ವೈದ್ಯರು:
ನೋಬೇಲ್ ಪುರಸ್ಕೃತ ಡಾ. ಜಾನ್ ಪಿ. ಮೆರಿಲ್ ಯಶಸ್ವಿಯಾಗಿ ಕಿಡ್ನಿ ಜೋಡಣೆ ಕಾರ್ಯ ಮಾಡಿದ್ದರು. ಈ ಹಿಂದೆ 9 ಸಾರಿ ಇಂಥದ್ದೇ ಪ್ರಯತ್ನ ಮಾಡಿ ವಿಫಲವಾಗಿದ್ದರು. ಕಸಿ ಮಾಡಿದವರ ದೇಹ ಕಿಡ್ನಿಯನ್ನು ತಿರಸ್ಕರಿಸುತ್ತಿದ್ದುದ್ದೇ ಎಡವಟ್ಟಾಗಲು ಕಾರಣ ಎಂಬುದನ್ನು ಕಂಡುಕೊಂಡಿದ್ದರು.[ಹಿಂದೂ ಕಿಡ್ನಿ ಮುಸ್ಲಿಂಗೆ, ಮುಸ್ಲಿಂ ಕಿಡ್ನಿ ಹಿಂದೂಗೆ!]

ಆದರೆ ಅವಳಿಗಳೇ ಈ ಪ್ರಯೋಗಕ್ಕೆ ಸಿಕ್ಕಿದ್ದು ವೈದ್ಯಕೀಯ ಲೋಕದಲ್ಲಿ ಹೊಸ ಸಾಧನೆ ಮಾಡಲು ಕಾರಣವಾಯಿತು. ಮೊದಲು ಚರ್ಮವನ್ನು ಕಸಿ ಮಾಡಿ ಒಂದು ನಿರ್ಧಾರಕ್ಕೆ ಬಂದ ನಂತರ ಕಿಡ್ನಿ ಕಸಿ ಮಾಡಲಾಯಿತು. ಕಿಡ್ನಿ ಪಡೆದ ರಿಚರ್ಡ್ 1962 ರವೆಗೂ ಬದುಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+