ಭಾನುವಾರವೂ ತೆರೆದ ದುಬೈ ಕೋರ್ಟ್: ಪ್ರಕರಣವೇನು?

ದುಬೈ, ಮಾರ್ಚ್ 16: ದುಬೈನಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾರತೀಯನೊಬ್ಬ ತನ್ನ ಪ್ರೇಯಸಿಯನ್ನು ಕೊಂದು, ತನ್ನ ಜೊತೆಯಲ್ಲೇ ಕೂರಿಸಿಕೊಂಡು 45 ನಿಮಿಷ ಕಾರು ಚಲಾಯಿಸಿದ ಘಟನೆ ನಡೆದಿದೆ.

ಅಷ್ಟೇ ಅಲ್ಲದೆ ಊಟವನ್ನು ಕೊಳ್ಳಲು ಕಾರನ್ನು ನಿಲ್ಲಿಸಿದ್ದ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೊದಲ ಬಾರಿಗೆ ದುಬೈನಲ್ಲಿ ಈ ಪ್ರಕರಣದ ತ್ವರಿತ ವಿಚಾರಣೆಗಾಗಿ ನ್ಯಾಯಾಲಯವನ್ನು ತೆರೆಯಲಾಗಿತ್ತು.

ಆತನ ಪ್ರೇಯಸಿ ಕೂಡ ಭಾರತದವಳಾಗಿದ್ದಾಳೆ. ಆಕೆಯ ಜೊತೆ ಆತ ಸಂಬಂಧವನ್ನು ಹೊಂದಿದ್ದ. ಆಕೆಯ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಆತ ಪೊಲೀಸರೆದುರು ಒಪ್ಪಿಕೊಂಡಿದ್ದಾನೆ.

The Dubai Court Of First Instance Heard On Sunday

ಈ ಘಟನೆ ನಡೆದಿದ್ದು ಜುಲೈನಲ್ಲಿ.'' ಆತ ಪೊಲೀಸ್ ಸ್ಟೇಷನ್‌ಗೆ ಬಂದಾಗ ಆತನ ಬಟ್ಟೆಯ ಮೇಲಿನ ರಕ್ತವನ್ನು ನೋಡಿ ಆಶ್ಚರ್ಯವಾಗಿತ್ತು'' ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪೊಲೀಸ್ ಠಾಣೆಗೆ ಬಂದಿದ್ದೇ ತಡ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದೇನೆ ರಕ್ತಸಿಕ್ತವಾದ ಚಾಕು ನನ್ನ ಸೀಟಿನ ಹಿಂಬದಿ ಇದೆ ಎಂದು ಹೇಳಿದ್ದ. ಸುಮಾರು 5 ವರ್ಷಗಳಿಂದ ಆಕೆಯ ಜೊತೆ ಸಂಬಂಧ ಹೊಂದಿದ್ದ ಆದರೆ ಆಕೆಗ ಬೇರೊಬ್ಬನ ಜೊತೆ ಸಂಪರ್ಕವಿತ್ತು ಆತನ ಜೊತೆ ಮಾತನಾಡುತ್ತಿದ್ದಳು ಅದಕ್ಕಾಗಿ ಕೊಲೆ ಮಾಡಿದೆ ಎಂದು ಹೇಳಿದ್ದಾನೆ.

ತಾನು ಮಾಡಿದ್ದು ತಪ್ಪು ಎಂದು ಆಕೆ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಮಾಲ್ ಒಂದರ ಕಾರು ಪಾರ್ಕಿಂಗ್ ನಲ್ಲಿ ಇಬ್ಬರ ನಡುವೆ ಜಗಳ ನಡೆದು ಕೋಪದಲ್ಲಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದ.

ಬಳಿಕ ಹತ್ತಿರದ ರೆಸ್ಟೋರೆಂಟ್ ಒಂದಕ್ಕೆ ತೆರಳಿ ಊಟ ಹಾಗೂ ನೀರಿನ ಬಾಟಲಿಯನ್ನು ಆರ್ಡರ್ ಮಾಡಿದ್ದ. ಸುಮಾರು 45 ನಿಮಿಷ ದೂರ ಆಕೆಯನ್ನು ಪಕ್ಕದ ಸೀಟಿನಲ್ಲೇ ಕುಳ್ಳಿರಿಸಿ ಕಾರ ಚಲಾಯಿಸಿದ್ದ. ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+