ಅಫ್ಘಾನಿಸ್ತಾನ: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಕಡ್ಡಾಯ!
ಕಾಬೂಲ್, ಮೇ 08: ಆಕ್ರಮಿತವಾಗಿ ಅಧಿಕಾರದಲ್ಲಿರುವ ತಾಲಿಬಾನ್ ಸರ್ಕಾರವು ಮಹಿಳೆಯರಿಗೆ ತಾಲಿಬಾನ್ ಕಠಿಣ ನಿರ್ಬಂಧನೆಯನ್ನು ಹೊರಡಿಸಿದೆ. ಅಫ್ಘಾನಿಸ್ತಾನಿನ ಮಹಿಳೆಯರಿಗೆ, ಯುವತಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸೇರಿದಂತೆ ದಿನನಿತ್ಯದ ಜೀವನದಲ್ಲಿ ಕಡ್ಡಾಯವಾಗಿ ಬುರ್ಖಾ ಧರಿಸಲು ಕಠಿಣ ಆದೇಶ ಜಾರಿಗೆ ಮಾಡಿದೆ.
2001 ನಂತರ 20 ವರ್ಷಗಳ ನಂತರ ಆಕ್ರಮಿತವಾಗಿ ಅಧಿಕಾರವನ್ನು ತನ್ನ ವಶದಲ್ಲಿಟ್ಟಿಕೊಂಡಿರುವ ತಾಲಿಬಾನ್ ಸರ್ಕಾರವು ಶನಿವಾರ ತಾವು ಈ ಮೊದಲು ನಡೆಸಿಕೊಂಡ ಬಂದಿರುವ ಆಡಳಿತಗಿಂತ ಸ್ಪಲ್ಪ ಮೃದವಾದ ಆಡಳಿತವನ್ನು ಮುನ್ನೆಡೆಸುತ್ತೇವೆಂದು ತಾಲಿಬಾನ್ ಉಗ್ರಗಾಮಿಗಳ ಸರ್ಕಾರ ಹೇಳಿಕೊಂಡಿದೆ.
ಪ್ರತಿ ಮಹಿಳೆಯರು ಕಡ್ಡಾಯವಾಗಿ ಮೈ ಪೂರ್ತಿ ಮುಚ್ಚಿಕೊಳ್ಳುವ ಬುರ್ಖಾ ಧರಿಸಬೇಕು ಎಂದಿರುವ ತಾಲಿಬಾನ್ ಸರ್ಕಾರದ ನಿಯಮಗಳು ಮಾನವ ಹಕ್ಕುಗಳು ಹಾಗೂ ಮಹಿಳಾ ಹಕ್ಕುಗಳ ಉಲ್ಲಂಘಿಸಿರುವ ಪ್ರಾಬಲ್ಯವನ್ನು ತಾಲಿಬಾನ್ ಹೊಂದಿದೆ.

ಅಫ್ಘಾನಿಸ್ತಾನ ದೇಶದ ಸುತ್ತಲೂ ಮಹಿಳೆಯರಿಗೆ ತಾಲಿಬಾನಿಗಳು ಹಲವಾರು ನಿರ್ಬಂಧಗಳನ್ನು ಹೇರಿದ್ದಾರೆ. ಶಾಲೆಗಳಲ್ಲಿ ಬುರ್ಖಾ ಧರಿಸಿಕೊಂಡು ಬರಬೇಕು, ಕಾಲೇಜುಗಳಲ್ಲಿ ಸಹಪಾಠಿಯಾದರೂ ಅಂತಹ ಪುರಷನ ಜೊತೆಗೆ ಯುವತಿಯರು ಜೊತೆಗೆ ಓಡಾಡಬಾರದು, ಜೊತೆಗೆ ಕೂಡಬಾರದು, ಮಾರುಕಟ್ಟೆಗಳಲ್ಲಿ ಒಂಟೆಯಾಗಿ ಮಹಿಳೆ ಹಾಗೂ ಯುವತಿಯರು ಬುರ್ಖಾ ಇಲ್ಲದೆ ಹೊರಗೆ ಬರಬಾರದು, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಉದ್ಯೋಗಕ್ಕೆ ಹೊರಗೆ ಹೊಗುವ ಮಹಿಳೆಯರು ಹಾಗೂ ನಗರಗಳಲ್ಲಿ ಒಂಟಿಯಾಗಿ ಬಂದರೆ ಬುರ್ಖಾ ಹಾಕಿಕೊಂಡು ಇರಬೇಕೆಂದು ತಾಲಿಬಾನ್ ಹೇಳಿದೆ.

ಶನಿವಾರ ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕ ಮತ್ತು ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡಜಾದ ಸಾರ್ವಜನಿಕವಾಗಿ ಅಫ್ಘಾನಿಸ್ತಾನನ ಮಹಿಳೆಯರಿಗೆ ಕಟ್ಟುನಿಟ್ಟಾದ ವಸ್ತ್ರಸಂಹಿತೆ ಬುರ್ಖಾ ಕಡ್ಡಾಯ ಎಂದು ಘೋಷಿಸಿದರು. ತಲೆಯಿಂದ ಕಾಲ ಕೆಳಗಡೆವರಿಗೂ ಬುರ್ಖಾ ಧರಿಸಬೇಕು ಏಕೆಂದರೆ ಅದು ಸಾಂಪ್ರದಾಯಿಕ ಮತ್ತು ಗೌರವಾನ್ವಿತವಾಗಿದೆ ಎಂದು ಕಾಬೂಲ್‌ನಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.

"ಮಹ್ರಮ್ ಅಲ್ಲದ (ವಯಸ್ಕ ನಿಕಟ ಪುರುಷ ಸಂಬಂಧಿಗಳು) ಪುರುಷರನ್ನು ಭೇಟಿಯಾದಾಗ ಪ್ರಚೋದನೆಯನ್ನು ತಪ್ಪಿಸಲು ಷರಿಯಾ ನಿರ್ದೇಶನಗಳ ಪ್ರಕಾರ ಹೆಚ್ಚು ವಯಸ್ಸಾದ ಅಥವಾ ಚಿಕ್ಕ ವಯಸ್ಸಿನ ಮಹಿಳೆಯರು ತಮ್ಮ ಕಣ್ಣುಗಳನ್ನು ಹೊರತುಪಡಿಸಿ ಮುಖವನ್ನು ಮುಚ್ಚಬೇಕು, ಹೆಣ್ಣು ಮಕ್ಕಳ ಶಿಕ್ಷಣವು ಇಸ್ಲಾಮಿಕ್ ತತ್ವಗಳ ಪ್ರಕಾರವಾಗಿರಬೇಕು ಹೀಗೆ ಅನೇಕ ನಿರ್ಬಂಧನೆಗಳನ್ನು ಅಫ್ಘಾನಿಸ್ತಾನ ದೇಶದ ಮಹಿಳೆಯರಿಗೆ ಹೇರಲಾಗಿದೆ.












Click it and Unblock the Notifications