ರಷ್ಯಾದ ಶಾಲೆಯಲ್ಲಿ ಗುಂಡಿನ ದಾಳಿ, 9 ಮಂದಿ ಸಾವು, ಅಪ್ರಾಪ್ತ ಬಾಲಕನ ಬಂಧನ

ಮಾಸ್ಕೋ, ಮೇ 11: ರಷ್ಯಾದ ಕಜಾನ್ ನಗರದ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.

ಇನ್ನು, ದಾಳಿಕೋರರಲ್ಲಿ 17 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಇನ್ನೋರ್ವ ಅಪರಾಧಿ ಇನ್ನೂ ಕಟ್ಟಡದಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ.

ದಾಳಿಕೋರರು ಸ್ಫೋಟ ನಡೆಸುವ ಉದ್ದೇಶದಿಂದ ಶಾಲೆಗೆ ಹೊಕ್ಕು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.ಈಗಾಗಲೇ ಶಂಕಿತ ಒಬ್ಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಟು ಮಕ್ಕಳು ಹಾಗೂ ಓರ್ವ ಶಿಕ್ಷಕ ದಾಳಿಗೆ ಬಲಿಯಾಗಿದ್ದಾರೆ.

Teen Arrested After Deadly School Shooting In Kazan, Russia

ಉಳಿದಂತೆ ಗಾಯಗೊಂಡ 10 ಜನರಲ್ಲಿ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

ರಷ್ಯಾದ ಶಾಲೆಗಳಲ್ಲಿ ಗುಂಡಿನ ದಾಳಿ ನಡೆಯುವುದು ಅಪರೂಪ, ಆದರೆ ವಿದ್ಯಾರ್ಥಿಗಳೇ ಶಾಮೀಲಾದ ಗುಂಡಿನ ದಾಳಿ, ಸಹಪಾಠಿಗಳ ಕೊಲೆಯಂತಹ ಘಟನೆಗಳು ಆಗಾಗ ನಡೆಯುತ್ತಿವೆ. ಟಾಟರ್ಸ್ತಾನ ಗಣರಾಜ್ಯದ ಕಜಾನ್ ನಗರದ ಕ್ರಮಸಂಖ್ಯೆ 175ನೇ ಶಾಲೆಯಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮೂಲಗಳು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+