ಪಾಪಿ ಪಾಕಿಸ್ತಾನ ವಿರುದ್ಧ ಮತ್ತೊಮ್ಮೆ ಯುದ್ಧ ಸಾರಲು ಭಾರತದ ಸೇನೆಯಿಂದ... India And Pakistan
ಭಾರತ ಮತ್ತು ಪಾಕಿಸ್ತಾನ ನಡುವೆ ಕೆಲವು ತಿಂಗಳ ಹಿಂದಷ್ಟೇ ಭೀಕರ ಯುದ್ಧ ಶುರುವಾಗಿತ್ತು. ಈ ಯುದ್ಧ ಪರಮಾಣು ಬಾಂಬ್ ಬಳಕೆ ಬಗ್ಗೆ ಕೂಡ ಆತಂಕ ಮೂಡಿಸಿತ್ತು. ಅದರಲ್ಲೂ ಭಾರತದ ವೀರ ಯೋಧರು ಪಾಪಿ ಪಾಕಿಸ್ತಾನಕ್ಕೆ ಕೊಟ್ಟಿದ್ದ ಒಂದೊಂದು ಏಟಿಗೂ ಪಾಕಿಸ್ತಾನ ನಲುಗಿತ್ತು. ಕೊನೆಗೆ ಅಮೆರಿಕದ ಕಾಲು ಹಿಡಿದು ಜೀವ ಉಳಿಸಿಕೊಂಡಿತ್ತು ಪಾಕಿಸ್ತಾನ. ಆದರೆ ಇದೀಗ ಮತ್ತೊಮ್ಮೆ ಭಾರತದ ನೆಲದಲ್ಲಿ, ಅದರಲ್ಲೂ ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಸ್ಫೋಟವಾಗಿದೆ. ಹೀಗಾಗಿ, ಯುದ್ಧ ಶುರುವಾಗುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಸ್ಫೋಟವು ಸಂಭವಿಸಿದ್ದು, ಈ ಸ್ಫೋಟದ ತೀವ್ರತೆ ಹಿನ್ನೆಲೆ ಭಾರಿ ದೊಡ್ಡ ಹಾನಿ ಉಂಟಾಗಿದೆ. ದಿಢೀರ್ ಕಾರಿನ ಒಳಗಡೆ ಸಂಭವಿಸಿದ ಈ ಸ್ಫೋಟದ ಪರಿಣಾಮ ಈವರೆಗೂ ಒಟ್ಟು 9 ಸಾವು, 24 ಮಂದಿಗೆ ಗಾಯವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಎಲ್ಲಾ ಕಡೆಯೂ ಹದ್ದಿನ ಕಣ್ಣು ಇಡಲಾಗಿದೆ. ಇದರ ಜೊತೆಯಲ್ಲೇ ಗಡಿ ಭಾಗದಲ್ಲಿ ಕೂಡ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ಈಗ ಮತ್ತೊಮ್ಮೆ ಯುದ್ಧ ಶುರುವಾಗುತ್ತಾ? ಎಂಬ ಚರ್ಚೆ ನಡೆಯುತ್ತಿದೆ.

ಪಾಕಿಸ್ತಾನಕ್ಕೆ ಮತ್ತೆ ಪೆಟ್ಟು ಬೀಳುವುದು ಗ್ಯಾರಂಟಿ?
ಹೌದು, ಉಗ್ರರನ್ನು ತಮ್ಮ ಜೊತೆಯಲ್ಲೇ ಸಾಕಿ ಭಾರತದ ವಿರುದ್ಧ ಕಳಿಸುವ ಬುದ್ಧಿ ಪಾಕಿಸ್ತಾನ & ಅಲ್ಲಿನ ರಾಜಕೀಯ ನಾಯಕರಿಗೆ ಇದೆ. ಅದರಲ್ಲೂ ಇದೀಗ ದೆಹಲಿಯಲ್ಲಿ ನಡೆದಿರುವ, ಭೀಕರ ಬಾಂಬ್ ಸ್ಫೋಟ ಭಾರಿ ಸಂಚಲನ ಸೃಷ್ಟಿಸಿದೆ. ಅಲ್ಲದೆ ಈ ಕೃತ್ಯದಲ್ಲಿ ಪಾಕಿಸ್ತಾನ ಕೂಡ ಕೈವಾಡ ಮಾಡಿದೆ ಎಂಬ ಆರೋಪವೂ ಕೇಳಿ ಬಂದಿದೆ. ಹೀಗಿದ್ದಾಗ ಮತ್ತೊಂದು ಯುದ್ಧದ ವಾತಾವರಣ ಸೃಷ್ಟಿಯಾಗುತ್ತಿದೆ...












Click it and Unblock the Notifications