ಫ್ಲೋರಿಡಾದಲ್ಲಿ ತೆಲಂಗಾಣ ವ್ಯಕ್ತಿಯ ಬರ್ಬರ ಹತ್ಯೆ
ಫ್ಲೋರಿಡಾ, ಫೆಬ್ರವರಿ 21: ಅಮೆರಿಕದ ಫ್ಲೋರಿಡಾದಲ್ಲಿ ತೆಲಂಗಾಣದ ವ್ಯಕ್ತಿಯೊಬ್ಬರನ್ನು ಮಂಗಳವಾರ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ಕಳೆದ ಏಳು ವರ್ಷಗಳಿಂದ ಅಮೆರಿಕದಲ್ಲಿ ವಾಸವಿದ್ದ ಕೋಟಾ ಗೋವರ್ಧನ್ ರೆಡ್ಡಿ ಎಂಬುವವರನ್ನು ಫ್ಲೋರಿಡಾದ ಡಿಪಾರ್ಟ್ಮೆಂಟಲ್ ಸ್ಟೋರ್ ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದ್ದು, ಅವರಿಗೆ 50 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.
ತೆಲಂಗಾಣದ ಯಾದಗಿರಿ ಜಿಲ್ಲೆಯವರಾದ ರೆಡ್ಡಿ ಪತ್ನಿ ಮತ್ತು ಇಬ್ಬರು ಮಗಳನ್ನು ಅಗಲಿದ್ದಾರೆ. ಆಫ್ರಿಕಲ್ ಅಮೆರಿಕನ್ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದಿದ್ದಾನೆಂದು ಹೇಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಕಳೆದ ಜನವರಿ 24 ರಂದು ಅಮೆರಿಕದ ಫ್ಲೋರಿಡಾದ ಬ್ಯಾಂಕ್ ವೊಂದರಲ್ಲಿ ನಡೆದ ಶೂಟೌಟ್ ನಲ್ಲಿ ಐವರು ಬಲಿಯಾಗಿದ್ದರು.
ವರ್ಷಾರಂಭದಲ್ಲಿ ಅಂದರೆ ಜನವರಿ 5 ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದ ಶೂಟೌಟ್ ನಲ್ಲಿ ಮೂವರು ಹತರಾಗಿದ್ದರು.
ಅದಕ್ಕೂ ಮುನ್ನ ಡಿಸೆಂಬರ್ 20 ರಂದು ಅಮೆರಿಕದ ಟಲ್ಸಾದ ವಾಲ್ ಗ್ರೀನ್ಸ್ ನಲ್ಲಿ ನಡೆದ ಶೂಟೌಟ್ ನಲ್ಲಿ ಶೂಟರ್ ಮೃತನಾದ ಘಟನೆ ನಡೆದಿತ್ತು. ನವೆಂಬರ್ 8 ರಂದು ಕ್ಯಾಲಿಫೋರ್ನಿಯಾದ ಥೌಸಂಡ್ ಓಕ್ಸ್ ನಗರದ ಮ್ಯೂಸಿಕ್ ಬಾರೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 13 ಜನರು ಸಾವಿಗೀಡಾಗಿದ್ದರು.












Click it and Unblock the Notifications