ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೊಮಾಲಿಯಾದ ಹತಾಯ್ ಹೋಟೆಲ್‌ ಮೇಲೆ ಉಗ್ರರ ಬಾಂಬ್ ದಾಳಿ: 8 ಸಾವು

|
Google Oneindia Kannada News

ಸೊಮಾಲಿಯಾ ಆಗಸ್ಟ್ 20: ಸೊಮಾಲಿಯಾದ ರಾಜಧಾನಿ ಮೊಗಾದಿಶುದಲ್ಲಿನ ಹೋಟೆಲ್‌ಗೆ ಶುಕ್ರವಾರ ನುಗ್ಗಿದ ಭಯೋತ್ಪಾದಕ ಗುಂಪು ನಿರಂತರ ಗುಂಡಿನ ದಾಳಿ ನಡೆಸಿದೆ. ಸೊಮಾಲಿಯಾದ ಹತಾಯ್ ಎಂಬ ಹೋಟೆಲ್‌ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು ದಾಳಿಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಎರಡು ಕಾರ್ ಬಾಂಬ್ ಸ್ಫೋಟಗಳು ಮತ್ತು ಗುಂಡಿನ ದಾಳಿಯ ಹೊಣೆಗಾರಿಕೆಯನ್ನು ಆಲ್‌ಖೈದಾ ಜೊತೆಗೆ ಲಿಂಕ್ ಹೊಂದಿರುವ ಅಲ್-ಶಬಾಬ್ ಉಗ್ರರ ಸಂಘಟನೆ ಹೊತ್ತುಕೊಂಡಿದೆ.

ಮುಂಬೈನ ತಾಜ್‌ ಹೋಟೆಲ್‌ನಂತಯೇ ಈ ದಾಳಿಯನ್ನು ಮಾಡಲಾಗಿದೆ. ಇಂದು ಮುಂಜಾನೆ ಗಾಯಗೊಂಡ ಒಂಬತ್ತು ಜನರನ್ನು ಹೋಟೆಲ್‌ನಿಂದ ಹೊರತರಲಾಗಿದೆ ಎಂದು ಮೊಗಾದಿಶು ಆಮಿನ್ ಆಂಬ್ಯುಲೆನ್ಸ್ ಸೇವೆಗಳ ನಿರ್ದೇಶಕ ಮತ್ತು ಸಂಸ್ಥಾಪಕ ಅಬ್ದಿಕಾದಿರ್ ಅಬ್ದಿರಹ್ಮಾನ್ ತಿಳಿಸಿದ್ದಾರೆ.

ಎರಡು ಕಾರ್ ಬಾಂಬ್‌ಗಳ ಮೈಲಕ ಹೋಟೆಲ್ ಹಯಾತ್ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಒಂದು ಬಾಂಬ್ ಹೋಟೆಲ್ ಬಳಿಯ ತಡೆಗೋಡೆಗೆ ಹೊಡೆದಿದೆ ಮತ್ತು ಇನ್ನೊಂದು ಬಾಂಬ್ ಹೋಟೆಲ್‌ನ ಗೇಟ್‌ಗೆ ಅಪ್ಪಳಿಸಿದೆ. ಉಗ್ರರು ಹೋಟೆಲ್‌ನೊಳಗೆ ಇದ್ದಾರೆ, ಭದ್ರತಾ ಪಡೆ ಅವರೊಂದಿಗೆ ಹೋರಾಟ ನಡೆಸಿದೆ.

ಈ ಹಿಂದೆಯೂ ದಾಳಿ ಮಾಡಿದ್ದ ಅಲ್-ಶಬಾಬ್

ಈ ಹಿಂದೆಯೂ ದಾಳಿ ಮಾಡಿದ್ದ ಅಲ್-ಶಬಾಬ್

ಅಲ್-ಶಬಾಬ್ ಅಲ್-ಖೈದಾ-ಸಂಬಂಧಿತ ಭಯೋತ್ಪಾದಕ ಗುಂಪು. ಅಲ್-ಶಬಾಬ್ 10 ವರ್ಷಗಳಿಂದ ಸೊಮಾಲಿ ಸರ್ಕಾರವನ್ನು ಉರುಳಿಸಲು ಹೋರಾಡುತ್ತಿದೆ. ಇದು ಸೊಮಾಲಿಯಾದಲ್ಲಿ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಾದ ವ್ಯಾಖ್ಯಾನದ ಆಧಾರದ ಮೇಲೆ ತನ್ನದೇ ಆದ ನಿಯಮವನ್ನು ಸ್ಥಾಪಿಸಲು ಬಯಸಿದೆ.

ಅಲ್-ಶಬಾಬ್ ಈ ಹಿಂದೆಯೂ ಇದೇ ರೀತಿಯ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಆಗಸ್ಟ್ 2020 ರಲ್ಲಿ, ಮೊಗಾದಿಶುದಲ್ಲಿನ ಮತ್ತೊಂದು ಹೋಟೆಲ್‌ನಲ್ಲಿ ದಾಳಿಯಿಂದ ಕನಿಷ್ಠ 16 ಜನರು ಸಾವನ್ನಪ್ಪಿದ್ದರು. 2011 ರಲ್ಲಿ ಆಫ್ರಿಕನ್ ಯೂನಿಯನ್ ಪಡೆಗಳಿಂದ ಅಲ್-ಶಬಾಬ್ ಹೋರಾಟಗಾರರನ್ನು ರಾಜಧಾನಿಯಿಂದ ಹೊರಹಾಕಲಾಯಿತು, ಆದರೆ, ಸಶಸ್ತ್ರ ಗುಂಪು ಇನ್ನೂ ಗ್ರಾಮಾಂತರದ ವಿಶಾಲ ಪ್ರದೇಶಗಳನ್ನು ನಿಯಂತ್ರಿಸುತ್ತಿದೆ.

ಮುಂದುವರೆದ ಭೀಕರ ಗುಂಡಿನ ಚಕಮಕಿ

ಮುಂದುವರೆದ ಭೀಕರ ಗುಂಡಿನ ಚಕಮಕಿ

ಹೋಟೆಲ್ ಹಯಾತ್‌ನ ಮುತ್ತಿಗೆಯಿಂದ ಭದ್ರತಾ ಪಡೆಗಳು ಮತ್ತು ಕಟ್ಟಡದೊಳಗೆ ಇನ್ನೂ ಅಡಗಿರುವ ಬಂದೂಕುಧಾರಿಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಭದ್ರತಾ ಅಧಿಕಾರಿ ಅಬ್ದುಕದಿರ್ ಹಸನ್ ಹೇಳಿದ್ದಾರೆ.

"ನಾವು ಇಲ್ಲಿಯವರೆಗೆ ವಿವರಗಳನ್ನು ಹೊಂದಿಲ್ಲ ಆದರೆ ಸಾವುನೋವುಗಳು ಇವೆ, ಮತ್ತು ಭದ್ರತಾ ಪಡೆಗಳು ಈಗ ಕಟ್ಟಡದೊಳಗೆ ಅಡಗಿರುವ ಶತ್ರುಗಳೊಂದಿಗೆ ಹೋರಾಡುತ್ತಿದ್ದಾರೆ" ಎಂದು ಹಾಸನ ಹೇಳಿದರು. ಹಯಾತ್ ಹೋಟೆಲ್‌ಗಳು ಪ್ರದೇಶದಲ್ಲಿ ಜನಪ್ರಿಯ ಸ್ಥಳವಾಗಿದೆ ಮತ್ತು ಇದು ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕರಿಂದ ತುಂಬಿರುತ್ತದೆ.

ಎರಡು ಕಾರ್ ಬಾಂಬ್‌ಗಳ ಮೂಲಕ ದಾಳಿ

ಎರಡು ಕಾರ್ ಬಾಂಬ್‌ಗಳ ಮೂಲಕ ದಾಳಿ

ದಾಳಿಯನ್ನು ತಡೆಯುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವಕ್ತಾರರನ್ನು ಉಲ್ಲೇಖಿಸಿ ಸರ್ಕಾರಿ ಸೊಮಾಲಿ ರಾಷ್ಟ್ರೀಯ ಸುದ್ದಿ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಎರಡು ಕಾರ್ ಬಾಂಬ್‌ಗಳ ಮೂಲಕ ಹೋಟೆಲ್ ಹಯಾತ್ ಮೇಲೆ ದಾಳಿ ಮಾಡಲಾಗಿದೆ. ಹೋಟೆಲ್ ಮೇಲಿನಿಂದ ದಟ್ಟ ಹೊಗೆ ಆವರಿಸಿರುವ ಫೋಟೋವನ್ನು ಏಜೆನ್ಸಿ ಪೋಸ್ಟ್ ಮಾಡಿದೆ.

13 ಅಲ್-ಶಬಾಬ್ ಉಗ್ರರ ಹತ್ಯೆ

13 ಅಲ್-ಶಬಾಬ್ ಉಗ್ರರ ಹತ್ಯೆ

ಈ ವಾರದ ಆರಂಭದಲ್ಲಿ, ಯುನೈಟೆಡ್ ಸ್ಟೇಟ್ಸ್‌ನ ಪಡೆಗಳು 13 ಅಲ್-ಶಬಾಬ್ ಹೋರಾಟಗಾರರನ್ನು ದೇಶದ ಮಧ್ಯ-ದಕ್ಷಿಣ ಭಾಗದಲ್ಲಿ ವೈಮಾನಿಕ ದಾಳಿಯಲ್ಲಿ ಕೊಂದಿವೆ ಎಂದು ಘೋಷಿಸಿತು. ಇತ್ತೀಚಿನ ವಾರಗಳಲ್ಲಿ US ಪಡೆ ಉಗ್ರರ ಮೇಲೆ ಹಲವಾರು ವೈಮಾನಿಕ ದಾಳಿಗಳನ್ನು ಮಾಡಿದೆ. ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಮೇನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಶುಕ್ರವಾರದ ದಾಳಿಯು ಮೊದಲ ಪ್ರಮುಖ ದಾಳಿಯಾಗಿದೆ.

English summary
At least 8 people were killed after a hotel in Somalia's capital city Mogadishu was taken over by a terrorist group Al-Shabab, not so long after the group claimed responsibility for two car bomb blasts and gunfire in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X