ಬಾರ್ಸಿಲೋನಾದಲ್ಲಿ ಉಗ್ರರ ಅಟ್ಟಹಾಸ: 2 ಸಾವು

Posted By:
Subscribe to Oneindia Kannada

ಮ್ಯಾಡ್ರಿಡ್, ಆಗಸ್ಟ್ 17: ಸ್ಪೇನ್ ನ ರಾಜಧಾನಿಯಾದ ಬಾರ್ಸಿಲೋನಾದ ಮಧ್ಯ ಭಾಗದಲ್ಲಿರುವ ಪ್ಲಾಕಾ ಕ್ಯಟಲೂನ್ಯದಲ್ಲಿ ನೆರೆದಿದ್ದ ಜನ ಸಮೂಹದ ಮೇಲೆ ಏಕಾಏಕಿ ಟ್ರಕ್ ನುಗ್ಗಿಸಿದ ಉಗ್ರರು 13 ಜನರ ಸಾವಿಗೆ ಕಾರಣವಾಗಿದ್ದಾರೆ. ಇನ್ನು ಈ ಘಟನೆಯಲ್ಲಿ 100 ಜನರು ಗಾಯಗೊಂಡಿದ್ದಾರೆ.

ಹಳೆಯ ಮತ್ತು ಹೊಸ ಬಾರ್ಸಿಲೋನಾಗಳು ಸಂಧಿಸುವ ಈ ಸ್ಥಳವು ಈ ದೇಶಕ್ಕೆ ಪ್ರವಾಸಿಗರಾಗಿ ಆಗಮಿಸುವ ಅನೇಕರಿಗೆ ಮೆಚ್ಚಿನ ತಾಣ. ಬಾರ್ಸಿಲೋನಕ್ಕೆ ಬಂದವರು ಇಲ್ಲಿಗೆ ಬರದೇ ಹೋಗುವುದಿಲ್ಲ.

Terror attack in Central Barcelona: Two dead

ಹಾಗೆಯೇ, ಟ್ರಕ್ ಹರಿದಾಗ ಇಲ್ಲಿ ನೂರಾರು ಸಂಖ್ಯೆಯ ಪ್ರವಾಸಿಗರೊಡನೆ ಸ್ಥಳೀಯರೂ ಇದ್ದರೆಂದು ಹೇಳಲಾಗಿದೆ. ಘಟನೆ ತಿಳಿಯುತ್ತಲೇ ಸೇನೆ ಹಾಗೂ ಪೊಲೀಸರು ಘಟನಾ ಸ್ಥಳವನ್ನು ಸುತ್ತುವರಿದಿವೆ. ವ್ಯಾನ್ ನ ಚಾಲಕ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧ ಮುಂದುವರಿದಿದೆ.

ಇತ್ತೀಚಿನ ವರ್ಷಗಳಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಹೀಗೆ ಜನ ಸಮೂಹಗಳ ಮೇಲೆ ಟ್ರಕ್ ಹರಿಸಿ ಅನೇಕರ ಸಾವಿಗೆ ಕಾರಣವಾಗುವ ಉಗ್ರರ ಕುಕೃತ್ಯಗಳು ಮುಂದುವರಿದೇ ಇವೆ.

ಇತ್ತೀಚೆಗೆ, ಫ್ರಾನ್ಸ್ ನ ನೈಸ್ ನಲ್ಲಿ ಇತ್ತೀಚೆಗೆ ಹೀಗೆಯೇ ಜನರ ಮೇಲೆ ಏಕಾಏಕಿ ಟ್ರಕ್ ಹರಿಸಿದ್ದಾಗ ಸುಮಾರು 100 ಜನರು ಸಾವಿಗೀಡಾಗಿದ್ದರು. ಇದಾದ ನಂತರ, ಬರ್ಲಿನ್, ಲಂಡನ್ ಹಾಗೂ ಸ್ಟಾಕ್ ಹೋಮ್ ಗಳಲ್ಲೂ ಇಂಥ ಘಟನೆಗಳು ಮರುಕಳಿಸಿರುವುದು ಅಲ್ಲಿನ ಪೊಲೀಸರಿಗೆ ತಲೆನೋವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A van crashed into dozens of people in the centre of Barcelona on Thursday and several people were injured. This incident has recognised as terror act later.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X