ಫ್ರಾನ್ಸ್‌ನಲ್ಲಿ ಚರ್ಚ್‌ಗೆ ನುಗ್ಗಿದ ಶಂಕಿತ ಉಗ್ರರು

ಪ್ಯಾರಿಸ್, ಜುಲೈ 26 : ಫ್ರಾನ್ಸ್ ಚರ್ಚ್ ಮೇಲೆ ದಾಳಿ ಮಾಡಿ ಒತ್ತೆಯಾಳುಗಳನ್ನಾಗಿ ಜನರನ್ನು ಇರಿಸಿಕೊಂಡಿದ್ದ ಇಬ್ಬರು ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ.

ಉತ್ತರ ಫ್ರಾನ್ಸ್ ನ ರೊಯೆನ್ ನ ಚರ್ಚ್ ಮೇಲೆ ದಾಳಿ ಮಾಡಿದ ಉಗ್ರರು ಅನೇಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಆದರೆ ಸೇನಾಪಡೆ ಮತ್ತು ಶಂಕಿತ ಉಗ್ರರ ನಡುವಿನ ಹೋರಾಟದಲ್ಲಿ ಒಬ್ಬ ಒತ್ತೆಯಾಳು ಸಹ ಮೃತಪಟ್ಟಿದ್ದಾನೆ.[ಫ್ರಾನ್ಸ್ ನಲ್ಲಿ ಲಾರಿ ಹರಿಸಿ 77 ಜನರ ಭೀಕರ ಹತ್ಯೆ]

Terror hits France again: both armed men killed

ಮಾರಕಾಸ್ತ್ರಗಳನ್ನು ಹಿಡಿದ ಉಗ್ರರು ಚರ್ಚೆ ಗೆ ನುಗ್ಗಿ ಅಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಸೇಂಟ್ ಎಟಿನ್ ಡು ರುವರಿ ಚರ್ಚ್ ನಲ್ಲಿ ಆರು ಜನರನ್ನು ಉಗ್ರರು ಒತ್ತೆಯಿಸಿಕೊಂಡಿದ್ದರು ಎಂದು ಹೇಳಲಾಗಿದೆ.[ಐಎಸ್ಐಎಸ್ ಅಟ್ಟಹಾಸ: ಕತ್ತು ಕೊಯ್ದು 20 ವಿದೇಶಿಗರ ಹತ್ಯೆ]

ಜುಲೈ 14 ರಂದು ಫ್ರಾನ್ಸ್‌ನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಲಾರಿ ಹತ್ತಿಸಿ ವ್ಯಕ್ತಿಯೊಬ್ಬ 84 ಜನರನ್ನು ಹತ್ಯೆ ಮಾಡಿದ್ದ. ಅದಾದ ಕೆಲವೇ ದಿನದಲ್ಲಿ ಮತ್ತೊಮ್ಮೆ ಉಗ್ರರ ಸದ್ದು ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+